ಶಿಕ್ಷಣ ಸಚಿವರ ತವರಿನಲ್ಲಿಯೇ ದಲಿತ ಶಿಕ್ಷಕರು ಸೇರಿದಂತೆ ತಳ ಸಮುದಾಯದ ಶಿಕ್ಷಕರು ಜಾತಿ ವಿಷಯದಲ್ಲಿ ಪ್ರತಿದಿನವೂ ಮೇಲ್ವರ್ಗದ ಜಾತಿಯ ಸರ್ಕಾರಿ ಶಿಕ್ಷಕರಿಂದ ತುಳಿತಕ್ಕೆ ಹಾಗೂ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ.

ಮುಂದಿನ ವರ್ಷದಲ್ಲಿ ಸರ್ಕಾರಿ ನೌಕರರ ಸಂಘದ ಚುನಾವಣೆ ನಡೆಯುತ್ತಿದ್ದು ಚುನಾವಣೆಯ ವಿಚಾರವಾಗಿ ಶಿರಾ ತಾಲೂಕಿನ ಪದ್ಮಾಪುರ ಸರ್ಕಾರಿ ಶಾಲೆಯ ಶಿಕ್ಷಕ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಕಾರ್ಯದರ್ಶಿ ಕೆ ಸಿ ಜೀವನ್ ಪ್ರಕಾಶ್ ಮತ್ತೊರ್ವ ಶಿಕ್ಷಕನ ಬಳಿ ಮಾತನಾಡುವಾಗ ಬೆಳ್ಳಗೆ ಇರುವ ಮಾದಿಗರೆಲ್ಲ ಕ್ರಾಸ್ ಬ್ರೀಡ್ ಎಂದು ಹೇಳಿಕೊಂಡಿದ್ದಾನೆ.
ಮುಂದುವರೆದು ಮಾದಿಗ ಅಧಿಕಾರಿಗಳು ಶಿರಾ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸಲು ಬಿಡಲ್ಲ ಎಂದೂ ಮಾತನಾಡಿದ್ದಾನೆ.

ಈತ ಕಾರ್ಯನಿರ್ವಹಿಸುತ್ತಿರುವುದು ಸರ್ಕಾರಿ ಶಾಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಅಧಿಕವಾಗಿ ದಲಿತರ ಮಕ್ಕಳೇ ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ ಅಂತಹ ಮಕ್ಕಳಿಗೆ ಬೋಧಿಸಿ ಸಂಬಳ ಪಡೆಯುತ್ತಿರುವ ಈತನು ಅವರ ಜಾತಿಯವರನ್ನೇ ನಿಂದಿಸಿರುವುದು ನಿಜಕ್ಕೂ ನಾಚಿಕೆಗೇಡಿನ ವಿಚಾರ.
ಅವರಿಗೋಸ್ಕರ ಕೆಲಸ ಮಾಡಿ ಅವರಿಂದಲೇ ಅನ್ನ ತಿಂದು ಆ ಜಾತಿಯವರನ್ನೇ ಕ್ರಾಸ್ ಬ್ರೀಡ್ ಎಂದು ಹೇಳುತ್ತಿದ್ದಾನೆ ಎಂದರೆ ಇವನಿಗೆ ಯಾವ ಅಧಿಕಾರಿಗಳ ಭಯವಿಲ್ಲವೇ?
ಶಿರಾ ತಾಲ್ಲೂಕಿನ ಬಿಇಓ ಹಾಗೂ ಬಿ ಆರ್ ಸಿ ಅಧಿಕಾರಿಗಳು ಮಾದಿಗ ಸಮುದಾಯಕ್ಕೆ ಸೇರಿದ್ದರೂ ಕ್ರಮ ಕೈಗೊಂಡಿಲ್ಲ.
ಈ ಶಿಕ್ಷಕ ಈ ರೀತಿ ಮಾತನಾಡಿದರು ಅಂತಹ ಆಡಿಯೋಗಳು ವಾಟ್ಸಾಪ್ ಗಳಲ್ಲಿ ಹರಿದಾಡುತ್ತಿವೆ ಆದರೂ ಸಹ ಈತನ ವಿರುದ್ಧ ಆಟಾರ್ಸಿಟಿ ಕೇಸ್ ದಾಖಲಾಗದಿರಲು ಕಾರಣವೇನು?
ನಿಜಕ್ಕೂ ಈ ವಿಚಾರಗಳ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ಇಲ್ಲವೇ ಅಥವಾ ಕೆಳಸಮುದಾಯದ ಜಾತಿಯ ಬಗ್ಗೆ ಮಾತನಾಡಿದ್ದಾನೆ ಎಂದೇನಾದರೂ ಮೇಲಾಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರಾ?
ಕೂಡಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸದರಿ ಶಿಕ್ಷಕನ ವಿರುದ್ದ ಎಸ್.ಸಿ/ಎಸ್.ಟಿ ದೌರ್ಜನ್ಯ ಕಾಯಿದೆಯಡಿ ದೂರು ದಾಖಲಿಸಿಕೊಳ್ಳಬೇಕೆಂದು ಭ್ರಷ್ಟರ ಬೇಟೆ ಪತ್ರಿಕೆಯ ಆಗ್ರಹ.

1 thought on “ಮಾದಿಗರು ಕ್ರಾಸ್ ಬ್ರೀಡ್(ಬೆರಕೆ ತಳಿ) ಎಂದ ಶಿಕ್ಷಕ; ಲೀಕ್ ಆಯ್ತು ಆಡಿಯೋ.

Comments are closed.

error: Content is protected !!