Latest

ಚಿಕ್ಕಬಳ್ಳಾಪುರದಲ್ಲಿ ಕುಖ್ಯಾತ ದರೋಡೆಕೋರ ಬಾಂಬೆ ಸಲೀಂ ಬಂಧನ

ಚಿಕ್ಕಬಳ್ಳಾಪುರ: ರಾಜ್ಯ ಸೇರಿದಂತೆ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ವಿವಿಧೆಡೆಗಳಲ್ಲಿ ದರೋಡೆ, ಕೊಲೆ, ಸುಲಿಗೆ, ಕಳ್ಳತನ ಮತ್ತು ಅಪಹರಣ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಅಪರಾಧಿ ಮಹಮ್ಮದ್ ಖಲೀಲ್ ವುಲ್ಲಾ ಆಲಿಯಾಸ್ ಬಾಂಬೆ ಸಲೀಂ ಬಾಗೇಪಲ್ಲಿ ಪೊಲೀಸರ ಕಾರ್ಯಾಚರಣೆಯಲ್ಲಿ ಶನಿವಾರ ಬಂಧಿತನಾಗಿದ್ದಾನೆ. ಆತನೊಂದಿಗೆ ಮತ್ತೂ 7 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಹುಪಾಲು ರಾಜ್ಯಗಳಲ್ಲಿ ಪ್ರಕರಣಗಳು ದಾಖಲು

ಬಾಂಬೆ ಸಲೀಂನ ವಿರುದ್ಧ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ 5 ಕೊಲೆ, 4 ಡಕಾಯಿತಿ, 2 ಸುಲಿಗೆ, 2 ಅಪಹರಣ ಸೇರಿದಂತೆ 20ಕ್ಕೂ ಅಧಿಕ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ.

ಅಶ್ವತ್ಥನಾರಾಯಣಸ್ವಾಮಿ ಅಪಹರಣ ಪ್ರಕರಣ

2024ರ ಡಿಸೆಂಬರ್ 20ರಂದು ಗುಡಿಬಂಡೆ ತಾಲೂಕಿನ ಗಂಗಾನಹಳ್ಳಿ ಗ್ರಾಮದ ಅಶ್ವತ್ಥನಾರಾಯಣಸ್ವಾಮಿ ಅವರು ತಮ್ಮ ಜಮೀನು ಮಾರಾಟ ಮಾಡಿ ಬಂದ ಹಣವನ್ನು ಸ್ನೇಹಿತರಿಗೆ ನೀಡಲು ಮಾರುತಿ ಸ್ವಿಫ್ಟ್ ಕಾರಿನಲ್ಲಿ ಹೊರಟಿದ್ದರು. ಆದಿಗಾನಹಳ್ಳಿ ಕ್ರಾಸ್ ಸಮೀಪದ ಪೆಟ್ರೋಲ್ ಬಂಕ್ ಹತ್ತಿರ ಕಾರಿನಲ್ಲಿ ಬಂದ ಬಾಂಬೆ ಸಲೀಂ ಮತ್ತು ಆತನ ಗುಂಪು ಅವರಿಗೆ ಅಡ್ಡಗಟ್ಟಿ, ಅವರನ್ನು ಅಪಹರಿಸಿ ₹16 ಲಕ್ಷ ದರೋಡೆ ಮಾಡಿದ್ದರು. ಬಳಿಕ ಸ್ವಾಮಿಯನ್ನು ಕಿಡ್ನಾಪ್ ಮಾಡಿದ್ದು, ಆತನ ಪತ್ನಿಗೆ ಕರೆ ಮಾಡಿ ಬಿಡುಗಡೆಗೆ ಹೆಚ್ಚುವರಿಯಾಗಿ ₹50 ಲಕ್ಷ ಕೊಡುವಂತೆ ಬೆದರಿಕೆ ಹಾಕಿದ್ದರು.

ಬಾಗೇಪಲ್ಲಿ ಪೊಲೀಸರ ಯಶಸ್ವಿ ಕಾರ್ಯಾಚರಣೆ

ಪ್ರಕರಣ ದಾಖಲಾದ ನಂತರ ಬಾಗೇಪಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಪ್ರಶಾಂತ್ ವರ್ಣಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಕೈಗೊಳ್ಳಲಾಯಿತು. ಪತ್ತೆ ಕಾರ್ಯಾಚರಣೆಯು ಕೊನೆಗೂ ಫಲ ನೀಡಿದ್ದು, ಹೆದ್ದಾರಿ ದರೋಡೆಕೋರರ ಗುಂಪು ಪೊಲೀಸರ ಬಲೆಗೆ ಬಿದ್ದಿದೆ.

