Cinema

೧೦ ಜನರಿಗಿರುವ ಶಕ್ತಿ ನರೇಶ್ ಗೆ ಇದೆ,.. ರಾತ್ರಿ ನನಗೆ ಸುಸ್ತಾಗುತ್ತೆ,.. ನಟಿ ಪವಿತ್ರ ಲೋಕೇಶ್ ಹೇಳಿದ್ದು?

ಹಿರಿಯ ನಟ ನರೇಶ್ ಜನವರಿ 20ರಂದು 65ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಈ ಸಂದರ್ಭ ಮಾಧ್ಯಮಗೋಷ್ಠಿ ನಡೆಸಿ ತಮ್ಮ ಜೀವನ ಮತ್ತು ವೃತ್ತಿ ಕುರಿತು ಹಲವು ವಿಷಯಗಳನ್ನು ಹಂಚಿಕೊಂಡರು. ಈ ಕಾರ್ಯಕ್ರಮದಲ್ಲಿ ಅವರ ಪತ್ನಿ, ನಟಿ ಪವಿತ್ರಾ ಲೋಕೇಶ್ ಕೂಡ ಭಾಗವಹಿಸಿದ್ದರು.

ನರೇಶ್ ತಮ್ಮ 52 ವರ್ಷಗಳ ಯಶಸ್ವಿ ವೃತ್ತಿಜೀವನದ ಕುರಿತು ಮಾತನಾಡಿ, ತಾಯಿ ವಿಜಯ ನಿರ್ಮಲಾ ಅವರ ಪ್ರೇರಣೆ ಮತ್ತು ಮಾರ್ಗದರ್ಶನವನ್ನು ನೆನಪಿಸಿಕೊಂಡರು. ತಾಯಿ ಜಯಗಳಿಸಿದ ಸಾಧನೆಗೆ ಪದ್ಮ ಪ್ರಶಸ್ತಿ ಕೊಡಿಸುವ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಘೋಷಿಸಿದರು. ಅಲ್ಲದೆ, ನಪುಂಸಕನ ಪಾತ್ರದಲ್ಲಿ ನಟಿಸುವುದು ತನ್ನ ಕನಸು ಎಂದು ಬಹಿರಂಗಪಡಿಸಿದರು. “ಆಹ ರೀತಿ ಪಾತ್ರದಲ್ಲಿ ನಟಿಸುವುದು ಸವಾಲಿನಿಂದ ಕೂಡಿದೆ” ಎಂದು ಅವರು ವಿವರಿಸಿದರು.

ಪವಿತ್ರಾ ತಮ್ಮ ಮಾತಿನಲ್ಲಿ, ನರೇಶ್ ಅವರ ಎನರ್ಜಿ ಮತ್ತು ಕೆಲಸದ ಮನೋಭಾವವನ್ನು ಪ್ರಶಂಸಿಸಿದರು. “ಕೆಲಸದ ವಿಚಾರ ಬಂದರೆ ಅವರಲ್ಲಿ 10 ಜನರ ಶಕ್ತಿ ಇದೆ. ದಿನ-ರಾತ್ರಿ ಕೆಲಸ ಮಾಡುವ ಸಾಮರ್ಥ್ಯ ಅವರಿಗಿದೆ, ನಾವು ಅವರೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ನನಗೆ ರಾತ್ರಿ ಸುತಾಗುತ್ತದೆ. ಅವರೊಂದಿಗೆ ಕೆಲಸ ಮಾಡುವ ಸಿಬ್ಬಂದಿಯೂ ಸುಸ್ತಾಗಿರುತ್ತಾರೆ. ಇನ್ನುಳಿದ ಕೆಲಸ ನೀವೇ ನೋಡಿಕೊಳ್ಳಿ ಎಂದು ಹೇಳಿದರೂ ಅವರಿಗೆ ಸುಸ್ತಾಗುವುದಿಲ್ಲ” ಎಂದು ಹೇಳಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪವಿತ್ರಾ ಅವರ ಈ ಮಾತುಗಳು ಡಬಲ್ ಮೀನಿಂಗ್ ಎಂದು ಭಾವಿಸಿ ಕಾಮೆಂಟ್ ಮಾಡಿದ್ದು, ಟ್ರೋಲಿಂಗ್‌ಗೆ ಕಾರಣವಾಗಿದೆ.

ಹುಟ್ಟುಹಬ್ಬದ ಸಂದರ್ಭ ಪವಿತ್ರಾ ನೀಡಿದ ಉಡುಗೊರೆಯೂ ವಿಶೇಷವಾಗಿತ್ತು. “ನಾನು ಕೊಟ್ಟ ಶರ್ಟ್ ಅವರು ಧರಿಸಿದ್ದಾರೆ,” ಎಂದು ಅವರು ಸಂತೋಷದಿಂದ ಹೇಳಿದರು. ಜೊತೆಗೆ, ತಮ್ಮ ಸೀರೆ ತಾವೇ ಆರಿಸಿಕೊಂಡಿರುವುದಾಗಿ ತಮಾಷೆಯಾಗಿ ಸೇರಿಸಿದರು.

