Latest

ಕುಖ್ಯಾತ ಕಳ್ಳನ ಬಂದನ!!

ಬೀದರ್: ನಗರದ ಆದರ್ಶ ಹಾಗೂ ಜ್ಯೋತಿ ಕಾಲೊನಿಯಲ್ಲಿ ಸರಣಿ ಮನೆಗಳ್ಳತನ ಮಾಡಿದ್ದ ಕುಖ್ಯಾತ ಕಳ್ಳನನ್ನು ಬಂಧಿಸಿರುವ ಪೊಲೀಸರು ಆತನಿಂದ ₹ 10 ಲಕ್ಷ ಮೌಲ್ಯದ 20 ತೊಲಾ ಚಿನ್ನಾಭರಣ ವಶ ಪಡಿಸಿಕೊಂಡಿದ್ದಾರೆ.
ಈತ ನಗರದಲ್ಲಿ ಒಟ್ಟು ಏಳು ಮನೆಗಳ ಬೀಗ ಒಡೆದಿದ್ದ. ನಾಲ್ಕು ಮನೆಗಳಲ್ಲಿ ಅವನಿಗೆ ಏನೂ ದೊರಕಿರಲಿಲ್ಲ. ರೈಲು ಹಳಿಯ ಪಕ್ಕದಲ್ಲಿರುವ ಆದರ್ಶ, ಜ್ಯೋತಿ ಕಾಲೊನಿಯಲ್ಲಿ ಇರುವ ಮೂರು ಮನೆಗಳಲ್ಲಿ ಕಳ್ಳತನ ಮಾಡಿದ್ದ. ರೈಲು ಹೋಗುವಾಗ ಹಾಗೂ ಬರುವಾಗ ಆಗುತ್ತಿದ್ದ ಸಪ್ಪಳದ ಸಂದರ್ಭದಲ್ಲಿ ವ್ಯವಸ್ಥಿತವಾಗಿ ಬೀಗ ಒಡೆಯುತ್ತಿದ್ದ. ಚಿಲಕಗಳಿಗೆ ಕೆಮಿಕಲ್‌ ಸ್ಪ್ರೆ ಮಾಡಿ ಶಬ್ದ ಬರದಂತೆ ಎಚ್ಚರ ವಹಿಸುತ್ತಿದ್ದ. ಕೆಲವು ಮನೆಗಳಲ್ಲಿ ಮನೆಯ ಮಾಲೀಕರು ಮನೆಯೊಳಗೆ ಮಲಗಿದ್ದಾಗಲೇ ಕಳ್ಳತನ ಮಾಡಿ ತನ್ನ ಕೈ ಚಳಕ ತೋರಿಸಿದ್ದ.
ಮುಖ್ಯ ಬಾಗಿಲಿನ ಚಿಲಕ ಮುರಿದು ಒಳಗೆ ಬಂದ ನಂತರ ತಾನು ಮರಳಿ ಓಡಿ ಹೋಗಲು ಒಂದು ಕೊಠಡಿಯ ಬಾಗಿಲನ್ನು ತೆರೆದಿಡುತ್ತಿದ್ದ, ಮನೆಯಲ್ಲಿನ ಬೆಡ್‌ರೂಮ್‌ಗಳಿಗೆ ಹೊರಗಿನಿಂದ ನಿಧಾನವಾಗಿ ಚಿಲಕ ಹಾಕುತ್ತಿದ್ದ. ಗಾಢ ನಿದ್ರೆಯಲ್ಲಿ ಇರುತ್ತಿದ್ದವರಿಗೆ ಕಳ್ಳತನ ಮಾಡಿ ಹೋಗಿರುವುದು ಗೊತ್ತೇ ಆಗುತ್ತಿರಲಿಲ್ಲ.
ಮಹಿಳೆಯರ ಸಹವಾಸ ಹಾಗೂ ಕುಡಿತದ ಚಟ ಹೊಂದಿರುವ ಆರೋಪಿ ಒಬ್ಬನೇ ಚಾಣಕ್ಷತನದಿಂದ ಕಳ್ಳನತ ಮಾಡುವುದನ್ನು ರೂಢಿಸಿಕೊಂಡಿದ್ದಾನೆ. ಇವನಿಗೆ ಸೊಲ್ಲಾಪುರದಲ್ಲಿ ಹೆಂಡತಿ, ಮಕ್ಕಳೂ ಇದ್ದಾರೆ. ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದಾನೆ. ಒಂದು ಕಡೆ ಕಳ್ಳತನ ಮಾಡಿ ಸಿಕ್ಕಿಬಿದ್ದ ಮೇಲೆ ಜಾಮೀನಿನ ಮೇಲೆ ಹೊರಗೆ ಬಂದ ನಂತರ ಮತ್ತೆ ಬೇರೆ ಕಡೆ ಕಳ್ಳನತ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
ರಾಯಚೂರು, ಗದಗ, ಹುಬ್ಬಳ್ಳಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಬಾದಾಮಿ ಹಾಗೂ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದ ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಅಲ್ಲಿಯ ಪೊಲೀಸ್‌ ಠಾಣೆಗಳಲ್ಲಿ ಆರೋಪಿ ವಿರುದ್ಧ ಪ್ರಕರಣಗಳೂ ದಾಖಲಾಗಿವೆ.
ಗಾಂಧಿ ಗಂಜ್‌ನ ಪೊಲೀಸ್‌ ಇನ್‌ಸ್ಪೆಕ್ಟರ್ ಜಿ.ಎಸ್.ಬಿರಾದಾರ, ಬೀದರ್‌ ಗ್ರಾಮೀಣ ಸಿಪಿಐ ಶ್ರೀಕಾಂತ ಅಲ್ಲಾಪುರೆ, ಪಿಎಸ್‌ಐ ಸಯ್ಯದ್‌ ಪಟೇಲ್, ದಯಾನಂದ ಮಡಿವಾಳ, ಸಿಬ್ಬಂದಿ ಆರೀಫ್ ನವಿನ್‌, ಅನಿಲ, ಇರ್ಫಾನ್‌ ಗಂಗಾಧರ, ಪ್ರವೀಣ ಹಾಗೂ ಶ್ರೀನಿವಾಸ ಅವರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ.
ಕುಖ್ಯಾತ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್‌ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಕಿಶೋರ ಬಾಬು ಬಹುಮಾನ ವಿತರಿಸಿದರು.

kiran

Recent Posts

ಬೈಕ್ ಟಿಪ್ಪರ್ ನಡುವೆ ಡಿಕ್ಕಿ ಬೈಕ್ ಸವಾರ ಸಾವು

ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…

1 month ago

ಅಪರಿಚಿತ ಕಾರು ಡಿಕ್ಕಿ; ಐವರಿಗೆ ಗಂಭೀರ ಗಾಯ, ಓರ್ವ ಮಹಿಳೆ ಸ್ಥಳದಲ್ಲೇ ಸಾವು.

ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…

1 month ago

ರಸ್ತೆ ಅಪಘಾತ; ಗೊಲಗೇರಿ ಗ್ರಾಮದ ಯುವಕ ಸಾವು.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…

1 month ago

ಕುಡಿಯುವ ನೀರಿನ ಬಿಲ್ ಪಾವತಿ ಮಾಡಬೇಡಿ -ಮಾಜಿ ಶಾಸಕ ಹರ್ಷವರ್ಧನ್

ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…

1 month ago

ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…

1 month ago

ಮಟ-ಮಟ ಮಧ್ಯಾಹ್ನ‌ ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿ ‌

ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…

1 month ago