ತಂತ್ರಜ್ಞಾನ ಬೆಳೆದಂತೆಲ್ಲಾ ವ್ಯಾಪಾರ-ವ್ಯವಹಾರ ವೆಲ್ಲವು ಆನ್ಲೈನಲ್ಲೇ ಆರಂಭವಾಗಿದೆ. ಭಾರತಕ್ಕೆ ಜಿಯೋ(ಸಿಮ್) ಬಂದ ನಂತರವಂತೂ ಅತಿ ಹೆಚ್ಚು ಜನರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಾರೆ. ಮದುವೆಗೆಂದು ಹೆಣ್ಣು, ಮಕ್ಕಳಿಗೆ ಹೆಸರು, ಜಾತಕ, ಭವಿಷ್ಯ, ದಿನಸಿ, ತರಕಾರಿ, ಹಣ್ಣು, ಔಷಧಿಗಳು ಹಾಗೂ ಇನ್ನೂ ಹಲವು ಆನ್ಲೈನಲ್ಲೇ ದೊರೆಯುತ್ತಿದೆ. ಮನೆಯಲ್ಲಿ ಕೂತು ತಮಗೆ ಬೇಕಾದಂತಹದ್ದನ್ನು ಮನೆಗೆ ತರಿಸಿಕೊಳ್ಳಬಹುದು ಹಾಗೂ ದೂರದೂರಿನಲ್ಲಿ ನಡೆಯುತ್ತಿರುವ ಎಲ್ಲಾ ವಿಚಾರಗಳು ಹಾಗೂ ಪ್ರವಾಸಿ ತಾಣಗಳನ್ನು ಮನೆಯಲ್ಲಿ ಕೂತು ವೀಕ್ಷಿಸಬಹುದು. ಬ್ಯಾಂಕಿಗೆ ಸಂಬಂಧಪಟ್ಟ ಎಲ್ಲಾ ವ್ಯವಹಾರಗಳನ್ನು ಸಹ ಮನೆಯಲ್ಲಿ ಕೂತು ಆನ್ಲೈನ್ ಮುಖಾಂತರ ಮಾಡಬಹುದು. ರೈತರಿಗೆ ಅವಶ್ಯಕವಾದಂತಹದ್ದು ಹಾಗೂ ಕೆಲ ಸರ್ಕಾರಿ ಯೋಜನೆಗಳು ಸಹ ಆನ್ಲೈನ್ ಮುಖಾಂತರವೇ ನಡೆಯುತ್ತಿದೆ. ಇಷ್ಟು ಮಾತ್ರವಲ್ಲದೆ ಲಾಕ್ಡೌನ್ ಸಂದರ್ಭದಲ್ಲಿ ಕೆಲ
ಫೇಸ್ಬುಕ್ ಬಳಕೆದಾರರು ಹೆಚ್ಚಾದ ಕಾರಣ ಫೇಸ್ಬುಕ್‌ನಲ್ಲಿ ಬರುವ ಜಾಹೀರಾತುಗಳು ಸಹ ಹೆಚ್ಚಾಗಿವೆ. ಈ ರೀತಿ ಬರುವ ಜಾಹಿರಾತುಗಳಲ್ಲಿ ಶೇಕಡ ಅರ್ಧದಷ್ಟು ಜಾಹೀರಾತುಗಳು ನಕಲಿಯಾಗಿರುತ್ತವೆ. ಅಂತಹ ನಕಲಿ ಜಾಹೀರಾತುಗಳಲ್ಲಿ ಕೆಲ ಜಾಹೀರಾತುಗಳು ವಂಚಕರದೆ ಆಗಿರುತ್ತದೆ. ಫೇಸ್ಬುಕ್ನಲ್ಲಿ ಜಾಹೀರಾತನ್ನು ನೀಡುತ್ತಿರುವವರ ಸಂಪೂರ್ಣ ಮಾಹಿತಿಯನ್ನು ಫೇಸ್ಬುಕ್ ಪರಿಶೀಲಿಸುವುದಿಲ್ಲ ಹಾಗೂ ಅವರ ಮಾಹಿತಿಯನ್ನು ಸಹ ಪಡೆಯುವುದಿಲ್ಲ. ಇದೇ ಕಾರಣಕ್ಕಾಗಿ ಆನ್ಲೈನ್ ವಂಚಕರು ಯಾರ ಭಯವಿಲ್ಲದೆ ರಾಜಾರೋಷವಾಗಿ ಜಾಹೀರಾತುಗಳನ್ನು ಪ್ರಕಟಿಸಿ ವಂಚಿಸುತ್ತಿದ್ದಾರೆ. ಜಾಹೀರಾತಿನಲ್ಲಿ ೧ ಲಕ್ಷ ಅಥವಾ ೨ ಲಕ್ಷ ಮೌಲ್ಯದ
