ಹಿರಿಯ ನಟ ನರೇಶ್ ಜನವರಿ 20ರಂದು 65ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಈ ಸಂದರ್ಭ ಮಾಧ್ಯಮಗೋಷ್ಠಿ ನಡೆಸಿ ತಮ್ಮ ಜೀವನ ಮತ್ತು ವೃತ್ತಿ ಕುರಿತು ಹಲವು ವಿಷಯಗಳನ್ನು ಹಂಚಿಕೊಂಡರು. ಈ ಕಾರ್ಯಕ್ರಮದಲ್ಲಿ ಅವರ ಪತ್ನಿ, ನಟಿ ಪವಿತ್ರಾ ಲೋಕೇಶ್ ಕೂಡ ಭಾಗವಹಿಸಿದ್ದರು.
ನರೇಶ್ ತಮ್ಮ 52 ವರ್ಷಗಳ ಯಶಸ್ವಿ ವೃತ್ತಿಜೀವನದ ಕುರಿತು ಮಾತನಾಡಿ, ತಾಯಿ ವಿಜಯ ನಿರ್ಮಲಾ ಅವರ ಪ್ರೇರಣೆ ಮತ್ತು ಮಾರ್ಗದರ್ಶನವನ್ನು ನೆನಪಿಸಿಕೊಂಡರು. ತಾಯಿ ಜಯಗಳಿಸಿದ ಸಾಧನೆಗೆ ಪದ್ಮ ಪ್ರಶಸ್ತಿ ಕೊಡಿಸುವ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಘೋಷಿಸಿದರು. ಅಲ್ಲದೆ, ನಪುಂಸಕನ ಪಾತ್ರದಲ್ಲಿ ನಟಿಸುವುದು ತನ್ನ ಕನಸು ಎಂದು ಬಹಿರಂಗಪಡಿಸಿದರು. “ಆಹ ರೀತಿ ಪಾತ್ರದಲ್ಲಿ ನಟಿಸುವುದು ಸವಾಲಿನಿಂದ ಕೂಡಿದೆ” ಎಂದು ಅವರು ವಿವರಿಸಿದರು.
ಪವಿತ್ರಾ ತಮ್ಮ ಮಾತಿನಲ್ಲಿ, ನರೇಶ್ ಅವರ ಎನರ್ಜಿ ಮತ್ತು ಕೆಲಸದ ಮನೋಭಾವವನ್ನು ಪ್ರಶಂಸಿಸಿದರು. “ಕೆಲಸದ ವಿಚಾರ ಬಂದರೆ ಅವರಲ್ಲಿ 10 ಜನರ ಶಕ್ತಿ ಇದೆ. ದಿನ-ರಾತ್ರಿ ಕೆಲಸ ಮಾಡುವ ಸಾಮರ್ಥ್ಯ ಅವರಿಗಿದೆ, ನಾವು ಅವರೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ನನಗೆ ರಾತ್ರಿ ಸುತಾಗುತ್ತದೆ. ಅವರೊಂದಿಗೆ ಕೆಲಸ ಮಾಡುವ ಸಿಬ್ಬಂದಿಯೂ ಸುಸ್ತಾಗಿರುತ್ತಾರೆ. ಇನ್ನುಳಿದ ಕೆಲಸ ನೀವೇ ನೋಡಿಕೊಳ್ಳಿ ಎಂದು ಹೇಳಿದರೂ ಅವರಿಗೆ ಸುಸ್ತಾಗುವುದಿಲ್ಲ” ಎಂದು ಹೇಳಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪವಿತ್ರಾ ಅವರ ಈ ಮಾತುಗಳು ಡಬಲ್ ಮೀನಿಂಗ್ ಎಂದು ಭಾವಿಸಿ ಕಾಮೆಂಟ್ ಮಾಡಿದ್ದು, ಟ್ರೋಲಿಂಗ್‌ಗೆ ಕಾರಣವಾಗಿದೆ.
ಹುಟ್ಟುಹಬ್ಬದ ಸಂದರ್ಭ ಪವಿತ್ರಾ ನೀಡಿದ ಉಡುಗೊರೆಯೂ ವಿಶೇಷವಾಗಿತ್ತು. “ನಾನು ಕೊಟ್ಟ ಶರ್ಟ್ ಅವರು ಧರಿಸಿದ್ದಾರೆ,” ಎಂದು ಅವರು ಸಂತೋಷದಿಂದ ಹೇಳಿದರು. ಜೊತೆಗೆ, ತಮ್ಮ ಸೀರೆ ತಾವೇ ಆರಿಸಿಕೊಂಡಿರುವುದಾಗಿ ತಮಾಷೆಯಾಗಿ ಸೇರಿಸಿದರು.
ನರೇಶ್ ಮತ್ತು ಪವಿತ್ರಾ ಮಾಧ್ಯಮಗಳ ಮುಂದೆ ಮಾಡಿದ ಎಲ್ಲ ಹೇಳಿಕೆಗಳು ಹೆಚ್ಚಾಗಿ ವೈರಲ್ ಆಗುತ್ತಿದ್ದು, ಕೆಲವು ಟ್ರೋಲಿಂಗ್‌ಗೆ ಕಾರಣವಾಗುತ್ತಿದೆ.