ಮುಂಡಗೋಡ: ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮುಂಡಗೋಡ ಪೊಲೀಸರು ಬಂಧಿಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅರಮನಕೇರಿ ನಿವಾಸಿ ಆಗಿರುವ ಮೊಹಮ್ಮದ್ ನಜೀರ್ ಫಾರೂಕ್ ಎಂಬಾತನೆ ಬಂದಿತ ಆರೋಪಿಯಾಗಿದ್ದಾನೆ.
ಮುಂಡಗೋಡ ತಾಲೂಕಿನ ಮಳಗಿ ಸಮೀಪ ದಾಸನಕೊಪ್ಪ ಕ್ರಾಸ್ ಹತ್ತಿರ ರಸ್ತೆಯಲ್ಲಿ ಯಾವುದೇ ಪರವಾನಿಗೆಯನ್ನು ಪಡೆಯದೆ ಸುಮಾರು 40 ಸಾವಿರ ರೂಪಾಯಿ ಮೌಲ್ಯದ 500 ಗ್ರಾಂ ತೂಕದ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಗಾಂಜಾ ಸಮೇತ ಬಂಧಿಸಲಾಗಿದೆ.
ಸಿಪಿಐ ಸಿದ್ದಪ್ಪ ಸಿಮಾನಿ ಅವರ ಮಾರ್ಗದರ್ಶನದಲ್ಲಿ ಪಿ ಎಸ್ ಐ ಯಲ್ಲಾಲಿಂಗ ಕುನ್ನೂರ್, ಕ್ರೈಂ ಪಿಎಸ್ಐ ಎನ್ ಡಿ ಜಕ್ಕಣ್ಣನವರ್ ಸಿಬ್ಬಂದಿಗಳಾದ ಕೊಟೇಶ್ ನಾಗರೊಳ್ಳಿ, ರಾಜೇಶ್ ನಾಯಕ್, ಮಹಾಂತೇಶ್ ಮುಧೋಳ, ಅಣ್ಣಪ್ಪ ಬಡಿಗೇರ್, ತಿರುಪತಿ ಚೌಡಣ್ಣನವರ್, ಸಂಜು ರಾಥೋಡ್ ದಾಳಿಯಲ್ಲಿ ಪಾಲ್ಗೊಂಡಿದ್ದರು.
ವರದಿ: ಮಂಜುನಾಥ ಹರಿಜನ.