ಕುಂದಗೋಳ; ಸಾರ್ವಜನಿಕರ ಜೊತೆ ವ್ಯವಹರಿಸುವ ಆಹಾರ ಇಲಾಖೆ ಸಿಬ್ಬಂದಿ ವರ್ತನೆ ಸರಿಯಿಲ್ಲ ಸ್ವತಃ ಶಾಸಕರ ಪೋನ್ ಕರೆಯನ್ನೆ ಸ್ವೀಕಾರ ಮಾಡೊಲ್ಲ ಎಂದು ಶಾಸಕ ಎಮ್ ಆರ್ ಪಾಟೀಲ ಆಹಾರ ಇಲಾಖೆ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡರು.
ಅವರು ಕುಂದಗೋಳ ತಾಲೂಕ ಪಂಚಾಯಿತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡಿಸಿ ಮಾತನಾಡಿ ಲೋಕೋಪಯೋಗಿ ಇಲಾಖೆ ರಸ್ತೆ ಅಭಿವೃದ್ಧಿ ಕ್ರಮ ಕೈಗೊಳ್ಳಿ, ಅರಣ್ಯ ಇಲಾಖೆ ಅಧಿಕಾರಿಗಳು ಕನಿಷ್ಠ ಮಟ್ಟಿಗಾದರೂ ಸಸಿ ನೆಡಿ, ತೋಟಗಾರಿಕೆ, ಕೃಷಿ ಇಲಾಖೆ ಬೀಜ ಗೊಬ್ಬರ ಕೊರತೆ ನಿವಾರಿಸಿ. ರೈತರಿಗೆ ಇನ್ಸೂರೆನ್ಸ್ ಬಗ್ಗೆ ತಿಳಿವಳಿಕೆ ನೀಡಿ ಎಂದರು.
ಇನ್ನುಳಿದಂತೆ ಕುಂದಗೋಳ ತಾಲೂಕಿನ 23 ಇಲಾಖೆಗಳ ವರದಿಯನ್ನು ಸಮಚಿತ್ತದಿಂದ ಎರಡು ಗಂಟೆ ಆಲಿಸಿದ ಶಾಸಕ ಆಲಿಸಿದ ಶಾಸಕ ಎಮ್ ಆರ್ ಪಾಟೀಲ ಅಧಿಕಾರಿಗಳಿಗೆ ನಿಷ್ಠೆ ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ ಪಾಠ ಮಾಡಿದರು
ಸಭೆಯ ಆರಂಭಕ್ಕೂ ಮೊದಲು ಶಾಸಕರಿಗೆ ಸರ್ವ ಇಲಾಖೆ ಅಧಿಕಾರಿಗಳು ಸನ್ಮಾನ ಮಾಡಿ ಶುಭ ಹಾರೈಸಿದರು. ಇನ್ನೂ ಮೊದಲ ಪ್ರಗತಿ ಪರಿಶೀಲನಾ ಸಭೆಗೆ ಶಾಸಕ ಎಮ್ ಆರ್ ಪಾಟೀಲ ಒಂದು ಗಂಟೆ ತಡವಾಗಿ ಆಗಮಿಸಿದ್ದರು ಈ ವೇಳೆ ಅಧಿಕಾರಿಗಳು ಶಾಸಕರ ಮೊದಲ ಸಭೆಗೆ ಕಾಯುವ ಪ್ರಸಂಗ ಸಹ ಏರ್ಪಟ್ಟಿತು.