ತಮಿಳು ಚಿತ್ರರಂಗಕ್ಕಂತೂ ವನಿತಾ ವಿಜಯ್ಕುಮಾರ್ ತುಂಬಾನೇ ಚಿರಪರಿಚಿತ. ವನಿತಾ ವಿಜಯಕುಮಾರ್ ತಮಿಳಿನ ಜನಪ್ರಿಯ ಹಿರಿಯ ನಟ ವಿಜಯಕುಮಾರ್ ಅವರ ಪುತ್ರಿ. ಈಕೆ ಕೂಡ ತಂದೆಯ ಹಾದಿಯಲ್ಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ವನಿತಾ ವಿಜಜ್ಕುಮಾರ್ ಹಲವು ಸಿನಿಮಾಗಳಿಗೆ ನಾಯಕಿಯಾಗಿಯೂ ಕಾಣಿಸಿಕೊಂಡಿದ್ದರು.
ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ ಬಳಿಕ ಅವರು ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು. ಸಿನಿಮಾ, ಕಿರುತೆರೆಯಲ್ಲಿ ಸಕ್ರಿಯರಾಗಿದ್ದರೂ, ನಟನೆಗಿಂತ ಹೆಚ್ಚು ವಿವಾದಗಳಿಂದ ಸುದ್ದಿಯಲ್ಲಿದ್ದಾರೆ. ವನಿತಾ ವಿಜಯಕುಮಾರ್ ತನ್ನ ಕುಟುಂಬದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿಲ್ಲ. ತನ್ನ ಮಗಳ ವೈಯಕ್ತಿಕ ಬದುಕಿನ ನಿರ್ಧಾರಗಳಿಂದ ತಂದೆ ವಿಜಯಕುಮಾರ್ ಮತ್ತು ಆಕೆಯ ಸಹೋದರ ಅರುಣ್ ವಿಜಯ್ ಈ ನಟನಿಂದ ದೂರವೇ ಉಳಿಸಿದ್ದಾರೆ. ಈಕೆ ಕೂಡ ತನ್ನ ಕುಟುಂಬದಿಂದ ದೂರವೇ ಇದ್ದಾರೆ ಎಂದು ಹೇಳಲಾಗುತ್ತಿದೆ. ಎಷ್ಟೋ ಬಾರಿ ತಂದೆಯ ವಿರುದ್ಧವೇ ಮಾತಾಡಿದ್ದಾರೆ. ಅಲ್ಲದೆ, ಈಕೆಯ ದಾಂಪತ್ಯ ಜೀವನ ಕೂಡ ಅಸ್ತವ್ಯಸ್ತವಾಗಿದೆ.
ವನಿತಾ ವಿಜಯಕುಮಾರ್ ಎರಡು ಬಾರಿ ವಿವಾಹವಾಗಿದ್ದರು. ಆದರೆ, ಈಕೆಯ ಎರಡೂ ಮದುವೆಗಳು ತುಂಬಾ ಕೆಟ್ಟದಾಗಿ ಅಂತ್ಯಗೊಂಡಿವೆ. ಒಮ್ಮೆ ನೃತ್ಯ ನಿರ್ದೇಶಕ ರಾಬರ್ಟ್ ಮಾಸ್ಟರ್ ಜೊತೆ ಪ್ರೀತಿಯಲ್ಲಿದ್ದರು. ಆದರೆ, ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಇಬ್ಬರೂ ತಮ್ಮ ಸಂಬಂಧವನ್ನು ಜಗಳದಲ್ಲಿಯೇ ಅಂತ್ಯಗೊಳಿಸುತ್ತಾರೆ. ಬಳಿಕ ಪೀಟರ್ ಪಾಲ್ ಜೊತೆ ವಿವಾಹವಾದರೂ, ಅದು ಕೂಡ ಬೇಗನೇ ಕೊನೆ ಆಯ್ತು.