ನರೇಶ್ ಮತ್ತು ಪವಿತ್ರಾ ಮಾಧ್ಯಮಗಳ ಮುಂದೆ ಮಾಡಿದ ಎಲ್ಲ ಹೇಳಿಕೆಗಳು ಹೆಚ್ಚಾಗಿ ವೈರಲ್ ಆಗುತ್ತಿದ್ದು, ಕೆಲವು ಟ್ರೋಲಿಂಗ್‌ಗೆ ಕಾರಣವಾಗುತ್ತಿದೆ.

kiran

Recent Posts

ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಆರೋಪಿಗಳು ಬಂಧನ

ಕೆಂಡ್ರ ವಿಭಾಗದ ಮಹಿಳಾ ಠಾಣೆ ಪೊಲೀಸರು, 37 ವರ್ಷದ ತಮಿಳುನಾಡು ಮೂಲದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಇಬ್ಬರನ್ನು…

7 hours ago

ಕಾಡು ರಕ್ಷಣೆಮಾಡಬೇಕಾದ ವಾಚರ್: ಆನೆ ದಂತ ಸಾಗಿಸಲು ಯತ್ನಿಸಿದ ಸಂಕೀರ್ಣ ಪ್ಲಾನ್!

ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ಪಟ್ಟಣದ ಮೋಳೆ ರಿಂಗ್ ರಸ್ತೆಯಲ್ಲಿ ಒಂದು ಅಂಶಾತುರ ಘಟನೆ ನಡೆದಿದೆ, ಕಾಡು ರಕ್ಷಣೆ ಮತ್ತು ಪರಿಸರ…

7 hours ago

ವ್ಯಾಪಾರಿಯ ಪರಾರಿಯ ಪರಿಣಾಮ: ರೈತರು ಸಂಕಷ್ಟದಲ್ಲಿ

ಸಿಂಧನೂರು ತಾಲ್ಲೂಕಿನ ಉಪ್ಪಳ ಮತ್ತು ದಢೇಸುಗೂರು ಗ್ರಾಮದ ರೈತರಿಂದ 4,500 ಚೀಲ ಭತ್ತವನ್ನು ಖರೀದಿಸಿದ್ದ ವ್ಯಾಪಾರಿ ಮಲ್ಲೇಶ ₹60 ಲಕ್ಷ…

7 hours ago

ಮಗುವಿನ ಮಾರಾಟದ ಕೃತ್ಯ ಬಯಲು: 7 ವರ್ಷದ ಬಾಲಕ 4 ಲಕ್ಷಕ್ಕೆ ಹರಾಜಾದ.!

ಹುಕ್ಕೇರಿ ತಾಲೂಕಿನ ಸುಲ್ತಾನಪುರದಲ್ಲಿ ಏಳು ವರ್ಷದ ಬಾಲಕನನ್ನು 4 ಲಕ್ಷ ರೂ.ಗೆ ಮಾರಾಟ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಿರುವ…

8 hours ago

ಎಲ್ಲೆಡೆ ಕಸದ ರಾಶಿಗಳು: ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾದ ಹಿರೇನರ್ತಿ ರಸ್ತೆಗಳು

ಕುಂದಗೋಳ: ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ಸಮಸ್ಯೆಗಳು ತೀವ್ರ ಸ್ವರೂಪ ತಾಳುತ್ತಿದ್ದು, ಗ್ರಾಮ ಪಂಚಾಯಿತಿ ಮುಂಭಾಗದ ರಸ್ತೆಗಳು…

9 hours ago

ವಿವಾಹಿತ ಮಹಿಳೆಯೊಂದಿಗೆ ಮಾತನಾಡಿದ್ದಕ್ಕೆ ಹುಬ್ಬಳ್ಳಿಯಲ್ಲಿ ಕ್ರೂರ ಕೃತ್ಯ: ಯುವಕನಿಗೆ ಬೆತ್ತಲೆಗೊಳಿಸಿ ಮರಣಾಂತಿಕ ಹಲ್ಲೆ.

ಹುಬ್ಬಳ್ಳಿಯ ಟಿಪ್ಪು ನಗರದಲ್ಲಿ ಘಟನೆ ನಡೆದಿದ್ದು, ವಿವಾಹಿತ ಮಹಿಳೆಯೊಂದಿಗೆ ಮಾತನಾಡಿದ ಯುವಕನನ್ನು ಕೆಲವರು ಹಾಡಹಗಲೇ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಯುವಕನನ್ನು…

9 hours ago