ಇತ್ತೀಚಿನ ದಿನಗಳಲ್ಲಿ ನಟಿ ರೇಖಾ ನಾಯರ್ ತಮ್ಮ ಧೈರ್ಯಶಾಲಿ ಮಾತುಗಳಿಂದ ಗಮನಸೆಳೆದಿದ್ದಾರೆ. ಪಾರ್ಥಿಬನ್ ನಿರ್ದೇಶಿಸಿದ ಇರಾವಿನ್ ಸೈತೋ ಚಿತ್ರದಲ್ಲಿ ರಾಣಿ ಪಾತ್ರವನ್ನು ನಿರ್ವಹಿಸಿರುವ ರೇಖಾ, ನಗ್ನ ದೃಶ್ಯದ ಮೂಲಕ ಚರ್ಚೆಯ ಕೇಂದ್ರಬಿಂದುಗೊಂಡಿದ್ದಾರೆ. ತಾಯಿಯ ಎದೆಗೆ ಮಗು ಹಾಲು ಕುಡಿಯುವ ದೃಶ್ಯದಲ್ಲಿನ ಅವರ ಪಾತ್ರದ ಮೇಲೆ ಒಂದೆಡೆ ಪ್ರಶಂಸೆ ವ್ಯಕ್ತವಾಗಿದ್ದರೆ, ಮತ್ತೊಂದೆಡೆ ತೀವ್ರ ಟೀಕೆಯನ್ನೂ ಅವರು ಎದುರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ರೇಖಾ ನಾಯರ್, “ಕಲೆಯನ್ನು ಕಲೆಯಾಗಿ ನೋಡಬೇಕು. ನಾನು ನಟಿಸಿದ ದೃಶ್ಯವು ಮನಕಲಕುವಂತದ್ದು. ಬೆತ್ತಲೆಯಾಗಿ ನಟಿಸಿದ್ದಕ್ಕೆ ಪ್ರಶಂಸೆಯೊಂದಿಗೆ ಟೀಕೆಯೂ ಬಂದಿವೆ. ಸಂಭಾವನೆಗೆ ಏನಾದರೂ ಮಾಡುತ್ತೀರಾ ಎಂದು ಕೇಳುವವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕಲೆಯ ಮಹತ್ವವನ್ನು ಅರ್ಥಮಾಡಿಕೊಳ್ಳದವರಿಗೆ ನಾನು ವಿವರಣೆ ನೀಡುವುದಿಲ್ಲ,” ಎಂದರು.
ಇದೇ ವೇಳೆ, ಇತ್ತೀಚೆಗೆ ಚಿತ್ರರಂಗದಲ್ಲಿ ಕೇಳಿಬರುತ್ತಿರುವ “ಅಡ್ಜಸ್ಟ್‌ಮೆಂಟ್” ವಿವಾದದ ಬಗ್ಗೆ ರೇಖಾ ತಮ್ಮ ನಿಲುವು ಸ್ಪಷ್ಟಪಡಿಸಿದರು. ಖಾಸಗಿ ಯೂಟ್ಯೂಬ್ ಚಾನೆಲ್‌ನ ಸಂದರ್ಶನದಲ್ಲಿ ನಟಿ ಶಕೀಲಾ ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾ, “Metoo ಎಂಬುದು ಸುಳ್ಳು. ಯಾರಾದರೂ ನಿಮಗೆ ಕರೆ ಮಾಡಿದರೆ, ನೀವು ಹೋಗಲು ಬಯಸಿದರೆ ಹೋಗಬಹುದು, ಅಥವಾ ನಿರಾಕರಿಸಬಹುದು. ನಾವು ಬುದ್ಧಿಯಿಲ್ಲದ ಮಕ್ಕಳು ಅಲ್ಲ, ಯಾರು ಏನು ಮಾತನಾಡುತ್ತಿದ್ದಾರೆ ಎಂಬುದು ನಮಗೆ ಅರ್ಥವಾಗುತ್ತದೆ. 10 ವರ್ಷಗಳ ನಂತರ ನಾನು ಚಿತ್ರರಂಗಕ್ಕೆ ಮರಳಿದ್ದೇನೆ,” ಎಂದು ಹೇಳಿದ್ದಾರೆ.
ಅಡ್ಜಸ್ಟ್‌ಮೆಂಟ್ ಕುರಿತಾಗಿ ತಮ್ಮ ಅನುಭವ ಹಂಚಿಕೊಂಡ ರೇಖಾ, “ಯಾವ ನಿರ್ದೇಶಕರೂ ನನ್ನ ಮೇಲೆ ‘ಅಡ್ಜಸ್ಟ್‌ಮೆಂಟ್’ ಮಾಡಲು ಒತ್ತಾಯಿಸಿಲ್ಲ. ಗಂಡಸರು ಹಣ ಕೊಡುತ್ತಿದ್ದಾರೆ, ಹೆಂಗಸರು ಎಂಜಾಯ್ ಮಾಡುತ್ತಿದ್ದಾರೆ ಅಷ್ಟೆ. ಯಾರಾದರೂ ಅಸಭ್ಯವಾಗಿ ವರ್ತಿಸಿದರೆ, ನಮ್ಮ ಹೆಂಗಸರು ಚಪ್ಪಲಿ ತೆಗೆದು ಥಳಿಸಬಹುದು,” ಎಂದು ತಮ್ಮ ನೇರ ನಿಲುವು ವ್ಯಕ್ತಪಡಿಸಿದರು.
ರೇಖಾ ನಾಯರ್‌ನ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಚಿತ್ರರಂಗದಲ್ಲಿ ಉದಯೋನ್ಮುಖ ಪ್ರತಿಭೆಯ ಹೆಂಗಸರ ಸ್ಥಾನವನ್ನು ಮತ್ತೊಮ್ಮೆ ಮುನ್ನಲೆಗೆ ತಂದಿವೆ.