ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಬಿಲಕೆರೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬಿಲಕೆರೂರ ಮುಂದೆಗಡೆ ಇರುವ ಚರಂಡಿಯು ಕೊಳಚೆಯಿಂದ ತುಂಬಿಕೊಂಡು ಸೊಳ್ಳೆಗಳು ಹುಟ್ಟಿ ಡೆಂಗ್ಯೂ, ಮಲೇರಿಯಾ ಎಂಬ ಮಹಾಮಾರಿ ರೋಗಗಳಿಗೆ ಆಹ್ವಾನ ಕೊಡುತ್ತಿವೆ. ಪಿಡಿಓ ರವರು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ. ಸುಮಾರು ದಿನಗಳಿಂದ ಚರಂಡಿಗಳು ತುಂಬಿ ದುರ್ವಾಸನೆಯಿಂದ ಪರದಾಡುವ ಪರಿಸ್ಥಿತಿ ಎದುರಾಗಿದೆ.ಹಾಗೂ ದಿನಾಲೂ ಪಂಚಾಯತಿಗೆ ಸಾರ್ವಜನಿಕರು ಬರುತ್ತಾರೆ. ಬಂದ ಸಾರ್ವಜನಿಕರು ಚರಂಡಿ ದುರ್ವಾಸನೆ ಅರಿತು ಪಿಡಿಓ ಗೆ ಹಿಡಿಶಾಪ ಹಾಕಿ ಹೋಗುತ್ತಾರೆ. ಅಲ್ಲಿನ ಸುತ್ತಲಿನ ಜನರಿಗೆ ಊಟ ಮಾಡಲು ಸಹ ತೊಂದರೆ ಅನುಭವಿಸುತ್ತಿದ್ದಾರೆ. ಸ್ವಚ್ಛತೆ ಇಲ್ಲದ ಕಾರಣ ಡೆಂಗ್ಯೂ,ಮಲೇರಿಯಾ ಎಂಬ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಸ್ವಚ್ಛತೆಯ ಬಗ್ಗೆ ಅರಿವೇ ಇರದ ಗ್ರಾಮ ಪಂಚಾಯತಿಯ ಪಿಡಿಓ ಎಂ ಎನ್ ಪಾಟೀಲ್ ಪಂಚಾಯತಿಯಲ್ಲಿ ಹಣ ಹೊಡೆಯುವ ಕೆಲಸ ಬಿಟ್ಟರೆ ಯಾವ ಕೆಲಸ ಕೂಡ ನಡೆಯುತ್ತಿಲ್ಲ ಎಂಬುದು ಅಲ್ಲಿನ ಜನರ ಪಿಸುಮಾತಾಗಿದೆ. ಗ್ರಾಮದ ಸ್ವಚ್ಛತೆ ಬಗ್ಗೆ ಅರಿವೇ ಇಲ್ಲದ ಪಿಡಿಓ ಹೇಗೆ ತಾನೇ ಗ್ರಾಮಗಳ ಅಭಿವೃದ್ದಿ ಮಾಡುತ್ತಾನೆ. ವರದಿ ಕಂಡ ಮೇಲಾದರೂ ಅಧಿಕಾರಿಗಳು ಸ್ವಚ್ಛತೆಗೆ ಮುಂದಾಗುವರೋ ಇಲ್ಲವೋ ಕಾದು ನೋಡೋಣ

ವರದಿ: ಸಂಗಪ್ಪ ಚಲವಾದಿ
error: Content is protected !!