ಚಿಕ್ಕಮಗಳೂರು ಜಿಲ್ಲೆಯ ಅತ್ತಿಗಿರಿ ಸೆಕ್ಷನ್ ವ್ಯಾಪ್ತಿಯ ತೋಗರಿಹಂಕಲ್ ಗ್ರಾಮದ ಕೂತನ್ಕುಲ್ ಎಸ್ಟೇಟ್‌ನಲ್ಲಿ ಇಂದು ಬೆಳಗಿನ ಜಾವ ಕಡವೆ ಬೇಟೆಯ ಪ್ರಕರಣ ಬೆಳಕಿಗೆ ಬಂದಿದೆ. ತೋಟದ ರೈಟರ್ ದೇವಯ್ಯ ಅವರು ಕಡವೆ ಬೇಟೆಯಾಟ ನಡೆಸಿದ ಆರೋಪದ ಮೇರೆಗೆ ಅರಣ್ಯ ಸಂಚಾರಿ ದಳ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದೆ.
ಬೇಟೆಯ ನಂತರ ಮಾಂಸವನ್ನು ತುಂಡು ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ದಳ, ಅಂದಾಜು 40 ಕೆ.ಜಿ ಮಾಂಸ, ಚರ್ಮ, ಚೂರಿ, ಮತ್ತು ಬೇಟೆಗೆ ಬಳಸಲಾಗುತ್ತಿದ್ದ ಎರಡು ಕೋವಿಗಳನ್ನು ವಶಪಡಿಸಿಕೊಂಡಿದೆ.
ಬಂಧಿತನ ವಿರುದ್ಧ ವನ್ಯಜೀವಿ ಸಂರಕ್ಷಣೆ ಮತ್ತು ಅರಣ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಮುಂದುವರೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related News

error: Content is protected !!