ಹಿಂದೂ ಧರ್ಮದ ಅತ್ಯಂತ ಮಹತ್ವದ ಹಾಗೂ ಪವಿತ್ರ ಉತ್ಸವಗಳಲ್ಲಿ ಒಂದಾದ ಮಹಾ ಕುಂಭಮೇಳವು ಜನವರಿ 13 ರಂದು ಪ್ರಾರಂಭಗೊಂಡಿದೆ. ಈ ಆಪರೂಪದ ಮಹಾ ಉತ್ಸವವು ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿದೆ, ಈ ಮಹಾ ಕುಂಭಮೇಳಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ.
ಲಕ್ಷಾಂತರ ಸಂಖ್ಯೆಯ ನಾಗಾ ಸಾಧುಗಳು ಮತ್ತು ಸಾಧು ಸಂತರು ಕೂಡ ಈ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮಹಾ ಕುಂಭಮೇಳಕ್ಕೆ ಸಂಬಂಧಿಸಿದ ವಿವಿಧ ವಿಡಿಯೋಗಳು ವ್ಯಾಪಕವಾಗಿ ಹರಿದಾಡುತ್ತಿವೆ. ಈ ನಡುವೆ, ಮಹಾ ಕುಂಭಮೇಳಕ್ಕೆ ಸಂಬಂಧಿಸಿದ ಒಂದು ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ನಾಗಾ ಸಾಧುವೊಬ್ಬರು ಯೂಟ್ಯೂಬರ್‌ನ್ನು ಹೊಡೆದೋಡಿಸುತ್ತಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ, ಮೈಕ್ ಹಿಡಿದಿದ್ದ ಯೂಟ್ಯೂಬರ್‌ ಬಬ್ಬ, ನಾಗಾ ಸಾಧುವೊಬ್ಬರ ಬಳಿ ಹೋಗಿ, “ನೀವು ಯಾವಾಗ ಸನ್ಯಾಸಿ ಪಂಥವನ್ನು ಸೇರಿದಿರಿ?” ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಇದಕ್ಕೆ ಶಾಂತವಾಗಿ ಉತ್ತರಿಸಿದ ಸಾಧು, ನಂತರ ಯೂಟ್ಯೂಬರ್‌ನ ಹೆಚ್ಚಿದ ಪ್ರಶ್ನೆಗಳನ್ನ ಕೇಳಿ, ಆತನನ್ನು ಅಲ್ಲಿಂದ ಹೊರಹಾಕಲು ಹೊಡೆದೋಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!