ಉತ್ತರಕನ್ನಡ ಜಿಲ್ಲೆಯಲ್ಲಿ ಹೊಸದಾಗಿ ವರ್ಗಾವಣೆಯಾಗಿ ಬಂದ ಮಾನ್ಯ ಜಿಲ್ಲಾಧಿಕಾರಿ ಪ್ರಭುಲಿಂಗ ಕಳವಟ್ಟಿಯವರು ಅಂಕೋಲಾ ತಾಲೂಕಿನ ರಮನಗುಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದಾಗ ಅಲ್ಲಿನ ಪರಿಸ್ಥಿತಿ ನೋಡಿ ಕಂಗಾಲಾದ ಮಾನ್ಯ ಜಿಲ್ಲಾಧಿಕಾರಿ ಪ್ರಭುಲಿಂಗ ಕಲವಟ್ಟಿಯವರೂ. ಉತ್ತರಕನ್ನಡ ಜಿಲ್ಲೆಯಲ್ಲಿ ನಮಗೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಜಿಲ್ಲೆಯಲ್ಲಿ ಮೊದಲೇ ಸರಿಯಾದ ತುರ್ತು ಚಿಕತ್ಸೆ ಅಥವಾ ಯಾವುದೇ ಸಮಸ್ಯೆಯಾದರೂ ಕೂಡ ದೂರದ ಆರೋಗ್ಯ ಕೇಂದ್ರಕ್ಕೆ ತೆರಳುವ ಪರಿಸ್ಥಿತಿ ಉಂಟಾಗಿದೆ. ಇಂತಹ ಸಂದರ್ಭದಲ್ಲಿಯು ಕೂಡ ಅಂಕೋಲಾ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ರಾಮನಗುಳಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾಕಷ್ಟು ಬಾರಿ ಸರಿಯಾದ ಚಿಕತ್ಸೆ ಇಲ್ಲವೆಂದು ಇಲ್ಲಿನ ಗ್ರಾಮಸ್ಥರ ಅಕ್ರೋಶವಗಿದೆ.ಇದೆ ಸಮಯದಲ್ಲಿ ಹೊಸದಾಗಿ ವರ್ಗಾವಣೆಯಾಗಿ ಬಂದ ಮಾನ್ಯ ಜಿಲ್ಲಾಧಿಕಾರಿ ಪ್ರಭುಲಿಂಗ ಕಳವಟ್ಟಿಯವರು ಯಲ್ಲಾಪುರಕ್ಕೆ ತೆರಳುವ ಸಂದರ್ಭದಲ್ಲಿ ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದಾಗ ಅಲ್ಲಿ ಅರೆಕಾಲಿಕ ವೈದ್ಯಸಿಬ್ಬಂದಿಗಳು ಇರಲಿಲ್ಲ.ಕೇವಲ ಅಲ್ಲಿಯ ನೌಕರ ಮಾತ್ರ ಇದ್ದರೂ . ಈ ವ್ಯವಸ್ತೆಯನ್ನು ಕಂಡ ಜಿಲ್ಲಾಧಿಕಾರಿಯವರೂ ಆರೋಗ್ಯ ಅಧಿಕಾರಿಗಳಿಗೆ ನಾನು ಬರುವ ಸಮಯದಲ್ಲಿ ಇಲ್ಲಿನ ಕರ್ತವ್ಯ ಬಿಟ್ಟು ಯಾವ ಕರ್ತವ್ಯದಲ್ಲಿದ್ದಿರಿ? ಈ ಕುರಿತು ಸೂಕ್ತ ಮಾಹಿತಿ ನೀಡುವಂತೆ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ನೋಟಿಸ್ ಜಾರಿ ಗೊಳಿಸಿದ್ದಾರೆ.ಮೂರು ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಸರಿಯಾದ ಕಾರಣ ನೀಡಬೇಕು ಎಂದು ಇಲ್ಲವಾದರೆ ಶಿಸ್ತು ಕ್ರಮ ಜರುಗಿಸುವುದಾಗಿ ನೋಟಿಸ್ ನೀಡಿದ್ದಾರೆ .ಇನ್ನೂ ಮುಂದಾದರು ಮಾನ್ಯ ಪ್ರಭುಲಿಂಗ ಕಳವಟ್ಟಿಯವರು ಇಲ್ಲಿನ ಭ್ರಷ್ಟ ಆರೋಗ್ಯ ಅಧಿಕಾರಿಗಳಿಗೆ ಸೂಕ್ತ ಕ್ರಮ _ಕೈಗೊಳ್ಳುತ್ತಾರಾ ಕಾದು ನೋಡಬೇಕಾಗಿದೆ…
ವರದಿ: ಶ್ರೀಪಾದ್ ಹೆಗಡೆ

error: Content is protected !!