Latest

ಕಲಬುರ್ಗಿಯಲ್ಲಿ ಮತ್ತೆ ವೈದ್ಯಕೀಯ ನಿರ್ಲಕ್ಷ್ಯ? ಬಾಣಂತಿಯ ಸಾವಿಗೆ ಕುಟುಂಬದ ಆಕ್ರೋಶ

ಕಲಬುರ್ಗಿ: ಕಳೆದ ಕೆಲವು ದಿನಗಳ ಹಿಂದೆ ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯೊಬ್ಬರ ಹೊಟ್ಟೆಯೊಳಗೆ ಬಟ್ಟೆ ಬಿಟ್ಟು ವೈದ್ಯಕೀಯ ಎಡವಟ್ಟು ನಡೆದಿದೆ ಎಂಬ ಪ್ರಕರಣ ಮಾಸುವ ಮುನ್ನವೇ, ಜಿಲ್ಲೆಯಲ್ಲಿ ಮತ್ತೊಂದು ಬಾಣಂತಿಯ ಸಾವಿನ ಘಟನೆ ನಡೆದಿದೆ.

ಚಿತ್ತಾಪುರ ತಾಲೂಕಿನ ತೊನಸನಹಳ್ಳಿ ಗ್ರಾಮದ 32 ವರ್ಷದ ಶಿಲ್ಪಾ ಎಂಬ ಯುವತಿ ಈ ಘಟನೆಯ ದುರ್ದೈವಿ. ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಅವರು ಕಲಬುರ್ಗಿಯ ಸೇಡಂ ರಸ್ತೆಯಲ್ಲಿರುವ ಇಎಸ್‌ಐಸಿ ಆಸ್ಪತ್ರೆಗೆ ದಾಖಲಾಗಿದ್ದರು.

ಅಂದೇ ಗಂಡು ಮಗುವಿಗೆ ಜನ್ಮ ನೀಡಿದ ಶಿಲ್ಪಾ, ನಿರಂತರ ರಕ್ತಸ್ರಾವದಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ವೈದ್ಯರು ಅಹರಹರಾಗಿ ರಕ್ತ ನೀಡಿದರೂ, ಮಂಗಳವಾರ ಬೆಳಿಗ್ಗೆ ಅವರ ಜೀವ ಉಳಿಯಲಿಲ್ಲ.

ಈ ದುರ್ಘಟನೆ ಬಗ್ಗೆ ಶಿಲ್ಪಾದ ಕುಟುಂಬ ಸದಸ್ಯರು ಕಿಡಿಕಾರಿದ್ದು, ವೈದ್ಯರ ನಿರ್ಲಕ್ಷ್ಯವೇ ಮರಣಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ವೈದ್ಯರು ಶಿಲ್ಪಾ ಲೋ ಬಿಪಿಯ (ಅಲ್ಪ ರಕ್ತೊತ್ತಡ) ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.

nazeer ahamad

Recent Posts

ಸಾಲಗಾರರ ಕಾಟ; ಯುವಕ ಆತ್ಮಹತ್ಯೆಗೆ ಯತ್ನ…!

ಕುಂದಗೋಳ: ಸಾಲಗಾರರ ಕಾಟದಿಂದ ಬೇಸತ್ತು ಯುವಕನೊಬ್ಬ ಮನನೊಂದು ಕಳೆನಾಶಕವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕುಂದಗೋಳ ಗ್ರಾಮೀಣ ಪೋಲಿಸ್ ಠಾಣೆಯ…

2 days ago

ಬೈಕನಿಂದ ಬಿದ್ದು ಎಸ್.ಕೆ.ಡಿ.ಆರ್.ಪಿ ಕುಮಟಾ ಸಿಬ್ಬಂದಿ ಸಾವು

ಕುಮಟಾ ತಾಲೂಕಿನ ಗುಡೇಅಂಗಡಿಯ ನಿವಾಸಿ ಸುಮಾ ಮಡಿವಾಳ (32) ಅವರು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕುಮಟಾ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.…

2 days ago

ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿದ್ದಾಗ ಸಿಕ್ಕಿಬಿದ್ದ ವಿದ್ಯಾರ್ಥಿನಿ ಮನನೊಂದು ಆತ್ಮಹತ್ಯೆ: ಬಾಗಲಕೋಟೆಯಲ್ಲಿ ದುಃಖದ ಘಟನೆ

ಬಾಗಲಕೋಟೆ ಜಿಲ್ಲೆಯಲ್ಲಿ ನಕಲು ಮಾಡುತ್ತಿರುವಾಗ ಸಿಕ್ಕಿಬಿದ್ದ ಪಿಯುಸಿ ವಿದ್ಯಾರ್ಥಿನಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಮುಧೋಳ ಪಟ್ಟಣದ…

2 days ago

ಹೊಸಕೋಟೆ ಎಟಿಎಂ ದರೋಡೆ: 6 ನಿಮಿಷದಲ್ಲಿ ₹30 ಲಕ್ಷ ದೋಚಿ ಪರಾರಿಯಾದ ಕಳ್ಳರು!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆಯಲ್ಲಿ ಎಟಿಎಂ ದರೋಡೆ ಪ್ರಕರಣದಿಂದ ಭಾರೀ ಚರ್ಚೆ ಮೂಡಿಸಿದೆ. ಕೇವಲ ಆರು ನಿಮಿಷಗಳೊಳಗೆ,…

2 days ago

ಐಪಿಎಸ್ ಅಧಿಕಾರಿಯಿಂದ ಅಪ್ರಾಪ್ತ ಬಾಲಕಿಯ ವಿವಾಹ: ವಯಸ್ಸು ತಿದ್ದುಪಡಿ ಮಾಡಿಸಿದ ಆರೋಪ

ಬೆಳಗಾವಿಯಲ್ಲಿ ಶಾಕಿಂಗ್ ಘಟನೆ ಬೆಳಕಿಗೆ ಬಂದಿದ್ದು, ಅಪ್ರಾಪ್ತ ಬಾಲಕಿಯ ವಿವಾಹಕ್ಕೆ ಸ್ವತಃ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರೇ ಕೈಜೋಡಿಸಿರುವ ಮಾಹಿತಿಯಾಗಿದೆ. ಬೆಳಗಾವಿ…

3 days ago

ಲಂಚ ಪ್ರಕರಣ: ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯ ಪಿಎಸ್‌ಐ ಮತ್ತು ಕಾನ್‌ಸ್ಟೆಬಲ್ ಅಮಾನತು

ಬೆಂಗಳೂರು: ಲಂಚ ಸ್ವೀಕರಿಸಿದ ಆರೋಪದ ಹಿನ್ನೆಲೆಯಲ್ಲಿ ಎಚ್‌ಎಸ್‌ಆರ್‌ ಲೇಔಟ್ ಪೊಲೀಸ್‌ ಠಾಣೆಯ ಪಿಎಸ್‌ಐ ಬಸವರಾಜ್ ಹಾಗೂ ಕಾನ್‌ಸ್ಟೆಬಲ್‌ ಒಬ್ಬರನ್ನು ಅಮಾನತು…

3 days ago