ಧ್ರುವ ಸರ್ಜಾ ರವರ ಬಹುನಿರೀಕ್ಷಿತ ಚಿತ್ರ ವಾದಂತಹ ಮಾರ್ಟಿನ್ ನ ಟೀಜರನ್ನು ಚಿತ್ರತಂಡ 23ನೇ ತಾರೀಕಿನಂದು ಬಿಡುಗಡೆ ಮಾಡಿದೆ. ಟೀಸರ್ ನೋಡಿದ ಸಿನಿಪ್ರಿಯರು ದಂಗಾಗುವಂತಿದೆ ಟೀಸರ್ ಎನ್ನುತ್ತಿದ್ದಾರೆ. ಹಳೆಯ ಚಿತ್ರಗಳು ಯೂಟ್ಯೂಬ್ ನಲ್ಲಿ ಮಾಡಿದಂತಹ ಸಾಕಷ್ಟು ರೆಕಾರ್ಡ್ಗಳನ್ನು ಮುರಿದು ಮುನ್ನುಗ್ಗುತ್ತಿರುವ ಮಾರ್ಟಿನ್ ಟೀಸರ್ ಈಗಾಗಲೇ ಆರು ಕೋಟಿ ವೀಕ್ಷಣೆಯ ಆಸುಪಾಸಿನಲ್ಲಿದ್ದು, 10 ಕೋಟಿ ವೀಕ್ಷಣೆ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಮಾರ್ಟಿನ್ ಟೀಸರ್ ಬಿಡುಗಡೆ ಮಾಡಿದ ಕೇವಲ ಎರಡೇ ದಿನದಲ್ಲಿ 6 ಕೋಟಿ ವೀಕ್ಷಣೆ ಪಡೆದು ಮುನ್ನುಗ್ಗುತ್ತಿರುವ ಈ ಟೀಸರ್, ಕೆಜಿಎಫ್ 2 ನಾ ಟೀಸರ್ ವೀಕ್ಷಣೆಯ ಸಂಖ್ಯೆಯನ್ನು ಹಿಂದಿಕುವ ಸಾಧ್ಯತೆ ಇದೆ. ಕೆಜಿಎಫ್ 2ನ ಟೀಸರ್ 12 ರಿಂದ 13 ಕೋಟಿ ವೀಕ್ಷಣೆ ಪಡೆದಿದ್ದು, ಧ್ರುವ ಸರ್ಜಾ ರವರ ಮಾರ್ಟಿನ್ ಚಿತ್ರದ ಟೀಸರ್ ಕೇವಲ ಎರಡೇ ದಿನದಲ್ಲಿ ಆರು ಕೋಟಿ ವೀಕ್ಷಣೆ ಪಡೆದು ಮುನ್ನುಗ್ಗುತ್ತಿರುವ ಕಾರಣ ಆದಷ್ಟು ಬೇಗ ಕೆಜಿಎಫ್ ದಾಖಲೆ ಹಿಂದಿಕ್ಕುತ್ತದೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ ಟೀಸರ್ ನೋಡಿದರೆ ತಿಳಿಯುವುದೇನೆಂದರೆ ಕನ್ನಡ ಫಿಲಂ ಇಂಡಸ್ಟ್ರಿಯಿಂದ ಮತ್ತೊಂದು ದೊಡ್ಡ ಮಟ್ಟದ ಪ್ಯಾನ್ ಇಂಡಿಯಾ ಚಿತ್ರವೊಂದು ಧೂಳೆಬ್ಬಿಸಲು ಬರುತ್ತಿದೆ.

 

1 thought on “ಯೂಟ್ಯೂಬ್ ಅನ್ನು ಧೂಳೆಬ್ಬಿಸುತ್ತಿರುವ ಮಾರ್ಟಿನ್; ಟ್ರೆಂಡಿಂಗ್ ನಲ್ಲಿ ನಂಬರ್ ೧!

Comments are closed.

error: Content is protected !!