ಇತ್ತೀಚೆಗೆ ಸಂಸದ ಪ್ರತಾಪ್ ಸಿಂಹ ನಟಿ ರಮ್ಯಾ ಜೊತೆ ಫೋಟೊ ಕ್ಲಿಕ್ಕಿಸಿಕೊಂಡು ಶೇರ್ ಮಾಡಿದ್ದಾರೆ. “ನಾನು ತುಂಬಾ ಇಷ್ಟಪಡುವ ಕನ್ನಡದ ನಟಿ ಮೋಹಕತಾರೆ ರಮ್ಯಾ ಮೇಡಂ ಜೊತೆ” ಎಂದು ಬರೆದ ಪ್ರತಾಪ್ ಸಿಂಹ ಫೋಟೊ ಹಂಚಿಕೊಂಡಿದ್ದಾರೆ. ಅದಕ್ಕೆ ನೆಟ್ಟಿಗರೊಬ್ಬರು “ಸಾಕಷ್ಟು ಸಂದರ್ಭಗಳಲ್ಲಿ ನೀವು ರಮ್ಯಾ ಅವರನ್ನು ಟೀಕಿಸಿದ್ದಿರಿ. ಈಗ ನೋಡಿದರೆ ನೀವು ಎಲ್ಲರಂತೆ ಎಂದು ಕಾಣಿಸುತ್ತಿದೆ” ಎಂದು ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್‌ಗೆ ಪ್ರತಿಕ್ರಿಯಿಸಿರುವ ಸಂಸದರಾದ ಪ್ರತಾಪ್ ಸಿಂಹ, “ನಾನು ಈಗಲೂ ರಾಜಕೀಯವಾಗಿ ಟೀಕಿಸುತ್ತೇನೆ. ಆದರೆ ಆಕೆಯ ಅಭಿನಯ ನನಗೆ ಇಷ್ಟ” ಎಂದು ರಿಪ್ಲೆ ಮಾಡಿದ್ದಾರೆ.