ದುಬಾರಿ ಬೈಕ್‌ಗಳನ್ನು ಕೇವಲ ೨೦ ರಿಂದ ೨೫ ಸಾವಿರ ರೂಗಳಿಗೆ ಮಾರಾಟಕ್ಕಿದೆ ಎಂದು ಪ್ರಕಟಿಸಿ ಕೊಂಡಿರುತ್ತಾರೆ. ಇದನ್ನು ಕಂಡ ಎಷ್ಟೋ ಜನರು ಈ ಜಾಹೀರಾತುಗಳು ಸತ್ಯವೆಂದು ಭಾವಿಸಿ ಅದಕ್ಕೆ ಪ್ರತಿಕ್ರಿಯಿಸುತ್ತಾರೆ. ಜಾಹೀರಾತುಗಳನ್ನು ಕಂಡು ಪ್ರತಿಕ್ರಿಯಿಸಿರುವಂತಹ ಜನರಿಗೆ ವಂಚಕರು ತಾನೊಬ್ಬ ಸೈನಿಕ ನೆಂದು ಅನಾಮಧೇಯ ವ್ಯಕ್ತಿಯೋರ್ವ ಯೋಧನ ವಸ್ತ್ರಧರಿಸಿರುವಂತಹ ಚಿತ್ರಗಳನ್ನು ಕಳುಹಿಸುವುದರ ಮೂಲಕ ಮುಗ್ಧ ಜನರನ್ನು ನಂಬಿಸುತ್ತಾರೆ. ಸೈನಿಕರೆಂದರೆ ಎಲ್ಲರಿಗೂ ಗೌರವ ಇದ್ದದ್ದೆ ಅದೇ ಕಾರಣಕ್ಕಾಗಿ ಮುಗ್ಧ ಜನರು ಅವರನ್ನು ನಂಬುತ್ತಾರೆ. ನಂತರ ವಂಚಕರು ನಾವು ಏರ್ಪೋರ್ಟ್ನಲ್ಲಿ, ಯುದ್ಧಭೂಮಿಯಲ್ಲಿ ಅಥವಾ ದೂರದೂರಿನಲ್ಲಿ ಇದ್ದೇವೆ ಆದಕಾರಣ ನಾವು ನೇರವಾಗಿ ಭೇಟಿಯಾಗಲು ಸಾಧ್ಯವಿಲ್ಲ ಎಂದು ಸುಳ್ಳು ಹೇಳಿ. ಮೊದಲೇ ಹಣವನ್ನು ಪಾವತಿಸಿ ನಾವು ತಮ್ಮ ಮನೆಗೆ ವಾಹನವನ್ನು ನೇರವಾಗಿ ಕಳುಹಿಸುತ್
ತೇವೆ ಎಂದು ಮುಗ್ಧ ಜನರನ್ನು ನಂಬಿಸುತ್ತಾರೆ. ಇವರುಗಳ ಬಗ್ಗೆ ಯಾವುದೇ ರೀತಿ ಪರಿಶೀಲಿಸದೆ ಮುಗ್ಧ ಜನರು ಸೈನಿಕರ ಮೇಲಿರುವ ಗೌರವಕ್ಕೆ ಹಣವನ್ನು ಪಾವತಿಸಿದರೆ ಅವರ ಕಥೆ ಅಲ್ಲಿಗೆ ಮುಗಿಯಿತು. ಯಾವುದೇ ರೀತಿಯ ವಾಹನಗಳು ಬರುವುದಿಲ್ಲ ಹಾಗೂ ಅವರ ಹಣವೂ ಸಹ ಹಿಂತಿರುಗುವುದಿಲ್ಲ. ಹಣ ಬಂದ ತಕ್ಷಣ ವಂಚಕರು ಹಣ ಪಾವತಿಸಿರುವವರ ದೂರವಾಣಿ ಸಂಖ್ಯೆ ಹಾಗೂ ಫೇಸ್ಬುಕ್ ಖಾತೆಗಳನ್ನು ಬ್ಲಾಕ್ ಮಾಡುತ್ತಾರೆ. ವಂಚನೆಗೊಳಗಾದ ಜನರು ವಂಚಕರ ವಿರುದ್ಧ ದೂರು ನೀಡಿದರೂ ಸಹ ಯಾವುದೇ ರೀತಿಯ ಪ್ರಯೋಜನಗಳಾಗುತ್ತವೆ ಎಂಬ ಲಕ್ಷಣಗಳು ಕಾಣುತ್ತಿಲ್ಲ.
