ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಮಹಾಕುಂಭಮೇಳ ಪ್ರದೇಶದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡು ಅವ್ಯವಸ್ಥೆ ಉಂಟಾಗಿದೆ. ಗಂಗಾ ಸೇತುವೆಯ ಬಲಭಾಗದಲ್ಲಿ ಈ ಅವಘಡ ಸಂಭವಿಸಿದ್ದು, ಸ್ಥಳೀಯ ಜನರಲ್ಲಿ ಆತಂಕ ಮೂಡಿಸಿದೆ.
ಬೆಂಕಿಯ ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತಲುಗಿ ಕಾರ್ಯಾರಂಭಿಸಿದರೂ, ಈ ಘಟನೆ ಭಕ್ತರಲ್ಲಿ ಭಯ ಹುಟ್ಟಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ವರದಿಗಳ ಪ್ರಕಾರ, ಸೆಕ್ಟರ್ ಸಂಖ್ಯೆ 19 ರ ಸೇತುವೆ ಸಂಖ್ಯೆ 12ರ ಬಳಿ, ಝುನ್ಸಿ ರೈಲ್ವೆ ಮಾರ್ಗದ ಕೆಳಗಿರುವ ಗೀತಾ ಪ್ರೆಸ್ ಶಿಬಿರದಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರ ಪ್ರಕಾರ, ಶಿಬಿರದಲ್ಲಿ ಆಹಾರವನ್ನು ತಯಾರಿಸುವಾಗ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿದೆ. ಪರಿಣಾಮ, ಬೆಂಕಿ ಶೀಘ್ರವಾಗಿ ವ್ಯಾಪಿಸಿ 20-25 ಡೇರೆಗಳನ್ನು ಆವರಿಸಿದೆ. ಶಿಬಿರದಲ್ಲಿ ಸುಮಾರು 500ಕ್ಕೂ ಹೆಚ್ಚು ಜನರಿದ್ದರೆಂದೂ ವರದಿಯಾಗಿದೆ.
ಈ ಘಟನೆ ನಿಭಾಯಿಸಲು ಅಗ್ನಿಶಾಮಕ ದಳದ ಹಲವಾರು ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತಿದೆ.
ಕೆಂಡ್ರ ವಿಭಾಗದ ಮಹಿಳಾ ಠಾಣೆ ಪೊಲೀಸರು, 37 ವರ್ಷದ ತಮಿಳುನಾಡು ಮೂಲದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಇಬ್ಬರನ್ನು…
ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ಪಟ್ಟಣದ ಮೋಳೆ ರಿಂಗ್ ರಸ್ತೆಯಲ್ಲಿ ಒಂದು ಅಂಶಾತುರ ಘಟನೆ ನಡೆದಿದೆ, ಕಾಡು ರಕ್ಷಣೆ ಮತ್ತು ಪರಿಸರ…
ಸಿಂಧನೂರು ತಾಲ್ಲೂಕಿನ ಉಪ್ಪಳ ಮತ್ತು ದಢೇಸುಗೂರು ಗ್ರಾಮದ ರೈತರಿಂದ 4,500 ಚೀಲ ಭತ್ತವನ್ನು ಖರೀದಿಸಿದ್ದ ವ್ಯಾಪಾರಿ ಮಲ್ಲೇಶ ₹60 ಲಕ್ಷ…
ಹುಕ್ಕೇರಿ ತಾಲೂಕಿನ ಸುಲ್ತಾನಪುರದಲ್ಲಿ ಏಳು ವರ್ಷದ ಬಾಲಕನನ್ನು 4 ಲಕ್ಷ ರೂ.ಗೆ ಮಾರಾಟ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಿರುವ…
ಕುಂದಗೋಳ: ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ಸಮಸ್ಯೆಗಳು ತೀವ್ರ ಸ್ವರೂಪ ತಾಳುತ್ತಿದ್ದು, ಗ್ರಾಮ ಪಂಚಾಯಿತಿ ಮುಂಭಾಗದ ರಸ್ತೆಗಳು…
ಹುಬ್ಬಳ್ಳಿಯ ಟಿಪ್ಪು ನಗರದಲ್ಲಿ ಘಟನೆ ನಡೆದಿದ್ದು, ವಿವಾಹಿತ ಮಹಿಳೆಯೊಂದಿಗೆ ಮಾತನಾಡಿದ ಯುವಕನನ್ನು ಕೆಲವರು ಹಾಡಹಗಲೇ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಯುವಕನನ್ನು…