ಬೆಸ್ಕಾಂ ನೀಡಿರುವ ಕರೆಂಟ್ ಬಿಲ್ ಬಗ್ಗೆ ಬಳಕೆದಾರರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದ್ದಾರೆ. ಇತ್ತೀಚಿನ ಬಿಲ್ ಜತೆಗೆ ಹಿಂದಿನ ಎರಡು ಬಿಲ್ಗಳನ್ನೂ ಹಂಚಿಕೊಂಡಿರುವ ಅವರು ತಮಗೆ ಬಂದಿರುವ ಲೇಟೆಸ್ಟ್ ಬಿಲ್ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ತಿಂಗಳಲ್ಲಿ 16 ದಿನಗಳ ಮನೆಯಲ್ಲಿ ಇರದಿದ್ದರೂ ಬಿಲ್ ಮಾತ್ರ ಮೂರುಪಟ್ಟು ಬಂದಿದೆ ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಬಿಲ್ಗಳನ್ನು ಬೆಸ್ಕಾಂ ಸೋಷಿಯಲ್ ಮೀಡಿಯಾ ಹ್ಯಾಂಡಲ್ಗೂ ಮೆನ್ಷನ್ ಮಾಡಿ ಅವರ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.
ಯಾಸಿರ್ ಮುಷ್ತಾಕ್ ಎಂಬವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಇದನ್ನು ಪೋಸ್ಟ್ ಮಾಡಿಕೊಂಡಿದ್ದಾರೆ. ಇದು ಗೃಹಜ್ಯೋತಿಯ ಪರಿಣಾಮವೇ ಎಂದು ಪ್ರಶ್ನಿಸಿರುವ ಅವರು, ಗೃಹಜ್ಯೋತಿ ಬರುವುದಕ್ಕಿಂತಲೂ ಮೊದಲು ಬರುತ್ತಿದ್ದಂಥ ಬಿಲ್ನ ಮೂರು ಪಟ್ಟು ಬಿಲ್ ಈಗ ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ನಲ್ಲಿ 16 ದಿನಗಳ ಕಾಲ ಮನೆಯಲ್ಲಿ ಯಾರೂ ಇಲ್ಲದಿದ್ದರೂ ಈ ಸಲ 2247 ರೂ. ಬಿಲ್ ಬಂದಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಜೊತೆಗೆ ಸೆಪ್ಟೆಂಬರ್ನಲ್ಲಿ ಬಂದಿದ್ದ 1528 ರೂ. ಬಿಲ್ ಮತ್ತು ಏಪ್ರಿಲ್ನಲ್ಲಿ ಬಂದಿದ್ದ 228 ರೂ. ಬಿಲ್ನ ಫೋಟೋ ಕೂಡ ಹಂಚಿಕೊಂಡಿದ್ದಾರೆ.
Dear @NammaBESCOM , Is this Impact of #GruhaJyothi ? I am getting bills 3 times more than what I used to get before Gruha Jyothi. This month you crossed the limits,by sending bill of 2247, despite my house being closed for 16 days in Oct..@mdbescom @DKShivakumar @osd_cmkarnataka pic.twitter.com/uSstMRRaqj
— Yasir Mushtaq (@path2shah) November 5, 2023