ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಆಘಾತಕಾರಿ ವಿಡಿಯೋವೊಂದು ವೈರಲ್ ಆಗ್ತಿದ್ದು, ಲೋಕಲ್ ರೈಲಿನಲ್ಲಿ ಕುಳಿತ ಪ್ರೇಮಿಗಳಿಬ್ಬರು ಅಕ್ಷರಶಃ ಮೈ ಮರೆತಿರುವುದು ಕಂಡು ಬಂದಿದೆ. ಸಾರ್ವಜನಿಕ ಸ್ಥಳ ಎಂಬುದನ್ನ ಮರೆತು ಪ್ರೇಮಿಗಳಿಬ್ಬರು ಲೋಕಲ್ ರೈಲಿನಲ್ಲಿ ಸರಸ ಶುರು ಮಾಡಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಅಕ್ಕಪಕ್ಕದಲ್ಲಿ ಯಾರಿದ್ದಾರೆ ಎನ್ನುವ ಪರಿವೇ ಇಲ್ಲದೇ ಅಸಭ್ಯವಾಗಿ ವರ್ತಿಸಿದ ಈ ಪ್ರೇಮಿಗಳ ನಡೆ ಸಧ್ಯ ಎಲ್ಲೆಡೆ ಟೀಕೆಗೆ ಗುರಿಯಾಗುತ್ತಿದೆ.

ವಿಡಿಯೋದಲ್ಲಿ ಒಬ್ಬ ಹುಡುಗಿ ಸಾರ್ವಜನಿಕವಾಗಿ ಹುಡುಗನಿಗೆ ಚುಂಬಿಸುತ್ತಾಳೆ, ಲಿಪ್ ಲಾಕ್ ಮಾಡುತ್ತಾಳೆ. ಇನ್ನು ಅಕ್ಕಪಕ್ಕ ಜನರಿದ್ದಾರೆ ಅನ್ನೋದನ್ನೂ ಗಮನಿಸದೇ ಯುವತಿ, ತನ್ನ ಪ್ರಿಯಕರನಿಗೆ ಪದೇ ಪದೇ ಚುಂಚಿಸುತ್ತಿದ್ದು, ಪಕ್ಕದಲ್ಲಿದ್ದ ಮತ್ತೊಬ್ಬ ಪ್ರಯಾಣಿಕರು ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಯುವಕ ತನ್ನ ಫೋನ್‌ನಲ್ಲಿ ಏನನ್ನೋ ನೋಡುತ್ತಿರುವಾಗ ಆತನ ಗೆಳತಿ ಪಕ್ಕಕ್ಕೆ ಬಂದು ಮೈಗೆ ಒರಗಿಕೊಂಡು ಇದ್ದಕ್ಕಿದ್ದಂತೆ ಯುವಕನಿಗೆ ಚುಂಬಿಸುತ್ತಾಳೆ. ಮೊದಲು ಕೆನ್ನೆಗೆ ಮುತ್ತಿಟ್ಟ ಯುವತಿ, ನಂತ್ರ ಲಿಪ್ ಲಾಕ್ ಮಾಡಿದ್ದಾಳೆ. ಸಧ್ಯ ಈ ವಿಡಿಯೋ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

error: Content is protected !!