Latest

ಓಲಾ ಉಬರ್ ಆಟೋಗಳು ಬ್ಯಾನ್

ಓಲಾ ಹಾಗು ಊಬರ್ ಆಟೋಗಳನ್ನು ಸ್ಥಗಿತಗೊಳಿಸಲಾಗಿದ್ದು, ರಸ್ತೆಗಿಳಿಸಿದ್ರೆ 5 ಸಾವಿರ ದಂಡ ಹಾಕೋದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ಕಳೆದ ಹಲವು ವರ್ಷಗಳಿಂದ ಅನಧಿಕೃತವಾಗಿ ಸೇವೆ ನೀಡ್ತಿದ್ದ ಓಲಾ ಊಬರ್ ಆಟೋಗಳ ಹಗಲು ದರೋಡೆಗೆ ಪ್ರತಿಯೊಬ್ಬರೂ ಹೈರಾಣಾಗಿದ್ದಾರೆ. ಹೀಗಾಗಿ ಕಳೆದ ಕೆಲ ದಿನಗಳಿಂದ ಆಪ್ ಆಧಾರಿತ ಆಟೋಗಳನ್ನು ಬ್ಯಾನ್ ಮಾಡಬೇಕು ಅಂತ ತೀವ್ರ ಪ್ರಮಾಣದ ಹೋರಾಟ‌ ನಡೆದ ಬೆನ್ನಲ್ಲೇ ಓಲಾ ಉಬರ್ ಕಂಪನಿಗಳಿಗೆ ನೊಟೀಸ್ ಕೊಟ್ಟು ಸೂಕ್ತ ಉತ್ತರ ನೀಡುವಂತೆ ಸಾರಿಗೆ ಇಲಾಖೆ ಸೂಚನೆ ನೀಡಿತ್ತು. ಐದು ದಿನಗಳ ಬಳಿಕ ಅಗ್ರಿಗೇಟರ್ಸ್ ಕಂಪೆನಿಗಳು ಉತ್ತರ ಕೊಟ್ಟಿದ್ರೂ ಸಾರಿಗೆ ಇಲಾಖೆ ಕೋರ್ಟ್ ಮೊರೆ ಹೋಗಲು ನಿರ್ಧರಿಸಿತ್ತು. ಆದ್ರೆ ಇಂದು ಓಲಾ ಉಬರ್ ಕಂಪೆನಿಗಳ ಜೊತೆ ಸಾರಿಗೆ ಇಲಾಖೆ ಸಭೆ ನಡೆಸಿ ಮಹತ್ವದ ನಿರ್ಧಾರಕ್ಕೆ ಬಂದಿದೆ. ಸಭೆಯಲ್ಲಿ ಓಲಾ ಉಬರ್ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಲಾಯ್ತು. ಸುಮಾರು ಒಂದು ಗಂಟೆಗಳ ಕಾಲ ನಡೆದ ಸಭೆ ಬಳಿಕ ನಾಳೆಯಿಂದ ಆಯಪ್ ಆಧಾರಿತ ಆಟೋಗಳು ರಸ್ತೆಗಿಳಿಯದಂತೆ ಎರಡು ಕಂಪನಿಗಳಿಗೆ ಸೂಚನೆ ನೀಡಲಾಗಿದೆ. ಒಂದೊಮ್ಮೆ ರಸ್ತೆಗಿಳಿದ್ರೆ, ಕಂಪನಿಗೆ ದಂಡ ವಿಧಿಸಲಾಗುತ್ತೆ. ಪದೇ ಪದೇ ಉಲ್ಲಂಘನೆ ಮಾಡಿದ್ರೆ, ಆಯಪ್ ಬ್ಯಾನ್ ಮಾಡಲು ಕೂಡ ಸೈಬರ್ ವಿಭಾಗಕ್ಕೆ ದೂರು ನೀಡಲು ನಿರ್ಧಾರ ಮಾಡಲಾಗಿದೆ.
ಇನ್ನು ಸಾರ್ವಜನಿಕರಿಗೂ ನಾಳೆಯಿಂದ ಓಲಾ, ಉಬರ್ ಆಯಪ್ ನಲ್ಲಿ ಬುಕ್ ಮಾಡಬೇಡಿ ಎಂದು ಸಾರಿಗೆ ಆಯುಕ್ತರು ಮನವಿ ಮಾಡಿದ್ದಾರೆ. ಸಾರ್ವಜನಿಕರು ತಾವೇ ಸ್ವತಃ ನಿರ್ಧಾರಕ್ಕೆ ಬಂದು ಆಪ್ ಬಳಕೆ ಮಾಡ್ಬೇಡಿ. ಒಂದುವೇಳೆ ಓಲಾ ಆಟೋ ಸೇವೆ ಬಗ್ಗೆ ಗೊತ್ತಾದ್ರೆ ಸಾರಿಗೆ ಇಲಾಖೆ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು. ಸಹಾಯವಾಣಿ 9449863426, 9449863429 ನಂಬರ್ಗೆ ಕರೆ ಮಾಡಿ ದೂರು ಸಲ್ಲಿಸಬಹುದು.

