ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದಲ್ಲಿರುವ ಮಾರಿಕಾಂಬಾ ದೇವಸ್ಥಾನದಲ್ಲಿ ದೇವಿಯ ಮೂರ್ತಿಯ ಮೇಲೆ ಇದ್ದ 40 ಗ್ರಾಂ ತೂಕದ ಎರಡು ಬಂಗಾರದ ಸರವನ್ನು ಇದೇ ಜೂನ್ 26 ರಾತ್ರಿ ಯಾರೋ ಕಳ್ಳತನ ಮಾಡಿದ್ದಾರೆಂದು ಗ್ರಾಮಸ್ಥರು ಪೊಲೀಸ್ ದೂರು ದಾಖಲಿಸಿದ್ದರು.ಈ ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು ಅದೇ ಗ್ರಾಮದ ಮಹಾಂತೇಶ ಅರ್ಜುನ ಅರೆಗೊಪ್ಪ (43) ಎಂಬಾತನನ್ನು ಬಂಗಾರದ ಆಭರಣ ಹಾಗೂ ಕಳ್ಳತನಕ್ಕೆ ಬಳಸಿದ್ದಬೈಕ್ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.ಡಿ.ವೈ.ಎಸ್ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿ.ಪಿ.ಐ ಸಿದ್ದಪ್ಪಾ ಸಿಮಾನಿ, ಪಿ.ಎಸ್.ಐ ಬಸವರಾಜ ಮಬನೂರ,ಎನ್ ಡಿ ಜಕ್ಕಣ್ಣವರ್, ಸಿಬ್ಬಂದಿಗಳಾದ ಮಣಿಮಾಲನ್ ಮೇಸ್ತ್ರಿ, ಮಹಮ್ಮದ್ ಸಲೀಂ, ಗಣಪತಿ, ಕೋಟೇಶ್ ನಾಗರಹಳ್ಳಿ, ಅಣ್ಣಪ್ಪ ಬಡಿಗೇರ, ಬಸವರಾಜ ಲಮಾಣಿ ,ವಿವೇಕ ಪಟಗಾರ, ಸಹದೇವ, ಶರತ ದೇವಳ್ಳಿ, ತಿರುಪತಿ ಚೌಡಣ್ಣನವರ, ಅರುಣ ಬಾಗೇವಾಡಿ, ಮಹಾಂತೇಶ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ವರದಿ: ಮಂಜುನಾಥ ಹರಿಜನ

error: Content is protected !!