
ಧಾರವಾಡ: ಪಾಪಿ ಮೈದುನೊಬ್ಬ ಅತ್ತಿಗೆಯ ಮೇಲೆ ಹಲ್ಲೆ ಮಾಡಿ ಅತ್ಯಾಚಾರಕ್ಕೆ ಯುತ್ನಸಿದ ಪರಿಣಾಮ ಮಹಿಳೆ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾದ ಘಟನೆ ಕುಂದಗೋಳ ತಾಲೂಕಿನ ಹೊಸಕಟ್ಟಿ ಗ್ರಾಮದಲ್ಲಿ ನಡೆದಿದೆ.
ಕುಂದಗೋಳ ತಾಲೂಕಿನ ಹೊಸಕಟ್ಟಿ ಗ್ರಾಮದ ನಿವಾಸಿ ರಮೇಶ್ ಮೇಗುಂಡಿ, ವಿವಾಹಿತನಾಗಿದ್ದರೂ ಭಾನುವಾರ ಮುಂಜಾನೆ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ತನ್ನ ಅತ್ತಿಗೆ ಸವಿತಾ ಬಸಪ್ಪಳ ಮನೆಗೆ ನುಗ್ಗಿ ನಿನ್ನು ಬಂಜೆಯಾಗಿದ್ದು, ನನ್ನ ಜೊತೆ ಸಹಕರಿಸು ಎಂದು ಕೋರಿದ್ದಾನೆ, ಅಸಭ್ಯವಾಗಿ ವರ್ತಿಸಿದ್ದಾನೆ. ಆದರೆ, ಸವಿತಾ ಇದನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಕೋಪಗೊಂಡ ರಮೇಶ್, ಆಕೆಯನ್ನು ಬಲವಂತವಾಗಿ ಹಿಡಿದುಕೊಂಡು ಮುಖ, ಎದೆ ಹಾಗೂ ಗಲ್ಲದ ಭಾಗಗಳಲ್ಲಿ ಕಚ್ಚಿ, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಈ ಘಟನೆ ನಂತರ, ಸವಿತಾ ಹೇಗೋ ತಪ್ಪಿಸಿಕೊಂಡು ಮನೆಯಿಂದ ಹೊರಬಂದು ನೆರವಿಗಾಗಿ ಅಳಲು ಕೂಗಿದ್ದಾಳೆ. ಅವಳ ದನಿಗೆ ಅಕ್ಕಪಕ್ಕದ ಜನರು ಓಡೋಡಿ ಬಂದು ತಕ್ಷಣವೇ ಗಾಯಗೊಂಡಿದ್ದ ಸವಿತಾಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಸ್ತುತ ಸವಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಕುರಿತು ಕುಂದಗೋಳ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನೆಯ ಬಳಿಕ ಆರೋಪಿಯಾದ ರಮೇಶ್ ಪರಾರಿಯಾಗಿದ್ದಾನೆ. ಪೊಲೀಸರಿಂದ ಆರೋಪಿ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಸಿಪಿಐ ಶಿವಾನಂದ ಅಂಬಿಗೇರ ತಿಳಿಸಿದ್ದಾರೆ.