Cinema

Metoo ಎಂಬುದು ಸುಳ್ಳು, ಗಂಡಸರು ಹಣ ಕೊಡುತ್ತಿದ್ದಾರೆ, ಹೆಂಗಸರು ಎಂಜಾಯ್ ಮಾಡುತ್ತಿದ್ದಾರೆ ಅಷ್ಟೇ: ರೇಖಾ ನಾಯರ್ ಶಾಕಿಂಗ್‌ ಹೇಳಿಕೆ

ಇತ್ತೀಚಿನ ದಿನಗಳಲ್ಲಿ ನಟಿ ರೇಖಾ ನಾಯರ್‌ ತಮ್ಮ ಧೈರ್ಯಶಾಲಿ ಮಾತುಗಳಿಂದ ಗಮನಸೆಳೆದಿದ್ದಾರೆ. ಪಾರ್ಥಿಬನ್ ನಿರ್ದೇಶಿಸಿದ ಇರಾವಿನ್ ಸೈತೋ ಚಿತ್ರದಲ್ಲಿ ರಾಣಿ ಪಾತ್ರವನ್ನು ನಿರ್ವಹಿಸಿರುವ ರೇಖಾ, ನಗ್ನ ದೃಶ್ಯದ ಮೂಲಕ ಚರ್ಚೆಯ ಕೇಂದ್ರಬಿಂದುಗೊಂಡಿದ್ದಾರೆ. ತಾಯಿಯ ಎದೆಗೆ ಮಗು ಹಾಲು ಕುಡಿಯುವ ದೃಶ್ಯದಲ್ಲಿನ ಅವರ ಪಾತ್ರದ ಮೇಲೆ ಒಂದೆಡೆ ಪ್ರಶಂಸೆ ವ್ಯಕ್ತವಾಗಿದ್ದರೆ, ಮತ್ತೊಂದೆಡೆ ತೀವ್ರ ಟೀಕೆಯನ್ನೂ ಅವರು ಎದುರಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ರೇಖಾ ನಾಯರ್, “ಕಲೆಯನ್ನು ಕಲೆಯಾಗಿ ನೋಡಬೇಕು. ನಾನು ನಟಿಸಿದ ದೃಶ್ಯವು ಮನಕಲಕುವಂತದ್ದು. ಬೆತ್ತಲೆಯಾಗಿ ನಟಿಸಿದ್ದಕ್ಕೆ ಪ್ರಶಂಸೆಯೊಂದಿಗೆ ಟೀಕೆಯೂ ಬಂದಿವೆ. ಸಂಭಾವನೆಗೆ ಏನಾದರೂ ಮಾಡುತ್ತೀರಾ ಎಂದು ಕೇಳುವವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕಲೆಯ ಮಹತ್ವವನ್ನು ಅರ್ಥಮಾಡಿಕೊಳ್ಳದವರಿಗೆ ನಾನು ವಿವರಣೆ ನೀಡುವುದಿಲ್ಲ,” ಎಂದರು.

ಇದೇ ವೇಳೆ, ಇತ್ತೀಚೆಗೆ ಚಿತ್ರರಂಗದಲ್ಲಿ ಕೇಳಿಬರುತ್ತಿರುವ “ಅಡ್ಜಸ್ಟ್‌ಮೆಂಟ್” ವಿವಾದದ ಬಗ್ಗೆ ರೇಖಾ ತಮ್ಮ ನಿಲುವು ಸ್ಪಷ್ಟಪಡಿಸಿದರು. ಖಾಸಗಿ ಯೂಟ್ಯೂಬ್ ಚಾನೆಲ್‌ನ ಸಂದರ್ಶನದಲ್ಲಿ ನಟಿ ಶಕೀಲಾ ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾ, “Metoo ಎಂಬುದು ಸುಳ್ಳು. ಯಾರಾದರೂ ನಿಮಗೆ ಕರೆ ಮಾಡಿದರೆ, ನೀವು ಹೋಗಲು ಬಯಸಿದರೆ ಹೋಗಬಹುದು, ಅಥವಾ ನಿರಾಕರಿಸಬಹುದು. ನಾವು ಬುದ್ಧಿಯಿಲ್ಲದ ಮಕ್ಕಳು ಅಲ್ಲ, ಯಾರು ಏನು ಮಾತನಾಡುತ್ತಿದ್ದಾರೆ ಎಂಬುದು ನಮಗೆ ಅರ್ಥವಾಗುತ್ತದೆ. 10 ವರ್ಷಗಳ ನಂತರ ನಾನು ಚಿತ್ರರಂಗಕ್ಕೆ ಮರಳಿದ್ದೇನೆ,” ಎಂದು ಹೇಳಿದ್ದಾರೆ.