ಸಿನಿಮಾಗಳಿಂದ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ಜನಪ್ರಿಯ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಬಿಗ್ ಬಾಸ್ಗೆ ಎಂಟ್ರಿ ಕೊಟ್ಟಿದ್ದರು. ಅಲ್ಲೂ ವಿವಾದಗಳನ್ನೇ ಸೃಷ್ಟಿಸಿ ಹೆಸರು ಗಳಿಸಿದ್ರು. ಬಿಗ್ ಬಾಸ್ನಿಂದ ಹೊರ ಬರುತ್ತಿದ್ದಂತೆ ವನಿತಾ ವಿಜಯ್ಕುಮಾರ್ ಯೂಟ್ಯೂಬ್ ಚಾನೆಲ್ಗಳಲ್ಲಿ ನಿರೂಪಕಿ ಕಾಣಿಸಿಕೊಂಡರು. ವನಿತಾ ನಿರೂಪಕಿಯಾಗಿ ಯಶಸ್ಸು ಗಳಿಸಿದ್ದಾರೆ. ಈಕೆ ಸ್ಟಾರ್ ನಟ, ನಟಿಯನ್ನು ಬೇರೆ ಬೇರೆ ಚಾನೆಲ್ಗಳಲ್ಲಿ ಸಂದರ್ಶನ ಮಾಡಿದ್ದಾರೆ. ಇಷ್ಟೆ ಅಲ್ಲದೆ ನಟನೆಯಲ್ಲಿಯೂ ವನಿತಾ ವಿಜಯ್ಕುಮಾರ್ ಸಕ್ರಿಯರಾಗಿದ್ದಾರೆ. ಇದೀಗ ನೃತ್ಯ ನಿರ್ದೇಶಕ, ನಟ ಹಾಗೂ ನಿರ್ದೇಶಕ ಪ್ರಭುದೇವ ಬಗ್ಗೆ ವನಿತಾ ವಿಜಯ್ಕುಮಾರ್ ಇಂಟ್ರೆಸ್ಟಿಂಗ್ ವಿಷಯಗಳನ್ನು ಹೊರ ಹಾಕಿದ್ದಾರೆ.
“ನಾನು ಪ್ರಭುದೇವ ಅವರನ್ನು ಹುಚ್ಚನಂತೆ ಪ್ರೀತಿಸುತ್ತಿದ್ದೆ. ಅವರ ಪ್ರತಿಯೊಂದು ಸಿನಿಮಾ ಬಂದಾಗಲೂ ಎಲ್ಲಾ ಸುದ್ದಿಗಳನ್ನು ಹಾಗೂ ಫೋಟೊಗಳನ್ನು ಸಂಗ್ರಹಿಸಿ ಇಡುತ್ತಿದ್ದೆ. ಅದು ನನ್ನ ಕೋಣೆಯಲ್ಲಿ ರಾರಾಜಿಸುತ್ತಿತ್ತು. ನನ್ನ ಕನಸಿನಲ್ಲಿ ನಾನು ಪ್ರಭುದೇವ ಜೊತೆ ನಗ್ಮಾ ಆಗಿ ಹೆಜ್ಜೆ ಹಾಕುತ್ತಿದ್ದೆ. ನಾನು ಪ್ರಭುದೇವರನ್ನು ಇಷ್ಟು ಪಡುತ್ತಿದ್ದದ್ದನ್ನು ನೋಡಿ ನನ್ನ ತಂದೆ ಅವರನ್ನೇ ಮನೆಗೆ ಕರೆದುಕೊಂಡು ಬಂದಿದ್ದರು.” ಎಂದು ವನಿತಾ ವಿಜಯ್ಕುಮಾರ್ ಹೇಳಿದ್ದಾರೆ. “ಪ್ರಭುದೇವ ಬರುತ್ತಾರೆಂದು ತಿಳಿದು ಹಿರಿ ಹಿರಿ ಹಿಗ್ಗಿದ್ದೆ. ಅವರಿಗಾಗಿ ಮಾಂಸಾಹಾರದ ಅಡುಗೆಯನ್ನು ತಯಾರಿಸಿದ್ದೆ. ಆದರೆ, ಅವರು ಮಾಂಸಾಹಾರ ಸೇವಿಸುವುದಿಲ್ಲ ಎಂದರು. ಆ ವಿಷಯವನ್ನು ಕೇಳಿ ನನಗೆ ಶಾಕ್ ಆಗಿತ್ತು. ಅದನ್ನು ತೋರಿಸಿಕೊಳ್ಳದೆ ಅವರಿಗೆ ಮೊಟ್ಟೆಯನ್ನು ಬೇಯಿಸಿ ಬಡಿಸಿದೆ. ಅಲ್ಲದೆ ಕೆಲವು ದಿನಗಳವರೆಗೆ ನಾನು ಕೂಡ ಮಾಂಸಾಹಾರವನ್ನು ಸೇವಿಸುತ್ತಿರಲಿಲ್ಲ” ಎಂದು ಹೇಳಿವ ಮೂಲಕ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.