ಮುಂಡಗೋಡ ಪಟ್ಟಣಕ್ಕೆ ಹಾಗೂ ಟಿಬೇಟಿಯನ್ ಕಾಲೋನಿಗೆ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಇಂದು ಭೇಟಿ ನೀಡಿ ಹಲವಾರು ವಿಷಯಗಳ ಕುರಿತು ಚರ್ಚಿಸಿದರು.
ಮುಂಡಗೋಡದ ಟಿಬೇಟಿಯನ್ ಕಾಲೋನಿ, ಗಣೇಶ ಚತುರ್ಥಿ ಅಂಗವಾಗಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಸ್ಥಳಗಳಿಗೆ, ಪಟ್ಟಣದ ಹೊರವಲಯದಲ್ಲಿರುವ ಅಮ್ಮಾಜಿ ಕೆರೆ, ಹಾಗೂ ಇತ್ತೀಚಿನ ದಿನಗಳಲ್ಲಿ ಭಾರಿ ಮಳೆಯಿಂದಾಗಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತಿರುವ ಹತ್ತಿರ ಬಂಕಾಪು ರಸ್ತೆಗೆ ( ಹೆಗಡೆ ದವಾಖಾನೆ) ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಸ್ಯೆಗಳ ಪರಿಹಾರದ ಕುರಿತು ಚರ್ಚಿಸಿದರು.ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು ಬಂಕಾಪುರ ರಸ್ತೆಯಲ್ಲಿ ಭಾರಿ ಮಳೆಯಿಂದ ಆಗುತ್ತಿರುವ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳಿಗೆ ನಗರೋತ್ಥಾನ ಯೋಜನೆಯಲ್ಲಿ ಶಾಶ್ವತ ಪರಿಹಾರವನ್ನು ಕಲ್ಪಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯತಿಯವರು ಮಾಡಲಿದ್ದಾರೆ ಎಂದು ತಿಳಿಸಿದರು.

ಅತೀ ಹೆಚ್ಚು ಮಳೆಯಿಂದ ಇವರೆಗೆ ತಾಲೂಕಿನಲ್ಲಿ 39 ಮನೆಗಳು ತೀವ್ರ ಹಾನಿಗೆ ಒಳಪಟ್ಟಿವೆ ಇವುಗಳು 5 ಲಕ್ಷ ರೂಪಾಯಿಯ ಪರಿಹಾರದ ಅಡಿಯಲ್ಲಿ ಬರುತ್ತವೆ ಇವುಗಳಿಗೆ ಮೊದಲ ಹಂತದಲ್ಲಿ 95 ಸಾವಿರ ರೂಪಾಯಿಗಳನ್ನು ಮೊದಲ ಹಂತವಾಗಿ 48 ಗಂಟೆಯಿಂದ 72 ಗಂಟೆಗಳ ಒಳಗಾಗಿ ನೀಡುವಂತೆ ಸೂಚನೆ ನೀಡಲಾಗಿದೆ. ಉಳಿದ ಹಣವನ್ನು ಹಂತಹಂತವಾಗಿ ಮನೆ ನಿರ್ಮಿಸುವ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ನಂತರ 99 ಮನೆಗಳು (ಪ್ರಕರಣಗಳು) ಸಿ ಕೆಟಗರಿಯಲ್ಲಿ ಬರುತ್ತವೆ ಇವುಗಳಿಗೆ 50 ಸಾವಿರ ರೂಪಾಯಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಎಸ್. ಪಿ ಸುಮನ್ ಪನ್ನೇಕರ್, ಶಿರಸಿ ವಿಭಾಗದ ಡಿಎಸ್ಪಿ ರವಿ ನಾಯ್ಕ ,ಸಿ.ಪಿ.ಐ ಸಿದ್ದಪ್ಪ ಸಿಮಾನಿ, ತಹಸಿಲ್ದಾರ್ ಶಂಕರ್ ಗೌಡಿ,ಪಟ್ಟಣ ಪಂಚಾಯತಿ ಸದಸ್ಯರಾದ ಪಣಿರಾಜ ಹದಳಗಿ,ಪ್ರಮುಖರಾದ ಸಿದ್ದಪ್ಪ ಹಡಪದ, ಚಿದಾನಂದ ಹರಿಜನ, ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು, ಇತರರು ಹಾಜರಿದ್ದರು.
ವರದಿ :ಮಂಜುನಾಥ ಹರಿಜನ

error: Content is protected !!