ಅಡ್ಜಸ್ಟ್‌ಮೆಂಟ್‌ ಕುರಿತಾಗಿ ತಮ್ಮ ಅನುಭವ ಹಂಚಿಕೊಂಡ ರೇಖಾ, “ಯಾವ ನಿರ್ದೇಶಕರೂ ನನ್ನ ಮೇಲೆ ‘ಅಡ್ಜಸ್ಟ್‌ಮೆಂಟ್’ ಮಾಡಲು ಒತ್ತಾಯಿಸಿಲ್ಲ. ಗಂಡಸರು ಹಣ ಕೊಡುತ್ತಿದ್ದಾರೆ, ಹೆಂಗಸರು ಎಂಜಾಯ್ ಮಾಡುತ್ತಿದ್ದಾರೆ ಅಷ್ಟೆ. ಯಾರಾದರೂ ಅಸಭ್ಯವಾಗಿ ವರ್ತಿಸಿದರೆ, ನಮ್ಮ ಹೆಂಗಸರು ಚಪ್ಪಲಿ ತೆಗೆದು ಥಳಿಸಬಹುದು,” ಎಂದು ತಮ್ಮ ನೇರ ನಿಲುವು ವ್ಯಕ್ತಪಡಿಸಿದರು.

ರೇಖಾ ನಾಯರ್‌ನ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಚಿತ್ರರಂಗದಲ್ಲಿ ಉದಯೋನ್ಮುಖ ಪ್ರತಿಭೆಯ ಹೆಂಗಸರ ಸ್ಥಾನವನ್ನು ಮತ್ತೊಮ್ಮೆ ಮುನ್ನಲೆಗೆ ತಂದಿವೆ.

kiran

Recent Posts

ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಆರೋಪಿಗಳು ಬಂಧನ

ಕೆಂಡ್ರ ವಿಭಾಗದ ಮಹಿಳಾ ಠಾಣೆ ಪೊಲೀಸರು, 37 ವರ್ಷದ ತಮಿಳುನಾಡು ಮೂಲದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಇಬ್ಬರನ್ನು…

4 hours ago

ಕಾಡು ರಕ್ಷಣೆಮಾಡಬೇಕಾದ ವಾಚರ್: ಆನೆ ದಂತ ಸಾಗಿಸಲು ಯತ್ನಿಸಿದ ಸಂಕೀರ್ಣ ಪ್ಲಾನ್!

ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ಪಟ್ಟಣದ ಮೋಳೆ ರಿಂಗ್ ರಸ್ತೆಯಲ್ಲಿ ಒಂದು ಅಂಶಾತುರ ಘಟನೆ ನಡೆದಿದೆ, ಕಾಡು ರಕ್ಷಣೆ ಮತ್ತು ಪರಿಸರ…

4 hours ago

ವ್ಯಾಪಾರಿಯ ಪರಾರಿಯ ಪರಿಣಾಮ: ರೈತರು ಸಂಕಷ್ಟದಲ್ಲಿ

ಸಿಂಧನೂರು ತಾಲ್ಲೂಕಿನ ಉಪ್ಪಳ ಮತ್ತು ದಢೇಸುಗೂರು ಗ್ರಾಮದ ರೈತರಿಂದ 4,500 ಚೀಲ ಭತ್ತವನ್ನು ಖರೀದಿಸಿದ್ದ ವ್ಯಾಪಾರಿ ಮಲ್ಲೇಶ ₹60 ಲಕ್ಷ…

4 hours ago

ಮಗುವಿನ ಮಾರಾಟದ ಕೃತ್ಯ ಬಯಲು: 7 ವರ್ಷದ ಬಾಲಕ 4 ಲಕ್ಷಕ್ಕೆ ಹರಾಜಾದ.!

ಹುಕ್ಕೇರಿ ತಾಲೂಕಿನ ಸುಲ್ತಾನಪುರದಲ್ಲಿ ಏಳು ವರ್ಷದ ಬಾಲಕನನ್ನು 4 ಲಕ್ಷ ರೂ.ಗೆ ಮಾರಾಟ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಿರುವ…

5 hours ago

ಎಲ್ಲೆಡೆ ಕಸದ ರಾಶಿಗಳು: ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾದ ಹಿರೇನರ್ತಿ ರಸ್ತೆಗಳು

ಕುಂದಗೋಳ: ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ಸಮಸ್ಯೆಗಳು ತೀವ್ರ ಸ್ವರೂಪ ತಾಳುತ್ತಿದ್ದು, ಗ್ರಾಮ ಪಂಚಾಯಿತಿ ಮುಂಭಾಗದ ರಸ್ತೆಗಳು…

5 hours ago

ವಿವಾಹಿತ ಮಹಿಳೆಯೊಂದಿಗೆ ಮಾತನಾಡಿದ್ದಕ್ಕೆ ಹುಬ್ಬಳ್ಳಿಯಲ್ಲಿ ಕ್ರೂರ ಕೃತ್ಯ: ಯುವಕನಿಗೆ ಬೆತ್ತಲೆಗೊಳಿಸಿ ಮರಣಾಂತಿಕ ಹಲ್ಲೆ.

ಹುಬ್ಬಳ್ಳಿಯ ಟಿಪ್ಪು ನಗರದಲ್ಲಿ ಘಟನೆ ನಡೆದಿದ್ದು, ವಿವಾಹಿತ ಮಹಿಳೆಯೊಂದಿಗೆ ಮಾತನಾಡಿದ ಯುವಕನನ್ನು ಕೆಲವರು ಹಾಡಹಗಲೇ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಯುವಕನನ್ನು…

6 hours ago