Latest

ಮುಂಡಗೋಡು ತಾಲೂಕಿನ ಚೆಸ್ ಆಟದ ಶಕ್ತಿ ಕೇಂದ್ರ ಸುಳ್ಳಳ್ಳಿ..!

ಮುಂಡಗೋಡ: ತಾಲೂಕಿನ ಸುಳ್ಳಳ್ಳಿ ಗ್ರಾಮದಲ್ಲಿ ಚೆಸ್ ಆಟಕ್ಕೆ ಭದ್ರ ಬುನಾದಿ ಸಿಕ್ಕಿದೆ ಎಂದು ಹೇಳಬಹುದು ಹಾಗಾಗಿ ಪ್ರತಿವರ್ಷ ರಾಜ್ಯಮಟ್ಟದವರೆಗೂ ಎರಡ್ಮೂರು ವಿದ್ಯಾರ್ಥಿಗಳು ಪ್ರತಿನಿಧಿಸುತ್ತಾರೆ.

2022 ಮತ್ತು 23ನೇ ಸಾಲಿನಲ್ಲಿ ಬೇರೆ ಬೇರೆ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಳ್ಳಳ್ಳಿ ಗ್ರಾಮದ ಒಟ್ಟು 15 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ

ಇದೆ ಸೆಪ್ಟೆಂಬರ್ 8ರಂದು ಪಾಳಾ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳಳ್ಳಿಯ 7 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.

14 ವರ್ಷದೊಳಗಿನವರ ಬಾಲಕರ ವಿಭಾಗ
1st ವಿನಾಯಕ ಬಸವಣ್ಣಿ ಪಾಟೀಲ
2nd ವಿಕಾಸ ಕವಲಗಿ
4th ಮಹಮ್ಮದ್ ಸಲೀಂ ಮಾಬುಸಾಬ ಸುಳ್ಳಳ್ಳಿ

14 ವರ್ಷದೊಳಗಿನವರ ಬಾಲಕಿಯರ ವಿಭಾಗ
1st ಭವ್ಯ ಲೋಕಪ್ಪ ಅಮ್ಮಿನಬಾವಿ
2nd ರಿಜಾಅಂಜುಮ್ ರಿಯಾಜಸಾಬಸಾಬ ಹನಕನಳ್ಳಿ
3rd ಸುನಿತಾ ವಿಠ್ಠು ಯಮಕರ
4th ಅರ್ಪಿತಾ ಚಂದ್ರಕಾಂತ ಹುಡೇಲಕೊಪ್ಪ

ಸರಕಾರಿ ಅಂದಲಗಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಳ್ಳಳ್ಳಿ ಗ್ರಾಮದ ವಿದ್ಯಾರ್ಥಿಗಳು
ಬಾಲಕರ ವಿಭಾಗ
2nd ಲೋಕೇಶ್ ಗೌಡ
3rd ಇಸ್ಮಾಯಿಲ್ ಮಹಮ್ಮದ್ಅಲಿ ಮಮ್ದುನವರ
4th ಲಕ್ಕು ವಿಠ್ಠು ಯಮಕರ

ಬಾಲಕಿಯರ ವಿಭಾಗ
1st ಆಫ್ರೀನ್ ಮಕ್ಬುಲ್ ಮಮ್ದುನವರ
2nd ನಿಖಿತಾ ಬಸವಣ್ಣಿ ಹೆಗ್ಗಾದಿ
3rd ಸುವರ್ಣ ಈಶ್ವರ ಮಿರಾಶಿ

ಕರಗಿನಕೊಪ್ಪದ ಮೊರಾರ್ಜಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ
5th ಮಹೇಂದ್ರ ಗೌಡ

ಪಿಯುಸಿ ವಿಭಾಗದಲ್ಲಿ ಮುಂಡಗೋಡ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ
2nd ನಾಗರಾಜ ಮಾದರ

ಹೀಗೆ ಪ್ರಾಥಮಿಕ ಶಾಲಾ ವಿಭಾಗದಲ್ಲಿ 7 ವಿದ್ಯಾರ್ಥಿಗಳು
ಪ್ರೌಢಶಾಲಾ ವಿಭಾಗದಲ್ಲಿ ಏಳು ವಿದ್ಯಾರ್ಥಿಗಳು
ಹಾಗೂ ಪಿಯುಸಿ ವಿಭಾಗದಲ್ಲಿ ಒಬ್ಬ ವಿದ್ಯಾರ್ಥಿ
ಒಟ್ಟು 15 ವಿದ್ಯಾರ್ಥಿಗಳು ಈ ವರ್ಷ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರತಿ ವರ್ಷ ಚೆಸ್ ಆಟದಲ್ಲಿ ಈ ಸಾಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸುಳ್ಳಳ್ಳಿಯ ಎಸ್ ಡಿಎಂ ಸಿ ಸಮಿತಿಯವರು, ಶಾಲೆಯ ಮುಖ್ಯ ಶಿಕ್ಷಕರು,ಶಿಕ್ಷಕ ಬಳಗದವರು ಗ್ರಾಮಸ್ಥರು ಹಾಗೂ ಅಂದಲಗಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದವರು ಹೃದಯಪೂರ್ವಕವಾಗಿ ಅಭಿನಂದಿಸಿದ್ದಾರೆ ಹಾಗೆಯೇ ಜಿಲ್ಲಾಮಟ್ಟದಲ್ಲೂ ಉತ್ತಮ ಸಾಧನೆಗೈಲಿ ಎಂದು ಸರ್ವರು ಆಶಿಸುತ್ತಿದ್ದಾರೆ.