ಆರೋಪಿಗಳಿಂದ ಅಪರಾಧಕ್ಕೆ ಬಳಸಿದ ವಸ್ತುಗಳ ವಶಕ್ಕೆ

ಬಂಧಿತರಿಂದ ₹30 ಲಕ್ಷ ಮೌಲ್ಯದ ಕಾರು, ₹5.15 ಲಕ್ಷ ನಗದು, ₹1 ಲಕ್ಷ ಮೌಲ್ಯದ ದ್ವಿಚಕ್ರ ವಾಹನ, ಡಕಾಯಿತಿಗೆ ಬಳಸಿದ ಮತ್ತೊಂದು ಬೈಕ್, ಚಾಕು, ಮಚ್ಚು, ಕಬ್ಬಿಣದ ಸಲಾಕೆ ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

ರಾಜ್ಯಾದ್ಯಂತ ಅಪರಾಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಬಾಂಬೆ ಸಲೀಂನ ಬಂಧನದಿಂದ ಹಲವು ನಿಗೂಢ ಪ್ರಕರಣಗಳಿಗೆ ಬೆಳಕು ಬೀಳುವ ನಿರೀಕ್ಷೆ ವ್ಯಕ್ತವಾಗಿದೆ.

nazeer ahamad

Recent Posts

18 ಕೋಟಿ ರೂಪಾಯಿಗೆ ಕನ್ಯತ್ವ ಹರಾಜು: ವಿವಾದಕ್ಕೆ ಕಾರಣವಾದ ವಿದ್ಯಾರ್ಥಿನಿಯ ನಿರ್ಧಾರ

ಲಂಡನ್‌ನ 22 ವರ್ಷದ ವಿದ್ಯಾರ್ಥಿನಿ ತನ್ನ ಕನ್ಯತ್ವವನ್ನು ಆನ್‌ಲೈನ್ ಹರಾಜಿನಲ್ಲಿ ಮಾರಾಟ ಮಾಡಿ, ಹಾಲಿವುಡ್ ನಟನಿಂದ 18 ಕೋಟಿ ರೂಪಾಯಿಗೆ…

15 hours ago

ರಾಟ್‌ವೀಲರ್ ಹಾಗೂ ನಾಗರಹಾವಿನ ನಡುವೆ ಭೀಕರ ಹೋರಾಟ: ವಿಡಿಯೋ ವೈರಲ್!

ಬೇಸಿಗೆ ಆರಂಭವಾದ್ದರಿಂದ ಹಾವುಗಳು ತಮ್ಮ ಹುತ್ತಗಳನ್ನು ತೊರೆದು ತಂಪು ಪ್ರದೇಶಗಳತ್ತ ಸಾಗುತ್ತವೆ. ಇತ್ತೀಚೆಗೆ, ಒಂದು ಇಂತಹ ಘಟನೆ ಮನರಂಜನೆಯ ಜೊತೆಗೆ…

16 hours ago

ಟಾಟಾ ಪಂಚ್ ನಜ್ಜುಗುಜ್ಜಾದರೂ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾದದ್ದು ಅದೃಷ್ಟ!

ಮಹಾರಾಷ್ಟ್ರದ ಥಾಣೆಯ ಕ್ಯಾಡ್ಬರಿ ಬ್ರಿಡ್ಜ್ ಫ್ಲೈಓವರ್‌ನಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಡಂಪರ್ ಟ್ರಕ್, ಟ್ರೈಲರ್ ಮತ್ತು ಟೆಂಪೊ ನಡುವೆ…

16 hours ago

ಸರ್ಕಾರಿ ಕೆಲಸಕ್ಕಾಗಿ ಗಂಡನನ್ನೇ ಕೊಂದ ಪತ್ನಿ: ತನಿಖೆಯಲ್ಲಿ ಸತ್ಯ ಬಹಿರಂಗ

ಸತ್ಯ ಎಂದರೆ ಬೂದಿ ಮುಚ್ಚಿದ ಕೆಂಡದಂತೆ, ಸುಳ್ಳಿನ ಪರದೆ ಸರಿದರೆ ಅದೊಂದು ದಿನ ಹೊರಬರುತ್ತದೆ ಎನ್ನುವ ಮಾತಿಗೆ ತೆಲಂಗಾಣದ ನಲ್ಗೊಂಡದಲ್ಲಿ…

16 hours ago

ಡೊಮಿನಿಕನ್ ಗಣರಾಜ್ಯದಲ್ಲಿ ನಾಪತ್ತೆಯಾದ ಭಾರತೀಯ ಮೂಲದ ವಿದ್ಯಾರ್ಥಿನಿ: ತನಿಖೆಯಲ್ಲಿ ಹೊಸ ತಿರುವು

ಡೊಮಿನಿಕನ್ ಗಣರಾಜ್ಯದಲ್ಲಿ ಬೇಸಿಗೆ ರಜೆ ಕಳೆದ ವೇಳೆ ನಿಗೂಢವಾಗಿ ಕಾಣೆಯಾಗಿದ್ದ 20 ವರ್ಷದ ಭಾರತೀಯ ಮೂಲದ ಅಮೆರಿಕನ್ ವಿದ್ಯಾರ್ಥಿನಿ ಸುದೀಕ್ಷಾ…

16 hours ago

“ಭಾರತದಲ್ಲಿ ಮೆಚ್ಚಿದ ಅನುಭವ – ‘ಅಮೆರಿಕದಲ್ಲೂ ಇವೆಲ್ಲಾ ಇರಬೇಕಿತ್ತು’ ಎಂದ ಅಮೆರಿಕಾದ ಮಹಿಳೆ ಕ್ರಿಸ್ಟನ್ ಫಿಷರ್”

ನಾಲ್ಕು ವರ್ಷಗಳ ಹಿಂದೆ ಅಮೆರಿಕ (USA) ತೊರೆದು ಭಾರತ (India) ಗೆ ಸ್ಥಳಾಂತರಗೊಂಡ ಕ್ರಿಸ್ಟನ್ ಫಿಷರ್, ಈಗ ಭಾರತದ ಸಂಸ್ಕೃತಿ,…

16 hours ago