ಗುಜರಾತ್‌ನ ಪೋರಬಂದರ್‌ನ ವ್ಯಕ್ತಿಯೊಬ್ಬ ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ನಲ್ಲಿ ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದ. ನಂತರ ಅವರು ಮದುವೆಯೂ ಆಗಿದ್ದರು. ಮದುವೆಯಾದ ಕೇವಲ ಆರು ತಿಂಗಳೊಳಗೆ, ಅವನಿಗೆ ತನ್ನ ಹೆಂಡತಿ ಮೋಸ್ಟ್ ವಾಂಟೆಡ್​ ಕ್ರಿಮಿನಲ್​ ಎನ್ನುವ ಕರಾಳ ಸತ್ಯ ತಿಳಿದು ಬಂದಿದೆ.
ಹೊರಗೆ ಹೋದ ರೀಟಾ ಅನೇಕ ದಿನಗಳು ಕಳೆದರೂ ಹಿಂತಿರುಗಲಿಲ್ಲ. ಬದಲಾಗಿ ವಿಮಲ್​ಗೆ ರೀಟಾಳ ವಕೀಲರಿಂದ ಕರೆ ಬಂದಿದೆ. ರೀಟಾ ವಿರುದ್ಧ ಪ್ರಕರಣ ದಾಖಲಾಗಿದ್ದು, 1 ಲಕ್ಷ ರೂಪಾಯಿ ಜಾಮೀನು ಹಣದಲ್ಲಿ ಆಕೆಗೆ ಸಹಾಯ ಮಾಡಬೇಕು ಎಂದು ವಕೀಲರು ತಿಳಿಸಿದರು. ಪ್ರಕರಣ ಗಂಭೀರವಾಗಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ. ಸರಿ ಎಂದುಕೊಂಡ ವಿಮಲ್, ರೀಟಾ ಅವರ ನ್ಯಾಯಾಲಯದ ಪತ್ರಗಳನ್ನು ನೋಡಿದಾಗ ಅವರ ಮದುವೆ ಸುಳ್ಳಿನ ಮೇಲೆ ನಿರ್ಮಿಸಲ್ಪಟ್ಟಿದೆ ಎಂದು ಕಂಡುಕೊಂಡರು. ಮೊದಲನೆಯದಾಗಿ, ಆಕೆಯ ಹೆಸರು ರೀಟಾ ದಾಸ್ ಅಲ್ಲ ಎನ್ನುವುದು ಅವರ ಗಮನಕ್ಕೆ ಬಂದಿದ್ದು ಆಕೆಯ ಅಸಲಿ ಹೆಸರು ರೀಟಾ ಚೌಹಾಣ್. ವಿಮಲ್ ತನ್ನ ಹೆಂಡತಿಯೊಂದಿಗೆ ಹೆಸರಿನ ಗೊಂದಲವನ್ನು ಸ್ಪಷ್ಟಪಡಿಸಲು ನಿರ್ಧರಿಸಿದ್ದ. ಆಗ ರೀಟಾ ಆತನ ಕರೆಗಳಿಗೆ ಉತ್ತರಿಸುವುದನ್ನು ನಿಲ್ಲಿಸಿ ಅವನನ್ನು ಬ್ಲಾಕ್​ ಮಾಡಿದ್ದಾಳೆ. ಆತನ ಪ್ರಶ್ನೆಗಳಿಗೆ ಅವಳಲ್ಲಿ ಯಾವುದೇ ಉತ್ತರಗಳು ಇರಲಿಲ್ಲ.
ಅಸಮಾಧಾನಗೊಂಡ ವ್ಯಕ್ತಿ ಗೂಗಲ್ ಅನ್ನು ಅವಲಂಬಿಸಲು ನಿರ್ಧರಿಸಿದಾಗ ಕೆಲವೇ ಸೆಕೆಂಡುಗಳಲ್ಲಿ ತನ್ನ ಹೆಂಡತಿ ವಂಚನೆ, ಕಳ್ಳತನ, ಕೊಲೆ ಮತ್ತು ಬೇಟೆಯ ಆರೋಪಗಳನ್ನು ಹೊಂದಿರುವ ಅಪರಾಧಿ ಎಂದು ಅವನು ಅರಿತುಕೊಂಡಿದ್ದಾನೆ. ಇಷ್ಟೇ ಅಲ್ಲದೇ, ಈ ಖತರ್ನಾಕ್​ ರೀಟಾ ಈ ಹಿಂದೆ ಅನಿಲ್ ಚೌಹಾಣ್ ಎಂಬ ಸರಣಿ ಕಾರು ಕಳ್ಳನನ್ನು ಮದುವೆಯಾಗಿದ್ದಳು. ಸದ್ಯ ಜೈಲಿನಲ್ಲಿರುವ ಅನಿಲ್​ನೊಂದಿಗೆ ತನಗೆ ಯಾವುದೇ ಸಂಪರ್ಕವಿಲ್ಲ ಎಂದು ರೀಟಾ ತಿಳಿಸಿದ್ದಾಳೆ.

error: Content is protected !!