ಈ ಎಲ್ಲಾ ವಿದ್ಯಾರ್ಥಿಗಳಿಗೆ ಚೆಸ್ ಆಟದ ಬುನಾದಿ ಹಂತದ ನಿಯಮಗಳು ಹಾಗೂ ಮಾರ್ಗದರ್ಶನ ನೀಡಿದವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಳಗದವರು. ಸುಳ್ಳಳ್ಳಿ ಶಾಲೆಯಲ್ಲಿ ಊಟದ ವಿರಾಮದ ಸಮಯದಲ್ಲಿ ಹಾಗೂ ಸಂಜೆ ಶಾಲಾ ಅವಧಿಯ ನಂತರದಲ್ಲಿ ಮಕ್ಕಳಿಗೆ ಚೆಸ್ ಆಟದ ಅಭ್ಯಾಸ ಮಾಡಿಸಲಾಗುತ್ತದೆ.
ವರದಿ: ಮಂಜುನಾಥ ಹರಿಜನ

kiran

Recent Posts

ಪತ್ನಿಯ ಶೀಲ ಶಂಕಿಸಿ ಶೆಡ್ ನಲ್ಲಿ ಕೂಡಿಟ್ಟ ಪೊಲೀಸ್ ಪೇದೆ.

ಜನರಿಗೆ ನ್ಯಾಯ ಕೊಡಿಸಬೇಕಿದ್ದ ಮಹಿಳೆಯರ ರಕ್ಷಣೆ ಮಾಡಬೇಕಿದ್ದ ಮಹಿಳೆಯರ ರಕ್ಷಣೆ ಸದಾ ಸಿದ್ದರಿರಬೇಕಾಗಿದ್ದ ಪೊಲೀಸ್ ಸಿಬ್ಬಂದಿಯೇ ತನ್ನ ಹೆಂಡತಿಯ ಶೀಲ…

1 month ago

ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕಾಮಗಾರಿ ಮಾಡಿದ ಬಿಲ್ ಮಾಡಿಕೊಡಲು ಗುತ್ತಿಗೆದಾರನ ಬಳಿ ಲಂಚ ಪಡೆಯುವಾಗ ಅಧಿಕಾರಿಗಳು ಲೋಕಾಯುಕ್ತ ಬಲೆಗೆ…

1 month ago

ಸಾಕು ತಂದೆಯಿಂದಲೇ ಭೀಕರ ಕೊಲೆಯಾದ ಇಬ್ಬರು ಹೆಣ್ಣು ಮಕ್ಕಳು.

ಬೆಂಗಳೂರಿನ ದಾಸರಹಳ್ಳಿಯಲ್ಲಿ ಸಾಕು ತಂದೆಯೊಬ್ಬ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ತಲೆಮೆರೆಸಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಈ ಭೀಕರ…

1 month ago

ಇನ್ನು ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿಸುವಂತಿಲ್ಲ: ಸಿಎಂ

ಕೃಷಿಕರಲ್ಲದವರಿಗೆ ಇನ್ನೂ ಕೃಷಿ ಭೂಮಿ ಸಿಗುವುದಿಲ್ಲ. ಬಿಜೆಪಿ ತಂದಿದ್ದ ಭೂ ಕಾಯ್ದೆ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ…

1 month ago

ಕಾಮ ಬಯಕೆ ಇದ್ದರೇ ‘ರೆಡ್ ಲೈಟ್ ಏರಿಯಾ’ಗೆ ಬನ್ನಿ, ಅತ್ಯಾಚಾರ ಮಾಡಬೇಡಿ: ಲೈಂಗಿಕ ಕಾರ್ಯಕರ್ತೆ

ಸೋನಾಗಾಚಿ ರೆಡ್ ಲೈಟ್ ಪ್ರದೇಶದ ಮಹಿಳೆಯೊಬ್ಬರು ಯುವ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯ ನಂತರ ಹೃದಯ ವಿದ್ರಾವಕ ಹೇಳಿಕೆಯೊಂದಿಗೆ…

1 month ago

ಶಾಲೆಯ ಮುಂದೆ ಇಲ್ಲ ಸ್ವಚ್ಛತೆ; ರೋಗಕ್ಕೆ ಆಹ್ವಾನ ನೀಡುತ್ತಿರುವ ಪಿಡಿಒ!

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಬಿಲಕೆರೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬಿಲಕೆರೂರ…

1 month ago