ನವನಗರ : ವಾಣಿಜ್ಯನಗರಿ ಹಬ್ಬಳ್ಳಿಯ ಅವಿಭಾಜ್ಯಗಳು ಅಂಗವಾಗಿರುವ ನವನಗರ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ಬರುವ ಗಾಮನಗಟ್ಟಿ ಗ್ರಾಮದ ಸಾವಂತನವರ ಹಾಗೂ ದೇಸಾಯಿನಗರ ಪ್ಲಾಟಗಳಲ್ಲಿ ಸುಮಾರು ಹದಿನೈದು ದಿನಗಳಿಂದ ಕುಡಿಯುವ ನೀರು, ದಿನಬಳಕೆಯ ನೀರು ಇಲ್ಲದೆ ಸಾರ್ವಜನಿಕರು ಧನಕರುಗಳು ಮತ್ತು ಕುಡಿಯಲು ನೀರು ಇಲ್ಲದೆ ಪರದಾಡುತ್ತಿದ್ದಾರೆ. ಸಂಬಂದಿಸಿದ ಜಲಮಂಡಳ್ಳಿ ಅಧಿಕಾರಿಗಳು ಇತ್ತ ಗಮನಹರಸುತ್ತಿಲ್ಲ .ವಾಟರ ಮೆನ್ ನ್ನು ವಿಚಾರಸಿದರೆ ತನಗೆ ಸಂಬಂದವಿಲ್ಲದಂತೆ ವರ್ತಿಸುತ್ತಿದ್ದಾನೆ. ಸ್ಥಳಿಯ ಕಾರ್ಪೊರೇಟ್ ಕೂಡಾ ಇತ್ತ ಕ್ಯಾರೆಎನ್ನುತ್ತಿಲ್ಲ. ಎಂದು ಸ್ಥಳಿಯರು ರಸ್ತೆ ಬಂದುಮಾಡಿ ಧರಣಿ ನಿರತರಾಗಿದ್ದಾರೆ .ಜಲಮಂಡಳಿಯ ಈ ನಾಲಾಯಕ ಅಧಿಕಾರಿಗಳು ಎಲ್ಲಿಗೆ ಹೋಗಿದ್ದಾರೆ. ಇವರಿಗೆ ಮನುಷ್ಯತ್ವವೇ ಇಲ್ವಾ.. ದಿನನಿತ್ಯದ ಬಳಕೆಗೆ ನೀರು ಜೀವಾಳವಾಗಿರುವಾಗ ಈ ರೀತಿ ಜಲಮಂಡಳಿಯ ಬೆಜವಾಬ್ದಾರಿತನ ಎಷ್ಟರ ಮಟ್ಟಿಗೆ ಸರಿ.

ವರದಿ: ಚರಂತಯ್ಯ ಹಿರೇಮಠ.

error: Content is protected !!