ವಡೋದರದಲ್ಲಿ ನಡೆದ ಭೀಕರ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತನ್ನ ಕಾರಿನ ಅತಿವೇಗದ ಚಾಲನೆಯಿಂದ ಅಪಘಾತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟರೂ, ಅಪಘಾತ ಮಾಡಿದ್ದ ಯುವಕನಿಗೆ ಯಾವುದೇ ಪಶ್ಚಾತ್ತಾಪವೇ ಇರಲಿಲ್ಲ. ಇದಕ್ಕೂ ಮೀರಿಸಿ, ರಸ್ತೆಯಲ್ಲೇ ಪುಂಡಾಟ ನಡೆಸಿದ ಆತನ ವರ್ತನೆ ಜನರಲ್ಲಿ ಆಕ್ರೋಶ ಉಂಟುಮಾಡಿದೆ.

ಅಪಘಾತದ ಭೀಕರ ದೃಶ್ಯ

ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಯುವಕ ಪ್ರಾರಂಭದಲ್ಲಿ ಕಾರಿನಿಂದ ಇಳಿಯಲೂ ನಿರಾಕರಿಸುತ್ತಾನೆ, ಹಾಗೆಯೇ ಅವನ ಜೊತೆಯ ಮತ್ತೊಬ್ಬ ಯುವಕ ದೂರ ಹೋಗಿ ನಿಂತುಕೊಳ್ಳುತ್ತಾನೆ. ನಂತರ, ಅಪಘಾತ ಮಾಡಿದ ಯುವಕ ತಾನು ಮಾಡಿರುವ ಕೃತ್ಯ ಕಡೆಗೆ ಗಮನಿಸದೇ, ಮಹಿಳೆಯ ಮೃತದೇಹದತ್ತ ತಿರುಗಿಯೂ ನೋಡದೆ, ಮತ್ತೊಂದು ರೌಂಡ್ ಎಂದು ದರ್ಪ ತೋರುತ್ತಾ ರಸ್ತೆಯಲ್ಲೇ ತೂರಾಡುತ್ತಾನೆ.

ಸಂಭ್ರಮದಲಿ ಮರೆತ ಪಶ್ಚಾತ್ತಾಪ

ಯುವಕ ಕುಡಿದ ಮತ್ತಿನಲ್ಲಿದ್ದು, ತಾನು ಎಂತಹ ಗಂಭೀರ ಅಪರಾಧ ಮಾಡಿದ್ದೇನೆ ಎಂಬುದರ ಬಗ್ಗೆ ಯಾವುದೇ ಪರಿವೆಯಿಲ್ಲ. ಈ ನಡುವೆ, ಅಪಘಾತ ಸ್ಥಳಕ್ಕೆ ಜನರು ಸೇರಿ ಆತನನ್ನು ಸುತ್ತುವರಿದು ಹಿಡಿದುಕೊಳ್ಳುತ್ತಾರೆ. ಈ ಭೀಕರ ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಇನ್ನೊಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಆರೋಪಿ ಕುರಿತು ಮಾಹಿತಿ

ಅಪಘಾತಕ್ಕೆ ಕಾರಣವಾಗಿರುವ ಯುವಕನನ್ನು ರಕ್ಷಿತ್ ಎಂದು ಗುರುತಿಸಲಾಗಿದೆ. ಆತ ಕಾನೂನು ವಿದ್ಯಾರ್ಥಿಯಾಗಿದ್ದು, ಅವನ ನಿರ್ಲಕ್ಷ್ಯ ಮತ್ತು ನಿರ್ದಯ ವರ್ತನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜನತೆ ಒತ್ತಾಯಿಸುತ್ತಿದ್ದಾರೆ. ಈ ಪ್ರಕರಣವು ನೈತಿಕ ಮತ್ತು ಕಾನೂನಾತ್ಮಕ ಚರ್ಚೆಗೆ ಕಾರಣವಾಗಿದ್ದು, ಪೊಲೀಸರು ಈಗ ಮುಂದಿನ ಹಂತದ ಕ್ರಮ ಕೈಗೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

Related News

error: Content is protected !!