ಉತ್ತರಕನ್ನಡ ಜಿಲ್ಲೆಯಿಂದ ಎಸ್ ಪಿ ಯಾಗಿದ್ದ ಡಾ ಸುಮನಾ ಪೆನ್ನೇಕರ್ ಮೇಡಂ ವರ್ಗಾವಣೆಯಾದ ಗಳಿಗೆ ಯಿಂದಲೇ ಅಕ್ರಮ ದಂಧೆಗಳು ಎಲ್ಲೆಂದರಲ್ಲಿ ಮತ್ತೆ ಬಾಲ ಬಿಚ್ಚುತ್ತಿವೆ ಅದ್ರಂತೆ ಮುಂಡಗೋಡ ತಾಲೂಕಿನಲ್ಲಿ ಈಗ ಮಟ್ಕಾ ಅನ್ನೋ ದಂಧೆ ಹೆಜ್ಜೆ ಹೆಜ್ಜೆಗೂ ಬಡವರ ರಕ್ತ ಹಿರುತ್ತಿದೆ.
ಒಂದು ವರ್ಷದ ಹಿಂದೆ ಮುಂಡಗೋಡ ತಾಲೂಕಿನಲ್ಲಿ ಮಟ್ಕಾ ಬಂದ್ ಆಗಿತ್ತು. ಅದೆಷ್ಟೋ ಬಡವರ ಹೊಟ್ಟೆಗಳು ತಣ್ಣಗಿದ್ದವು ಅದೆಕ್ಕೆಲ್ಲಾ ಕಾರಣ ಹಿಂದಿನ ಎಸ್ ಪಿ ಡಾ ಸುಮನಾ ಪೆನ್ನೇಕರ್ ನ ಖಡಕ್ ಆದೇಶ ಆದ್ರೆ ಯಾವಾಗ ವರ್ಗಾವಣೆ ಯಾಯಿತೋ ಆ ಕ್ಷಣದಿಂದಲೆ ಇಲ್ಲಿನ ಮಟ್ಕಾ ಅಡ್ಡೆಗಳು ಮತ್ತೆ ಶುರುಮಾಡಿಕೊಂಡರು. ಪಾಳಾ ಭಾಗದಲ್ಲಿ ಅಂದ್ರೆ ಪಾಳಾ, ಕಾತುರ, ಮಳಗಿ ಸೇರಿದಂತೆ ಆ ಭಾಗದ ಹಳ್ಳಿಗಳಲ್ಲೂ ಮಟ್ಕಾ ಮನೆ ಮಾಡಿದೆ.
ಕೆಲವು ಗುಡಂಗಡಿಗಳೆ ಮಟ್ಕಾ ಅಡ್ಡೆಯಾಗಿಬಿಟ್ಟಿವೆ.. ರಾಜಾರೋಷವಾಗಿ ಮಟ್ಕಾ ದಂಧೆ ನಡೀತಿದೆ. ಅಷ್ಟೇ ಅಲ್ಲದೆ ಈ ಮಟ್ಕಾ ದಂಧೆ ನಡೆಸುತ್ತಿರೋರು ಅದೊಂದು ನಮ್ಮ ಪಕ್ಕದಲ್ಲಿರೋ ಹಾವೇರಿ ಜೆಲ್ಲೆಯ ಒಬ್ಬ ಬುಕ್ಕಿ ಬಂದು ಈ ಅಕ್ರಮ ದಂಧೆ ನಡೆಸುತ್ತಿದ್ದರು ಅಧಿಕಾರಿಗಳು ಕಂಡರೂ ಕಾಣದ ಹಾಗೆ ಇದ್ದರೆಯೇ ಎಂಬ ಪ್ರಶ್ನೆ ಸಹಜವಾಗಿ ಜನರಲ್ಲಿ ಹುಟ್ಟುತ್ತದೆ.
ವರದಿ :ಕುಮಾರ ರಾಠೋಡ