ಚಿಕ್ಕಮಗಳೂರು ಜಿಲ್ಲೆಯ ಅತ್ತಿಗಿರಿ ಸೆಕ್ಷನ್ ವ್ಯಾಪ್ತಿಯ ತೋಗರಿಹಂಕಲ್ ಗ್ರಾಮದ ಕೂತನ್ಕುಲ್ ಎಸ್ಟೇಟ್‌ನಲ್ಲಿ ಇಂದು ಬೆಳಗಿನ ಜಾವ ಕಡವೆ ಬೇಟೆಯ ಪ್ರಕರಣ ಬೆಳಕಿಗೆ ಬಂದಿದೆ. ತೋಟದ ರೈಟರ್ ದೇವಯ್ಯ ಅವರು ಕಡವೆ ಬೇಟೆಯಾಟ ನಡೆಸಿದ ಆರೋಪದ ಮೇರೆಗೆ ಅರಣ್ಯ ಸಂಚಾರಿ ದಳ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದೆ.
ಬೇಟೆಯ ನಂತರ ಮಾಂಸವನ್ನು ತುಂಡು ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ದಳ, ಅಂದಾಜು 40 ಕೆ.ಜಿ ಮಾಂಸ, ಚರ್ಮ, ಚೂರಿ, ಮತ್ತು ಬೇಟೆಗೆ ಬಳಸಲಾಗುತ್ತಿದ್ದ ಎರಡು ಕೋವಿಗಳನ್ನು ವಶಪಡಿಸಿಕೊಂಡಿದೆ.
ಬಂಧಿತನ ವಿರುದ್ಧ ವನ್ಯಜೀವಿ ಸಂರಕ್ಷಣೆ ಮತ್ತು ಅರಣ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಮುಂದುವರೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳಸ ಠಾಣೆಯ ಪೊಲೀಸರು ಎಡದಾಳು ಬೋವಿಪಾಲ್ ಪ್ರದೇಶದಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಬಿಚ್ಚಿಟ್ಟಿದ್ದು, ಇದರಲ್ಲಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ…
ಬೆಂಗಳೂರು ಹೊರವಲಯದ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿರುವ ಸಾಯಿ ಪ್ಯಾಕೇಜಿಂಗ್ ಕಾರ್ಖಾನೆಯಲ್ಲಿ ಆಘಾತಕಾರಿ ಅವಘಡ ಸಂಭವಿಸಿದೆ. ಕೆಲಸ ನಿರ್ವಹಿಸುತ್ತಿದ್ದ ವೇಳೆ 17…
ಗುಂಡ್ಲುಪೇಟೆ ತಾಲ್ಲೂಕಿನ ಚನ್ನಮಲ್ಲಿಪುರ ಗ್ರಾಮದಲ್ಲಿ ಪಕ್ಕದ ಮನೆಯವರ ಮಾನಸಿಕ ಕಿರುಕುಳದಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. 24…
ಉತ್ತರ ಪ್ರದೇಶದ ಷಹಜಾನ್‌ಪುರದಲ್ಲಿ ಶಾಲಾ ಶಿಕ್ಷಕಿ ಮತ್ತು ಅವರ ಪತಿಯ ಮೇಲೆ ಕಿಡಿಗೇಡಿಗಳ ಗುಂಪೊಂದು ದಾಳಿ ನಡೆಸಿದ ಘಟನೆ ಭಾರಿ…
ಇತ್ತೀಚೆಗೆ ಬೆಳಗಾವಿಯ ಚಿಂಚೋಳಿ ಪ್ರದೇಶದಲ್ಲಿ ಒಂದು ಘಟನೆ ನಡೆದಿದೆ, ಎಲೋಸು ಮಲತಾಯಿ ತನ್ನ 4 ವರ್ಷದ ಮಗಳಿಗೆ ಭಾರೀ ಚಿತ್ರಹಿಂಸೆ…
ಕನ್ಯಾನ ಬನಶಂಕರಿ ಪ್ರದೇಶದ ನಿವಾಸಿ ಹಾಗೂ ಖಾಸಗಿ ಬಸ್ ಮಾಲೀಕ ಶಿವಪ್ರಸಾದ್ ಅವರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಹೆಬ್ರಿ…