ಬೆಂಗಳೂರು: ಸುಮ್ಮನಹಳ್ಳಿ ಹತ್ತಿರ ಇರುವಂತಹ ಸಜ್ಜೆಪಾಳ್ಯ, ಅಂಜನಗರ, ದಿನ್ನೂರು, ಹೆಬ್ಬಾಳದ ಬಳಿ ಗುಡ್ಡದಹಳ್ಳಿ ಮತ್ತು ಮಾಳಗಳ. ಸೇರಿದಂತೆ ಬೆಂಗಳೂರು ಉತ್ತರದ ಸುಮಾರು 6 ಬಿ.ಸಿ.ಎಂ ಹಾಸ್ಟೆಲ್ ಗಳನ್ನು ಯಲಹಂಕದ ಬಳಿ ಇರುವ ಮುತ್ತುಗದ ಹಳ್ಳಿ, ಶಿವಕೋಟೆ ಗ್ರಾಮ ಪಂಚಾಯಿತಿ, ಹೆಸರಘಟ್ಟ ಹೋಬಳಿ ಹತ್ತಿರ ವರ್ಗಾವಣೆ ಮಾಡುತ್ತಿದ್ದು ಹೊಸ ಹಾಸ್ಟೆಲ್ ಕಾಲೇಜುಗಳಿಗೆ ತುಂಬಾ ದೂರವಿದ್ದು ಸುಮಾರು 40 ರಿಂದ 50 ಕಿಲೋಮೀಟರ್ ಆಗುತ್ತದೆ. ಪ್ರಯಾಣದ ಸಮಯವೇ ದಿನಕ್ಕೆ ೨ ರಿಂದ 3 ತಾಸು ತೆಗೆದುಕೊಳ್ಳುತ್ತದೆ. ಮತ್ತು ಆ ಸ್ಥಳಕ್ಕೆ ಸರಿಯಾದ ರೀತಿಯ ಬಸ್ ವ್ಯವಸ್ಥೆಯು ಸಹ ಇಲ್ಲ.
ಹೊಸದಾಗಿ ಮಾಡಿರುವ ಹಾಸ್ಟೆಲ್ ನಿಂದ ಬಸ್ ಸ್ಟಾಪ್ ಗೆ ಬರಬೇಕೆಂದರೆ ವಿದ್ಯಾರ್ಥಿಗಳು ಸುಮಾರು ೨ ರಿಂದ 3 ಕಿಲೋಮೀಟರ್ ನಷ್ಟು ನಡೆಯಬೇಕು. ಆ ಸ್ಥಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವುದರಿಂದ ಇನ್ನೂ ಕೆಲ ಮೂಲಭೂತ ಸೌಕರ್ಯಗಳು ಸಹ ಇರುವುದಿಲ್ಲ. ಅದಕ್ಕಾಗಿ ವಿದ್ಯಾರ್ಥಿಗಳು ಇದನ್ನು ಅಧಿಕಾರಿಗಳಲ್ಲಿ ತಿಳಿಸಿದರೆ ಅವರು ಇದನ್ನು ಲೆಕ್ಕಿಸದೆ ನಾವು ವರ್ಗಾಯಿಸ್ತಿದ್ದೇವೆ ನೀವು ನಿಮ್ಮ ಲಗೇಜ್ ಗಳನ್ನು ತೆಗೆದುಕೊಂಡು ಬನ್ನಿ ಎಂದು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಮಾಡಿ ವರ್ಗಾಯಿಸಲು ಸಿದ್ಧಗೊಂಡಿದ್ದಾರೆ.
ವಿದ್ಯಾರ್ಥಿಗಳು ಶನಿವಾರದಿಂದ ಯಾವುದೇ ಕಾಲೇಜುಗಳಿಗೆ ಹೋಗದೆ ಹಾಸ್ಟೆಲಲ್ಲೇ ಉಳಿದು ವರ್ಗಾವಣೆ ಬೇಡ ಎಂದು ಅಧಿಕಾರಿಗಳ ಬಳಿ ಅಂಗಲಾಚಿ ಬೇಡಿಕೊಂಡಿದ್ದಾರೆ. ಅಧಿಕಾರಿಗಳು ಯಾವುದಕ್ಕೂ ಬಗ್ಗದ ಕಾರಣ ವಿದ್ಯಾರ್ಥಿಗಳು ಸೋಮವಾರದಂದು ಫ್ರೀಡಂ ಪಾರ್ಕ್ ಹತ್ತಿರ ಪ್ರೊಟೆಸ್ಟ್ ಮಾಡಿದ್ದಾರೆ ಆದರೆ ಅದು ಸಹ ಸಫಲವಾಗಿಲ್ಲ. ಮೊದಲೇ ನೋಟಿಸ್ ಕೊಡದೆ ಈಗ ದಿಢೀರನೆ ಖಾಲಿ ಮಾಡಿಕೊಂಡು ಹೊಸ ಹಾಸ್ಟೆಲ್ ಗೆ ಹೋಗಿ ಎಂದು ಹೇಳಿದರು ಕಷ್ಟವಾಗುತ್ತದೆ ಎಂದು ಹೇಳಿದ ವಿದ್ಯಾರ್ಥಿಗಳಿಗೆ ಅಧಿಕಾರಿಗಳು ನಿಮಗೆ ನೋಟಿಸ್ ಕೇಳುವ ಅಧಿಕಾರವಿಲ್ಲ ಎಂದು ದಬಾಯಿಸಿದ್ದಾರೆ ಹಾಗೂ ಪೊಲೀಸರನ್ನು ಸಹ ಕರೆಸಿ ವಿದ್ಯಾರ್ಥಿಗಳನ್ನು ಬೆದರಿಸುವ ಕೆಲಸ ಮಾಡಿದ್ದಾರೆ. ಅಧಿಕಾರಿಗಳು ವಿದ್ಯಾರ್ಥಿಗಳ ಮೇಲೆ ಇಷ್ಟೆಲ್ಲಾ ದೌರ್ಜನ್ಯವೆಸಗುತ್ತಿದ್ದರು ಯಾವೊಬ್ಬ ಜನಪ್ರತಿನಿಧಿಯೂ ಇತ್ತ ಗಮನಹರಿಸಿರುವುದಿಲ್ಲ.
ಅಧಿಕಾರಿಗಳಿಂದ ಬೇಸತ್ತ ವಿದ್ಯಾರ್ಥಿಗಳು ಅಧಿಕಾರಿಗಳು ದಬ್ಬಾಳಿಕೆ ಮಾಡುತ್ತಿರುವ ಸಂದರ್ಭದಲ್ಲಿ ವೀಡಿಯೋವನ್ನು ಚಿತ್ರಿಸಲು ಮುಂದಾಗಿದ್ದಾರೆ ಇದನ್ನು ಗಮನಿಸಿದ ಅಧಿಕಾರಿಗಳು ವೀಡಿಯೋ ಚಿತ್ರಿಸಲು ನಿಮಗೆ ಅಧಿಕಾರವಿಲ್ಲ ಎಂದು ದಬಾಯಿಸಿದ್ದಾರೆ. ನಂತರ ಚಿತ್ರಿಸಿರುವ ವೀಡಿಯೋವನ್ನು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಜನಪ್ರತಿನಿಧಿಗಳು ಈಗಲಾದರೂ ಎಚ್ಚೆತ್ತುಕೊಂಡು ವಿದ್ಯಾರ್ಥಿಗಳಿಗೆ ನೆರವಾಗಬೇಕಿದೆ.
ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…
ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…
ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್ಓಸಿ ನೀಡಿ…
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…
ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…