ವಾಯುವ್ಯೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟ ವಿಭಾಗದ ಜಮಖಂಡಿ ಬಸ್ ನಿಲ್ದಾಣಕ್ಕೇ ಅಧಿಕಾರಿಗಳು ಇದ್ದೂ ಇಲ್ಲದಂತಾಗಿದೆ ಈ ಬಸ್ ನಿಲ್ದಾಣದಲ್ಲಿ ದಿನನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ ಆದರೇ ಈ ಬಸ್ ನಿಲ್ದಾಣದಲ್ಲಿನ ಸಂಬಂಧ ಪಟ್ಟ ಅಧಿಕಾರಿಗಳೂ ನಿದ್ದೆ ಕಣ್ಣಿನಲ್ಲಿ ಕಣ್ಮುಚ್ಚಿ ಕುಳಿತಿದ್ದಾರೆ.
ಸರಿಯಾದ ಸ್ವಚ್ಛತೆ ಇರುವುದಿಲ್ಲ ಬಸ್ ನಿಲ್ದಾಣದ ಮುಂಬಾಗದಲ್ಲಿ ವಾಣಿಜ್ಯ ಮಳಿಗೆ ಎಂದು 3 4 ಅಂಗಡಿಗಳನ್ನು ನಿರ್ಮಿಸಿದ್ದಾರೆ ಆದರೇ ಆ ಅಂಗಡಿಗಳ ಮುಂದೆ ಕಿಡಿಗೇಡಿಗಳು ಎಲೆ ಅಡಿಕೆ ಗುಟ್ಕಾ ತಿಂದು ಉಗಳಿದ್ದಾರೆ ಆ ಅಂಗಡಿಗಳ ಮುಂದೆಯೇ ಪ್ರಯಾಣಿಕರು ಅಧಿಕಾರಿಗಳ ಕಣ್ಣೆದುರೇ ಊಟ ಮಾಡಿ ತಿಂಡಿ ತಿಂದು ಮುಸರಿ ಅಲ್ಲೇ ಬಿಟ್ಟು ಗಲೀಜು ಮಾಡಿದರೂ ಯಾವ ಅಧಿಕಾರಿಯೂ ಅವರಿಗೇ ಹಾಗೇ ಗಲೀಜು ಮಾಡಬೇಡಿ ಎನ್ನುವುದಿಲ್ಲ ಇನ್ನೂ ಅಂಗಡಿಗಳ ದ್ವಾರದ (ಶೇಟರ್ಸ್) ಬಳಿ ಪ್ರಯಾಣಿಕರ ವೇಷದಲ್ಲಿ ಬಂದು ಮಲಗಿಕೊಂಡರೂ ಅಧಿಕಾರಿಗಳೂ ಯಾಕೇ ಏನೂ ಹೇಳುವುದಿಲ್ಲ ಕೇಳುವುದಿಲ್ಲ.
ಇನ್ನೂ ಬಸ್ ನಿಲ್ದಾಣದ ಮುಂಬಾಗದಲ್ಲಿ ಬಲ ಭಾಗದಲ್ಲಿ ಧ್ವಜದ ಕಂಬದ 2 3 ಕಡೇ ಕಟ್ಟೆ ಒಡೆದು ಸಿಮೆಂಟ್ ಉದುರಿಕೊಂಡು ಹೋಗಿದೆ ಕಿಡಿಗೇಡಿಗಳ ಈ ಧ್ವಜದ ಕಂಬದ ಪಕ್ಕದಲ್ಲೇ ನಿರೋದ್ ( ಕಾಂಡೊಮ್ ) ಬಿಸಾಕಿದ್ದಾರೆ.
ಬಸ್ ನಿಲ್ದಾಣದ ಮುಂಬಾಗದಲ್ಲಿ ಸಿಕ್ಕಾಪಟ್ಟೆ ಮಣ್ಣಿನ ಧೂಳು ತುಂಬಿಕೊಂಡಿದೆ ಇಷ್ಟೆಲ್ಲಾ ಅವ್ಯೇವಸ್ಥಯಿಂದ ಕೂಡಿದ ಬಸ್ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳ ಯಾಕೇ ಕಣ್ಮುಚ್ಚಿ ಕುಳಿತಿದ್ದಾರೆ ತಿಳಿಯುತ್ತಿಲ್ಲ ಈ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಅವ್ಯೇವಸ್ಥಯಿಂದ ಕೂಡಿದ ಜಮಖಂಡಿ ಬಸ್ ನಿಲ್ದಾಣವನ್ನು ಸುವ್ಯವಸ್ಥಿತ ಬಸ್ ನಿಲ್ದಾಣವನ್ನಾಗಿ ಮಾಡೀ ಓಡಾಡೋ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುತ್ತಾರ ಕಾದು ನೋಡಬೇಕಾಗಿದೆ.
ವರದಿ : ಶಿವ ಧಾರವಾಡ.