ಅಬ್ ತೇರೆ ಬಿನ್ ಹಮ್ ಝೀ ಲೇಂಗೆ ಎಂಬ ಹಾಡಿಗೆ ರೈಲ್ವೆ ಟ್ರ್ಯಾಕ್ನಲ್ಲಿ ತಾಯಿ ಹೆಜ್ಜೆ ಹಾಕಿದರೆ ಮಗಳು ಅದನ್ನು ರೆಕಾರ್ಡ್ ಮಾಡಿದ್ದಾಳೆ. ರೈಲು ಹಳಿಗಳ ಮೇಲೆ ತಾಯಿ ತನ್ನ ನೃತ್ಯ ಕೌಶಲ್ಯವನ್ನು ಪ್ರದರ್ಶಿಸುತ್ತಿದ್ದರೆ ಮಗಳು ಇದನ್ನು ಮೊಬೈಲ್ ಕ್ಯಾಮರಾದಲ್ಲಿ ಶೂಟ್ ಮಾಡುತ್ತಿದ್ದಳು ಎನ್ನಲಾಗಿದೆ.
ವೈರಲ್ ಆಗಿರುವ ಈ ವಿಡಿಯೋದಲ್ಲಿ, ತಾಯಿ ರೈಲು ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿರೋದನ್ನು ಕಾಣಬಹುದಾಗಿದೆ. ಬಳಿಕ ರೈಲು ಹಳಿಗಳ ತಾಯಿ ನೃತ್ಯ ಪ್ರದರ್ಶಿಸಿದ್ದಾರೆ. ಆಗ್ರಾದ ಫೋರ್ಟ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ರೈಲು ಹಳಿಗಳ ಮೇಲೆ ನೃತ್ಯ ಮಾಡಿದ ಮಹಿಳೆಯನ್ನು ಮೀನಾ ಸಿಂಗ್ ಎಂದು ಗುರುತಿಸಲಾಗಿದೆ. ಮೀನಾ ಸಿಂಗ್ ಸ್ವಂತ ಯುಟ್ಯೂಬ್ ಚಾನೆಲ್ ಹೊಂದಿದ್ದು ಇದರಲ್ಲಿ 47 ಸಾವಿರಕ್ಕೂ ಅಧಿಕ ಸಬ್ಸ್ಕ್ರೈಬರ್ ಹೊಂದಿದ್ದಾಳೆ. ಈಕೆಯ ಯುಟ್ಯೂಬ್ ಚಾನೆಲ್ನಲ್ಲಿ ರೈಲ್ವೆ ಹಳಿಗಳ ಮೇಲೆ ಮಾಡಿದ ಇನ್ನೂ ಅನೇಕ ವಿಡಿಯೋಗಳನ್ನು ಕಾಣಬಹುದಾಗಿದೆ. ರೈಲ್ವೆ ಹಳಿಗಳ ಮೇಲೆ ಈ ಮಹಿಳೆ ಭೋಜ್ಪುರಿ ಹಾಡಿಗೆ ಕುಣಿದಿದ್ದು ಆ ಸಂದರ್ಭದಲ್ಲಿ ರೈಲು ಹಳಿಗಳ ಮೇಲೆ ಬಂದಿದೆ. ರೈಲು ಬಂದರೂ ಕ್ಯಾರೆ ಎನ್ನದೇ ಮೀನಾ ಸಿಂಗ್ ತನ್ನ ಪಾಡಿಗೆ ತಾನು ರೀಲ್ಸ್ ಮಾಡೋದ್ರಲ್ಲಿ ಬ್ಯುಸಿ ಆಗಿದ್ದರು.
ಮೀನಾ ಸಿಂಗ್ರ ಈ ವೈರಲ್ ವಿಡಿಯೋ ಎಲ್ಲೆಡೆ ಸಾಕಷ್ಟು ವಿರೋಧಕ್ಕೆ ಕಾರಣವಾಗುತ್ತಿದ್ದಂತೆಯೇ ಈಕೆಯ ವಿರುದ್ಧ ರೈಲ್ವೆ ಕಾಯ್ದೆ 145 ಹಾಗೂ 147 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತಾಯಿ ಹಾಗೂ ಮಹಿಳೆ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಇನ್ಮೇಲೆ ಈ ರೀತಿಯ ಕೃತ್ಯ ಎಸಗುವುದಿಲ್ಲ ಎಂದು ತಾಯಿ ಮಗಳು ತಪ್ಪೊಪ್ಪಿಗೆ ನೀಡಿದ ಬಳಿಕ ಇಬ್ಬರಿಗೂ ಜಾಮೀನು ನೀಡಲಾಗಿದೆ.
आगरा में रेलवे ट्रेक पर प्लेटफार्म पर मां बेटी ठुमके लगा रही थी । माँ बेटी ने बीच रेलवे ट्रेक पर बनाई थी रील,
आरपीएफ ने मां बेटी को पकड़ा और हवालात की कार्यवाही जारी है@RPF_INDIA @spgrpagra @DeepikaBhardwaj @Uppolice pic.twitter.com/jsi6b6fqoy— Madan Mohan Soni (@madanjournalist) July 23, 2023