ಗುಜರಾತ್‌ನ ಪೋರಬಂದರ್‌ನ ವ್ಯಕ್ತಿಯೊಬ್ಬ ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿ ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದ. ನಂತರ ಅವರು ಮದುವೆಯೂ ಆಗಿದ್ದರು. ಮದುವೆಯಾದ ಕೇವಲ ಆರು ತಿಂಗಳೊಳಗೆ, ಅವನಿಗೆ ತನ್ನ ಹೆಂಡತಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಎನ್ನುವ ಕರಾಳ ಸತ್ಯ ತಿಳಿದು ಬಂದಿದೆ.
ಹೊರಗೆ ಹೋದ ರೀಟಾ ಅನೇಕ ದಿನಗಳು ಕಳೆದರೂ ಹಿಂತಿರುಗಲಿಲ್ಲ. ಬದಲಾಗಿ ವಿಮಲ್ಗೆ ರೀಟಾಳ ವಕೀಲರಿಂದ ಕರೆ ಬಂದಿದೆ. ರೀಟಾ ವಿರುದ್ಧ ಪ್ರಕರಣ ದಾಖಲಾಗಿದ್ದು, 1 ಲಕ್ಷ ರೂಪಾಯಿ ಜಾಮೀನು ಹಣದಲ್ಲಿ ಆಕೆಗೆ ಸಹಾಯ ಮಾಡಬೇಕು ಎಂದು ವಕೀಲರು ತಿಳಿಸಿದರು. ಪ್ರಕರಣ ಗಂಭೀರವಾಗಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ. ಸರಿ ಎಂದುಕೊಂಡ ವಿಮಲ್, ರೀಟಾ ಅವರ ನ್ಯಾಯಾಲಯದ ಪತ್ರಗಳನ್ನು ನೋಡಿದಾಗ ಅವರ ಮದುವೆ ಸುಳ್ಳಿನ ಮೇಲೆ ನಿರ್ಮಿಸಲ್ಪಟ್ಟಿದೆ ಎಂದು ಕಂಡುಕೊಂಡರು. ಮೊದಲನೆಯದಾಗಿ, ಆಕೆಯ ಹೆಸರು ರೀಟಾ ದಾಸ್ ಅಲ್ಲ ಎನ್ನುವುದು ಅವರ ಗಮನಕ್ಕೆ ಬಂದಿದ್ದು ಆಕೆಯ ಅಸಲಿ ಹೆಸರು ರೀಟಾ ಚೌಹಾಣ್. ವಿಮಲ್ ತನ್ನ ಹೆಂಡತಿಯೊಂದಿಗೆ ಹೆಸರಿನ ಗೊಂದಲವನ್ನು ಸ್ಪಷ್ಟಪಡಿಸಲು ನಿರ್ಧರಿಸಿದ್ದ. ಆಗ ರೀಟಾ ಆತನ ಕರೆಗಳಿಗೆ ಉತ್ತರಿಸುವುದನ್ನು ನಿಲ್ಲಿಸಿ ಅವನನ್ನು ಬ್ಲಾಕ್ ಮಾಡಿದ್ದಾಳೆ. ಆತನ ಪ್ರಶ್ನೆಗಳಿಗೆ ಅವಳಲ್ಲಿ ಯಾವುದೇ ಉತ್ತರಗಳು ಇರಲಿಲ್ಲ.
ಅಸಮಾಧಾನಗೊಂಡ ವ್ಯಕ್ತಿ ಗೂಗಲ್ ಅನ್ನು ಅವಲಂಬಿಸಲು ನಿರ್ಧರಿಸಿದಾಗ ಕೆಲವೇ ಸೆಕೆಂಡುಗಳಲ್ಲಿ ತನ್ನ ಹೆಂಡತಿ ವಂಚನೆ, ಕಳ್ಳತನ, ಕೊಲೆ ಮತ್ತು ಬೇಟೆಯ ಆರೋಪಗಳನ್ನು ಹೊಂದಿರುವ ಅಪರಾಧಿ ಎಂದು ಅವನು ಅರಿತುಕೊಂಡಿದ್ದಾನೆ. ಇಷ್ಟೇ ಅಲ್ಲದೇ, ಈ ಖತರ್ನಾಕ್ ರೀಟಾ ಈ ಹಿಂದೆ ಅನಿಲ್ ಚೌಹಾಣ್ ಎಂಬ ಸರಣಿ ಕಾರು ಕಳ್ಳನನ್ನು ಮದುವೆಯಾಗಿದ್ದಳು. ಸದ್ಯ ಜೈಲಿನಲ್ಲಿರುವ ಅನಿಲ್ನೊಂದಿಗೆ ತನಗೆ ಯಾವುದೇ ಸಂಪರ್ಕವಿಲ್ಲ ಎಂದು ರೀಟಾ ತಿಳಿಸಿದ್ದಾಳೆ.
ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…
ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…
ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…
ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…