ಲಾಕ್ಡೌನ್ ಸಂದರ್ಭದಲ್ಲಿ ಆದ ಆರ್ಥಿಕ ಕುಸಿತದಿಂದ ಹಲವರು ಸಂಕಷ್ಟಕ್ಕೆ ಸಿಲುಕಿದರು. ಇಂತಹ ಸಂದರ್ಭದಲ್ಲಿ ಸಾಕಷ್ಟು ಜನ ಬ್ಯಾಂಕ್‌ಗಳ ಮುಂದೆ ಲೋನ್‌ಗಳಿಗಾಗಿ ಮೊರೆಹೋದರು. ಇದನ್ನು ಲಾಭವಾಗಿ ಪಡೆದುಕೊಂಡ ಅದೇಷ್ಟೋ ನಕಲಿ ಕಂಪನಿಗಳು ಸಂಕಷ್ಟದಲ್ಲಿ ಸಿಲುಕಿದ್ದಂತಹ ಜನರ ಬಳಿ ಸಾಕಷ್ಟು ಹಣವನ್ನು ದೋಚಿದರು. ಬ್ಯಾಂಕ್‌ಗಳ ಮುಂದೆ ಲೋನ್‌ಗಾಗಿ ಬರುತ್ತಿರುವ ಜನರಸಂಖ್ಯೆ ಹೆಚ್ಚಾದಂತೆಲ್ಲ ಆನ್ಲೈನ್ನಲ್ಲಿ ಲೋನ್ ನೀಡಲು ಮುಂದಾದರು. ಇಂತಹ ಸಂದರ್ಭದಲ್ಲಿ ಅದೇಷ್ಟೊ ಆನ್ಲೈನ್ ಲೋನ್ ಕಂಪನಿಗಳು ಹುಟ್ಟಿಕೊಂಡವು. ಅವುಗಳಲ್ಲಿ ಕೆಲವು ಅಸಲಿ ಯಾಗಿದ್ದರೆ ಇನ್ನೂ ಕೆಲವು ನಕಲಿ ಯಾಗಿದ್ದವು. ಅಸಲಿ ಯಾವುದು ನಕಲಿ ಯಾವುದು ಎಂದು ಅರಿಯದೆ ಸಾಕಷ್ಟು ಜನ ತಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ನೀಡಿ ಹಣವನ್ನು ಸಹ ಕಳೆದುಕೊಂಡರು. ಹಾಗೂ ಇನ್ನೂ ಕೆಲವರು ಅಸಲಿ ಆನ್ಲೈನ್ ಲೋನ್ ಕಂಪನಿಗಳ ಮೊರೆಹೋಗಿ ಕ್ಷೇಮವಾಗಿ ಹಣ ಪಡೆದವರು ಉಂಟು. ಆನ್ಲೈನ್‌ನಲ್ಲಿ ಲೋನ್ ನೀಡುವಂತಹ ಹಲವು ಕಂಪನಿಗಳಲ್ಲಿ ಮನಿ ವೀವ್ ಲೋನ್ ಎಂಬ ಕಂಪನಿಯು ಸಹ ಒಂದು. ಈ ಕಂಪನಿಯನ್ನು ನಕಲಿ ಎನ್ನಬೇಕೊ ಅಥವಾ ಅಸಲಿ ಎನ್ನಬೇಕೊ ತಿಳಿಯುತ್ತಿಲ್ಲ. ಸಂಪೂರ್ಣ ಓದಿದ ನಂತರ ತಾವೇ ನಿರ್ಧರಿಸಿ.

ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾದ ನಾಗರಾಜ್ ಚಾರಿ ಎಂಬುವವರು ಲೋನ್‌ಗಾಗಿ ಪರದಾಡುತ್ತಿರುವಂತಹ ಸಂದರ್ಭದಲ್ಲಿ ತನ್ನ ಸ್ನೇಹಿತರು ನೀಡಿದ ಸಲಹೆಯ ಮೇರೆಗೆ ಮನಿ ವಿವ್ ಲೋನ್ ಅಪ್ಲಿಕೇಶನ್‌ನನ್ನು ತಮ್ಮ ಫೋನಿನಲ್ಲಿ ಹಾಕಿಕೊಳ್ಳುತ್ತಾರೆ. ನಂತರ ಅಪ್ಲಿಕೇಶನ್ ಮುಖಾಂತರ ಮನಿ ವಿವ್ ಲೋನ್ ಕಂಪನಿಯವರ ಬಳಿ ಲೋನ್‌ಗಾಗಿ ೨೦೨೧ರ ನವಂಬರ್ ತಿಂಗಳಲ್ಲಿ ಅರ್ಜಿ ಸಲ್ಲಿಸುತ್ತಾರೆ. ಕಂಪನಿಯವರು ಯಾವುದೇ ರೀತಿ ಪ್ರತಿಕ್ರಿಯಿಸದ ಕಾರಣ ಒಂದು ತಿಂಗಳವರೆಗು ಕಾದು ನಂತರ ಡಿಸೆಂಬರ್ ತಿಂಗಳಿನಲ್ಲಿ ಮತ್ತೊಮ್ಮೆ ಅಪ್ಲಿಕೇಶನ್ ಮುಖಾಂತರ ಅರ್ಜಿ ಸಲ್ಲಿಸುತ್ತಾರೆ. ಎರಡನೇ ಬಾರಿ ಅರ್ಜಿ ಸಲ್ಲಿಸಿದರೂ ಸಹ ಕಂಪನಿಯವರು ಯಾವುದೇ ರೀತಿ ಪ್ರತಿಕ್ರಿಯಿಸುವುದಿಲ್ಲ. ಮತ್ತು ಹಣವೂ ಸಹ ಇವರಿಗೆ ಬರುವುದಿಲ್ಲ. ಆದರೆ, ನಾಗರಾಜ್ ಚಾರಿ ಯವರ ಬ್ಯಾಂಕ್ ಖಾತೆಯ ಸಂಪೂರ್ಣ ವಿವರವನ್ನು ಮನಿ ವಿವ್ ಲೋನ್ ಕಂಪನಿಯು ಪಡೆದಿರುತ್ತಾರೆ ಮತ್ತು ಇವರ ಬಳಿ ಇ.ಸಿ.ಎಸ್(ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸರ್ವಿಸ್) ಫಾರಂಗು ಸಹ ಸಹಿ ಮಾಡಿಸಿಕೊಂಡಿರುತ್ತಾರೆ. ನಾಗರಾಜ್ ಚಾರಿರವರ ಬಳಿ ಮನಿ ವಿವ್ ಲೋನ್ ಕಂಪನಿಯು ಎಲ್ಲಾ ದಾಖಲೆಗಳನ್ನು ಪಡೆದಿದ್ದರೂ ಸಹ ಯಾವುದೇ ರೀತಿಯಲ್ಲಿ ಲೋನ್ ನೀಡಿರುವುದಿಲ್ಲ. ಕೆಲವು ದಿನಗಳ ಬಳಿಕ ಕಾದು ನಂತರ ಇವರು ಲೋನ್ ನೀಡುವುದಿಲ್ಲ ಎಂದು ನಾಗರಾಜ್ ಜಾರಿರವರು