kiran

Recent Posts

ಪತ್ನಿಯ ಶೀಲ ಶಂಕಿಸಿ ಶೆಡ್ ನಲ್ಲಿ ಕೂಡಿಟ್ಟ ಪೊಲೀಸ್ ಪೇದೆ.

ಜನರಿಗೆ ನ್ಯಾಯ ಕೊಡಿಸಬೇಕಿದ್ದ ಮಹಿಳೆಯರ ರಕ್ಷಣೆ ಮಾಡಬೇಕಿದ್ದ ಮಹಿಳೆಯರ ರಕ್ಷಣೆ ಸದಾ ಸಿದ್ದರಿರಬೇಕಾಗಿದ್ದ ಪೊಲೀಸ್ ಸಿಬ್ಬಂದಿಯೇ ತನ್ನ ಹೆಂಡತಿಯ ಶೀಲ…

1 month ago

ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕಾಮಗಾರಿ ಮಾಡಿದ ಬಿಲ್ ಮಾಡಿಕೊಡಲು ಗುತ್ತಿಗೆದಾರನ ಬಳಿ ಲಂಚ ಪಡೆಯುವಾಗ ಅಧಿಕಾರಿಗಳು ಲೋಕಾಯುಕ್ತ ಬಲೆಗೆ…

1 month ago

ಸಾಕು ತಂದೆಯಿಂದಲೇ ಭೀಕರ ಕೊಲೆಯಾದ ಇಬ್ಬರು ಹೆಣ್ಣು ಮಕ್ಕಳು.

ಬೆಂಗಳೂರಿನ ದಾಸರಹಳ್ಳಿಯಲ್ಲಿ ಸಾಕು ತಂದೆಯೊಬ್ಬ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ತಲೆಮೆರೆಸಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಈ ಭೀಕರ…

1 month ago

ಇನ್ನು ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿಸುವಂತಿಲ್ಲ: ಸಿಎಂ

ಕೃಷಿಕರಲ್ಲದವರಿಗೆ ಇನ್ನೂ ಕೃಷಿ ಭೂಮಿ ಸಿಗುವುದಿಲ್ಲ. ಬಿಜೆಪಿ ತಂದಿದ್ದ ಭೂ ಕಾಯ್ದೆ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ…

2 months ago

ಕಾಮ ಬಯಕೆ ಇದ್ದರೇ ‘ರೆಡ್ ಲೈಟ್ ಏರಿಯಾ’ಗೆ ಬನ್ನಿ, ಅತ್ಯಾಚಾರ ಮಾಡಬೇಡಿ: ಲೈಂಗಿಕ ಕಾರ್ಯಕರ್ತೆ

ಸೋನಾಗಾಚಿ ರೆಡ್ ಲೈಟ್ ಪ್ರದೇಶದ ಮಹಿಳೆಯೊಬ್ಬರು ಯುವ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯ ನಂತರ ಹೃದಯ ವಿದ್ರಾವಕ ಹೇಳಿಕೆಯೊಂದಿಗೆ…

2 months ago

ಶಾಲೆಯ ಮುಂದೆ ಇಲ್ಲ ಸ್ವಚ್ಛತೆ; ರೋಗಕ್ಕೆ ಆಹ್ವಾನ ನೀಡುತ್ತಿರುವ ಪಿಡಿಒ!

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಬಿಲಕೆರೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬಿಲಕೆರೂರ…

2 months ago