ರಾಜ್ಯದಲ್ಲಿ ಈ ಹಿಂದೆಯೂ ಮಹಾಮಾರಿ ಕರೋನ ಎಂಬ ಸಾಂಕ್ರಾಮಿಕ ರೋಗವು ಬಂದು ಸಾಕಷ್ಟು ಸಾವು ನೋವು ಸಂಭವಿಸಿದೆ. ಹಾಗೂ ಸಾರ್ವಜನಿಕರಿಗೆ ಚಿಕ್ಕ ಪುಟ್ಟ ಮಕ್ಕಳಿಗೆ ವೃದ್ದರಿಗೆ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಕರೋನ ವನ್ನು ಹತೋಟಿಗೆ ತರಲು ಇಡೀ ರಾಜ್ಯವನ್ನೇ ಲಾಕ್ ಡೌನ್ (ಎಲ್ಲರೂ ತಮ್ಮ ತಮ್ಮ ಮನೆಯನ್ನು ಬಿಟ್ಟು ಯಾರೂ ಹೊರಗೆ ಬರಬಾರದು ) ಎನ್ನುವುದನ್ನು ಮಾಡಿ ಅಂತೂ ಇಂತು ಹತೋಟಿಗೆ ತಂದರು. ಎಲ್ಲವೂ ಮುಗಿದಿದೆ ಎನ್ನುವಷ್ಟರಲ್ಲಿ. ಮತ್ತೆ ಹೊಸದೊಂದು H3N2 ವೈರಸ್ ರಾಜ್ಯದಲ್ಲಿ ಕಾಣಿಸಿಕೊಂಡಿದೆ.
ಇದರ ನಿಮಿತ್ತವಾಗಿ ಇಂದು ಆರೋಗ್ಯ ಸಚಿವರಾದ ಸುಧಾಕರ್ ರವರು ಆರೋಗ್ಯ ಇಲಾಖೆಯು ಹಿರಿಯ ಅಧಿಕಾರಿಗಳ ಜೊತೆ ಹಾಗೂ ತಜ್ಞರ ಜೊತೆ ಮಹತ್ತ್ವದ ಸಬೆಯನ್ನು ನಡೆಸಿದರು . ಈ ರೋಗದ ಲಕ್ಷಣಗಳು ಕೆಮ್ಮು, ಜ್ವರ,ವಾಂತಿ,ಬೇದಿ, ಮೈ ಕೈ ನೋವು, ಅಶಕ್ತತೆ ಸುಸ್ತು ಈ ರೋಗದ ಲಕ್ಷಣಗಳು. ಈ ರೋಗಕ್ಕೆ ಯಾರೂ ಕೂಡ ಬಯ ಪಡುವ ಅಗತ್ಯವಿಲ್ಲ ಈ ವೈರಸ್ ಬಂದರೆ 3/ ದಿನ 6/7 ದಿನ ಇದ್ದು ಸರಿಯಾದ ಚಿಕಿತ್ಸೆಯನ್ನು ಪಡೆದು ಕೊಂಡರೆ ಯಾವುದೇ ಜೀವಕ್ಕೆ ಹಾನಿಯುಂಟು ಮಾಡುವುದಿಲ್ಲ ಎಂದು ತಜ್ನರ ಹೇಳಿಕೆಯಾಗಿದೆ. ರಾಜ್ಯದ ಜನತೆ ಸಾರ್ವಜನಿಕರು ಎಲ್ಲರೂ ತಮ್ಮ ಮನೆಯಿಂದ ಹೊರಬರುವ ಸಮಯದಲ್ಲಿ ಮಾಸ್ಕ್ ಅನ್ನೂ ಕಡ್ಡಾಯವಾಗಿ ದರಿಸಲೇಬೇಕು.ಹಾಗೂ ಈ ರೋಗವು 15 ವರ್ಷ ಒಳಪಟ್ಟವರಿಗೆ ಹಾಗೂ 50 ವರ್ಷ ಮೇಲ್ಪಟ್ಟವರಿಗೆ ಹೆಚ್ಚಾಗಿ ಕಂಡು ಬಂದಿದ್ದು ಎಲ್ಲರೂ ಮಾಸ್ಕ್ ದರಸಿ ಪದೆ ಪದೆ ಮುಖವನ್ನು ಮುಟ್ಟಿ ಕೊಳ್ಳಬಾರದು ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು ಎಂದು ರಾಜ್ಯದ ಜನತೆಯಲ್ಲಿ ಆರೋಗ್ಯ ಸಚಿವರಾದ ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ.
ವರದಿ: ಶ್ರೀಪಾದ್ ಎಸ್ ಏಚ್