ಸುಮ್ಮನಾಗುತ್ತಾರೆ. ಆದರೆ ಕೆಲವು ತಿಂಗಳ ಬಳಿಕ ನಾಗರಾಜ್ ಚಾರಿರವರಿಗೆ ಅಚ್ಚರಿಯೊಂದು ಕಾದಿರುತ್ತದೆ. ಅದೇನೆಂದರೆ, ಫೆಬ್ರವರಿ ತಿಂಗಳ ೫ನೇ ತಾರೀಕು ತಾವು ಪಡೆದಿರುವ ಲೋನಿನ ಮೊದಲನೇ ಕಂತನ್ನು ಪಾವತಿಸಬೇಕೆಂದು ಮನಿ ವಿವ್ ಲೋನ್ ಸಂಸ್ಥೆಯು ನಾಗರಾಜ್ ಚಾರಿರವರ ದೂರವಾಣಿ ಸಂಖ್ಯೆಗೆ ಸಂದೇಶವನ್ನು ಕಳುಹಿಸಿರುತ್ತದೆ. ಇದನ್ನು ಕಂಡು ಅಚ್ಚರಿಗೊಂಡ ನಾಗರಾಜ್ ಚಾರಿರವರು ಮನಿ ವಿವ್ ಲೋನ್ ಅಪ್ಲಿಕೇಶನನ್ನು ತೆರೆದು ನೋಡುತ್ತಾರೆ. ಅದರಲ್ಲಿ ಡಿಸೆಂಬರ್-೨೭-೨೦೨೧ ರಂದು ತಮಗೆ ೧.೫ ಲಕ್ಷ ಲೋನ್ ನೀಡಿರುತ್ತೇವೆ ಎಂದು ತೋರಿಸುತ್ತದೆ. ಆದರೆ, ನಾಗರಾಜ್ ಚಾರ್ಯರವರ ಖಾತೆಗೆ ಹಣ ಮಾತ್ರ ಸಂದಾಯವಾಗಿರುವುದಿಲ್ಲ. ಗಾಬರಿಗೊಂಡ ನಾಗರಾಜ್ ಚಾರಿರವರು ತಮ್ಮ ಖಾತೆಯಿರುವ ಬ್ಯಾಂಕಿನ ಶಾಖೆಗೆ ಭೇಟಿ ನೀಡಿ ಇದರ ಬಗ್ಗೆ ಪರಿಶೀಲಿಸಿದಾಗ ಬ್ಯಾಂಕಿನವರು ತಮಗೆ ಯಾವುದೇ ರೀತಿಯ ಲೋನ್‌ಅನ್ನು ಯಾರೊಬ್ಬರು ನೀಡಿರುವುದಿಲ್ಲ ತಮ್ಮ ಖಾತೆಗೆ ಕೆಲವು ತಿಂಗಳಿನಿಂದ ಯಾವುದೇ ಇಂತಹ ದೊಡ್ಡ ಪ್ರಮಾಣದ ಹಣ ಸಂದಾಯವಾಗಿರುವುದಿಲ್ಲ ಎಂದು ತಿಳಿಸುತ್ತಾರೆ. ನಂತರ ಅವರ ಖಾತೆಯ ಸ್ಟೇಟ್ಮೆಂಟ್‌ಅನ್ನು ಪರಿಶೀಲಿಸಿದಾಗ ಅದು ಸರಿಯಾಗಿರುತ್ತದೆ. ಅವರ ಖಾತೆಗೆ ಯಾವುದೇ ರೀತಿಯ ಹಣ ಸಂದಾಯ ವಾಗಿರುವುದಿಲ್ಲ ಆದರೂ ಸಹ ಹಣ ಕಟ್ಟಬೇಕು ಎಂಬುವುದು ಎಷ್ಟರಮಟ್ಟಿಗೆ ಸರಿ? ನಂತರ ನಾಗರಾಜ ಚಾರಿರವರು ಹಣವನ್ನು ಪಡೆಯದೆ ಏಕೆ ಲೋನ್ ಕಟ್ಟಬೇಕು ಎಂದು ಲೋನ್ ಕಂಪನಿಯವರಿಗೆ ಪ್ರತಿಕ್ರಿಯಿಸದೆ ಸುಮ್ಮನಾಗುತ್ತಾರೆ. ಮಾರ್ಚ್ ತಿಂಗಳ ಐದನೇ ತಾರೀಕು ಮತ್ತೆ ಸಂದೇಶ ಬರಲು ಮುಂದಾಗುತ್ತದೆ. ತಾವು ಪಡೆದಿರುವ ಲೋನಿನ ಮೊದಲನೆ ಕಂತನ್ನು ಪಾವತಿಸಿರುವುದಿಲ್ಲ ಮತ್ತು ಎರಡನೇ ತಿಂಗಳ ಕಂತು ಸಹ ಬಂದಿದೆ ಎರಡು ತಿಂಗಳ ಕಂತನ್ನು ಪಾವತಿಸಬೇಕು ಇಲ್ಲವಾದಲ್ಲಿ ತಮ್ಮ ವಿರುದ್ಧ ದೂರು ನೀಡಲಾಗುವುದು ಎಂದು ಸಂದೇಶ ಕಳುಹಿಸುತ್ತಾರೆ. ಸಂದೇಶ ಕಳುಹಿಸುವುದು ಮಾತ್ರವಲ್ಲದೆ ಕರೆಮಾಡಿ ಬೆದರಿಸಲು ಸಹ ಮುಂದಾಗುತ್ತಾರೆ. ಅಂತಹ ಸಂದರ್ಭದಲ್ಲಿ ನಾಗರಾಜು ಚಾರಿರವರು ಮನಿ ವಿವ್ ಲೋನ್ ಕಂಪನಿಯವರಿಗೆ ಕರೆ ಮಾಡಿ ನನಗೆ ಯಾವುದೇ ರೀತಿಯ ಹಣ ಬಂದಿಲ್ಲ ಆದರೂ ಸಹ ತಾವು ಲೋನ್ ಹಣವನ್ನು ಪಾವತಿಸಲು ಹೇಳುತ್ತಿರುವಿರಿ ನಾನು ಕಟ್ಟುವುದಿಲ್ಲ ಎಂದಾಗ ಮನಿ ವಿವ್ ಲೋನ್ ಕಂಪನಿಯವರು ನಾವು ತಮಗೆ ಲೋನ್ ನೀಡಿರುವುದಕ್ಕೆ ನಮ್ಮ ಬಳಿ ದಾಖಲೆಯಿದೆ ಹಾಗೂ ತಾವು ನೀಡಿರುವ ತಮ್ಮ ಕಥೆಯ ಸಂಪೂರ್ಣ ದಾಖಲೆಯು ಸಹ ನಮ್ಮ ಬಳಿ ಇದೆ ಮತ್ತು ಇ.ಸಿ.ಎಸ್ ಫಾರಂಗೆ ತಾವೇ ಸಹಿ ಮಾಡಿರುತ್ತೀರಿ ತಾವು ಈಗ ಲೋನ್‌ನಿನ್ನ ಹಣವನ್ನು ಕಟ್ಟಲೇಬೇಕು ನಿರಾಕರಿಸಿದ್ದಲ್ಲಿ ತಮ್ಮ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಬೆದರಿಸುತ್ತಾರೆ. ಬ್ಯಾಂಕಿನವರ ಹಾಗೂ ತಮ್ಮ ಸ್ನೇಹಿತರ ಸಲಹೆಯನ್ನು ಪಡೆದ ನಾಗರಾಜ್ ಚಾರಿರವರು ಲೋನ್ ಕಂಪನಿಯವರ ಯಾವುದೇ ಸಂದೇಶಕ್ಕೂ ಪ್ರತಿಕ್ರಿಯಿಸದೆ ಸುಮ್ಮನಾಗುತ್ತಾರೆ. ಕೆಲವು ದಿನಗಳ ಬಳಿಕ ಅಂದರೆ ಮಾರ್ಚ್ ತಿಂಗಳ ಅಂತ್ಯದಲ್ಲಿ ಇವರಿಗೆ ಅಂಚೆಯ ಮುಖಾಂತರ ಪತ್ರವೊಂದು ಬರುತ್ತದೆ ಅದೇನೆಂದರೆ ಲೋನ್ ಕಟ್ಟದಿರುವ ಕಾರಣ ಲೋನ್ ಕಂಪನಿಯ ಪರವಾಗಿ ನಾಗರಾಜ್ ಜಾರಿರವರಿಗೆ ವಕೀಲ ನೋರ್ವ ನೋಟಿಸ್ ಕಳುಹಿಸಿರುತ್ತಾನೆ. ಹಣವೇ ನೀಡದೆ ದಿನಕ್ಕೆ ನಾಲ್ಕೈದು ಬಾರಿ ಕರೆ ಮಾಡಿ ಹಣ ಪಾವತಿಸಿ ಎಂದು ಪಿಡಿಸುವುದಲ್ಲದೆ ವಕೀಲನೋರ್ವನ ಮುಖಾಂತರ ನೋಟಿಸನ್ನು ಸಹ ಕಳುಹಿಸಿದ್ದಾರೆ ಎಂದರೆ ನಿಜಕ್ಕೂ ಈ ಕಂಪನಿಯು ಹಗಲು ದರೋಡೆಗೆ ಇಳಿದಿದೆ ಎಂದರೆ ತಪ್ಪಾಗಲಾರದು. ತನ್ನ ವಕೀಲ ವೃತ್ತಿಯನ್ನು ಮರೆತು ಹಣ ಕೊಟ್ಟರೆ ಏನು ಬೇಕಾದರೂ ಮಾಡುವೆ ಎಂಬಂತೆ ಸಿಕ್ಕ ಸಿಕ್ಕವರಿಗೆ ನೋಟಿಸ್ ನೀಡುತ್ತಿರುವ ಇಂತಹ ವಕೀಲನನ್ನು ಏನನ್ನಬೇಕು? ಹಣವೇ ನೀಡದೆ ಇಷ್ಟರಮಟ್ಟಿಗೆ ಹಿಂಸಿಸುತ್ತಿದ್ದಾರೆ ಎಂದರೆ ಹಣ ಪಡೆದವರ ಪರಿಸ್ಥಿತಿ ಹೇಗಿರಬಹುದು? ಈ ವಿಚಾರದಲ್ಲಿ ನಾಗರಾಜ್ ಚಾರಿ ರವರು ಯಾವುದೇ ರೀತಿಯಲ್ಲೂ ಹಣ ಕಳೆದುಕೊಂಡಿಲ್ಲ ಆದರೆ ಕೆಲವು ತಿಂಗಳುಗಳ ಕಾಲ ನೆಮ್ಮದಿಯನ್ನು ಕಳೆದುಕೊಂಡಿದ್ದಾರೆ. ಸದ್ಯ ನಾಗರಾಜ್ ಚಾರಿರವರು ಇವರ ಹಿಂಸೆಯನ್ನು ತಾಳಲಾರದೆ ನ್ಯಾಯ ಕೊಡಿಸಿ ಎಂದು ಸೈಬರ್ ಕ್ರೆöÊಂ ಪೊಲೀಸರ ಮೊರೆ ಹೋಗಿದ್ದಾರೆ. ಆನ್ಲೈನ್ನಲ್ಲಿ ಬರುವುದೆಲ್ಲವೂ ಸತ್ಯವಲ್ಲ ಇಂತಹ ಮೋಸದ ಕಂಪನಿಯ ಬಲೆಗೆ ಬೀಳುವ ಮುನ್ನ ಎಚ್ಚರಿಕೆವಹಿಸಿ. ತಮ್ಮ ಬ್ಯಾಂಕ್ ಖಾತೆಯ ಯಾವುದೇ ವಿವರಗಳನ್ನು ಮತ್ತೊಬ್ಬರ ಜೊತೆಗೆ ಹಂಚಿಕೊಳ್ಳದಿರಿ.

error: Content is protected !!