ಯುಗಾದಿ ಅಮಾವಾಸ್ಯೆ ದಿನವಾದ ಇಂದು ಜವರಾಯನ ಅಟ್ಟಹಾಸಕ್ಕೆ ಮೂರು ಮಂದಿ ಜಲಸಮಾಧಿಯಾಗಿರುವ ಘಟನೆ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕಾಮಹಳ್ಳಿಯಲ್ಲಿ ನಡೆದಿದೆ ಇದರಿಂದಾಗಿ ಇಡೀ ಗ್ರಾಮದಲ್ಲಿ ಯುಗಾದಿ ಸಂಭ್ರಮಕ್ಕೆ ಬರಸಿಡಿಲು ಬಡಿದಂತಾಗಿದೆ .
ಸಂಪ್ರದಾಯದಂತೆ ಯುಗಾದಿ ಅಮಾವಾಸ್ಯೆಯಂದು ಮನೆಯಲ್ಲಿರುವ ದನ ಕರುಗಳನ್ನು ತೊಳೆದು ಶುಚಿಗೊಳಿಸುವುದು ವಾಡಿಕೆ ಅದರಂತೆ ದನ ಕರುಗಳನ್ನು ತೊಳೆಯಲು ಹೋದ ಮೂವರು ಜಲ ಸಮಾಧಿಯಾಗಿದ್ದಾರೆ
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಮೃತ ದೇಹಗಳ ಹುಡುಕಾಟ ನಡೆಸಿ ಮೂರು ಮೃತ ದೇಹಗಳನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ
ಇದರಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು . ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ಕಾಮಹಳ್ಳಿಯಲ್ಲಿ ಘಟನೆ ನಡೆದಿದ್ದು ಇಂದು ಅಮವಾಸ್ಯೆ, ನಾಳೆ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಹಸುಗಳನ್ನು ತೊಳೆಯಲು ಕೆರೆಗೆ ಹೋಗಿದ್ದ ಮೂವರು ನೀರು ಪಾಲಾಗಿ ಸಾವನ್ನಪ್ಪಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ೧೭ ವರ್ಷದ ವಿನೋದ್, ೪೫ ವರ್ಷದ ಬಸವೇಗೌಡ, ೪೮ ವರ್ಷದ ಮುದ್ದೇಗೌಡ ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ . ಪ್ರತಿ ವರ್ಷದಂತೆ ಈ ವರ್ಷವೂ ಯುಗಾದಿ ಹಬ್ಬದ ಸಿದ್ದತೆ ಭರದಿಂದ ಸಾಗಿತ್ತು. ಇವತ್ತು ಅಮಾವಾಸ್ಯೆ ಹಿನ್ನೆಲೆಯಲ್ಲಿ ದನ ಕರುಗಳನ್ನು ತೊಳೆದು, ಶುಚಿ ಮಾಡಲು ತೆರಳಿದ್ದ ವೇಳೆ ಈ ಅವಘಢ ಸಂಭವಿಸಿದೆ. ಬೆಳಿಗ್ಗೆ ೮.೩೦ರ ಸರಿ ಸುಮಾರಿಗೆ ಮನೆಯಿಂದ ಕೆರೆಯತ್ತ ತೆರಳಿ, ಜಾನುವಾರುಗಳನ್ನು ತೊಳೆಯಲು ಮುಂದಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ರೇ, ನಾಳೆ ಯುಗಾದಿ ಹಬ್ಬದ ಸಂಭ್ರಮ ಸಡಗರ ಮನೆ ಮಾಡುತ್ತಿತ್ತು. ಆದರೆ ಕೆರೆಯಲ್ಲಿ ಜವರಾಯ ಹೊಂಚು ಹಾಕಿ ಕುಳಿತಿದ್ದು, ಹಸು ತೊಳೆಯಲು ಹೋಗಿದ್ದ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ೧೭ ವರ್ಷದ ವಿನೋದ್‌ ಆಯಾ ತಪ್ಪಿ ನೀರಿಗೆ ಬಿದ್ದಿದ್ದಾನೆ. ನೀರು ಪಾಲಾಗಿ ಮುಳುಗುತ್ತಿದ್ದ ವಿನೋದ್‌ ರಕ್ಷಣೆಗೆ ಪಕ್ಕದಲ್ಲೆ ಇದ್ದ ಬಸವೇಗೌಡ ಹಾಗೂ ಮುದ್ದೇಗೌಡ ಮುಂದಾಗಿದ್ದಾರೆ ಕೊನೆಗೆ ಒಬ್ಬರನ್ನೊಬ್ಬರು ರಕ್ಷಿಸಿಕೊಳ್ಳಲಾಗದೆ ಕೊನೆಗೆ ಮೂವರು ಕೂಡ ಜಲಸಮಾಧಿಯಾಗಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿ, ನೀರು ಪಾಲಾದವರ ಪತ್ತೆ ಕಾರ್ಯಕ್ಕೆ ಮುಂದಾಗಿ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ ಕೃತ ದೇಹಗಳನ್ನು ಹೊರ ತೆಗೆಯುತ್ತಿದ್ದಂತೆ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮೃತರ ಕುಟುಂಬಸ್ಥರ ಪಾಲಿಗೆ, ಇಂದಿನ ಅಮವಾಸ್ಯೆ ತನ್ನ ಕರಾಳತೆಯನ್ನ ಅನಾವರಣಪಡಿಸಿ, ಯುಗಾದಿ ಸಂಭ್ರಮ ಹೋಗಿ ಸೂತಕದ ಛಾಯೆ ಆವರಿಸುವಂತೆ ಮಾಡಿದ್ದು, ದುರಂತವೇ ಸರಿ ಅನ್ನುವಂತೆ ಮಾಡಿದೆ.

error: Content is protected !!