ಫೇಸ್ಬುಕ್ನಲ್ಲಿ ಮಾತ್ರವೇ ಅಲ್ಲದೆ ವಾಟ್ಸಪ್ ಮುಖಾಂತರವೂ ಸಹ ವಂಚಕರು ವಂಚಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಾಟ್ಸಪ್ ಗ್ರೂಪ್‌ಗಳಲ್ಲಿ ತಮ್ಮ ದೂರವಾಣಿ ಸಂಖ್ಯೆಯನ್ನು ಪಡೆಯುವ ವಂಚಕರು ರಿಯಾಯಿತಿದರದಲ್ಲಿ ವಾಹನಗಳು ಮಾರಾಟಕ್ಕಿವೆ ಎಂದು ಸುಳ್ಳು ಸಂದೇಶವನ್ನು ಕಳುಹಿಸುತ್ತಾರೆ. ಈ ಸುಳ್ಳು ಸಂದೇಶಗಳಿಗೆ ಮಾರುಹೋಗಿ ಮುಗ್ಧ ಜನರು ಅದಕ್ಕೆ ಪ್ರತಿಕ್ರಿಯಿಸಿದರೆ. ಮತ್ತದೇ ಅನಾಮಧೇಯ ವ್ಯಕ್ತಿಯೋರ್ವನು ಯೋಧನ ವಸ್ತ್ರ ಧರಿಸಿರುವ ಭಾವಚಿತ್ರವನ್ನು ಕಳುಹಿಸಿ ಮೇಲೆ ಮೊದಲೇ ತಿಳಿಸಿರುವ ಹಾಗೆ ಮತ್ತದೇ ರೀತಿಯಲ್ಲಿ ಸುಳ್ಳುಗಳನ್ನು ಹೇಳಿ ಹಣ ಪಡೆದು ವಂಚಿಸುತ್ತಾರೆ.
ಇನ್ ಸ್ಟಾಗ್ರಾಮ್‌ನ ಬಳಕೆದಾರರು ಹೆಚ್ಚಾಗುತ್ತಿದ್ದಂತೆ ವಂಚಕರು ಇನ್ಸ್ಟಾಗ್ರಾಮ್‌ನಲ್ಲೂ ಸಹ ವಂಚಿಸಲು ಮುಂದಾಗಿದ್ದಾರೆ. ಫೇಸ್ಬುಕ್ನಲ್ಲಿ ಹೇಗೆ ಜಾಹೀರಾತುಗಳನ್ನು ನೀಡುತ್ತಾರೋ ಅದೇ ರೀತಿಯಲ್ಲಿ ಇನ್ ಸ್ಟಾ ಗ್ರಾಮ್‌ನಲ್ಲೂ ಸಹ ಜಾಹೀರಾತುಗಳನ್ನು ನೀಡಿ ದುಬಾರಿ ಬೆಲೆಯ ವಸ್ತುಗಳು ಹಾಗೂ ವಾಹನಗಳನ್ನು ಕಡಿಮೆ ಬೆಲೆಗೆ ನೀಡುತ್ತೇವೆ ಎಂದು ಪ್ರಕಟಿಸಿ ಕೊಳ್ಳುವುದರ
ಮೂಲಕ ಮುಗ್ಧ ಜನರನ್ನು ಆಕರ್ಷಿಸುತ್ತಾರೆ. ಇವರುಗಳ ಜಾಹೀರಾತುಗಳನ್ನು ಕಂಡು ಆಕರ್ಷಣೆಗೊಳಗಾಗಿ ಅದಕ್ಕೆ ಪ್ರತಿಕ್ರಿಯಿಸಿದ ಜನರಿಗೆ ಮತ್ತದೇ ರೀತಿಯಲ್ಲಿ ಯೋಧನ ವಸ್ತ್ರ ಧರಿಸಿರುವ ಅನಾಮಧೇಯ ವ್ಯಕ್ತಿಯೋರ್ವನ ಭಾವಚಿತ್ರವನ್ನು ಕಳುಹಿಸಿ ಇದು ನಾನೇ ಎಂದು ಹೇಳುವುದರ ಮೂಲಕ ಮೇಲೆ ಹೇಳಿರುವ ಹಾಗೆ ಮತ್ತದೇ ರೀತಿಯಲ್ಲಿ ಸುಳ್ಳಿನ ಸುರಿಮಳೆಯನ್ನು ಸುರಿಸುತ್ತ ವಂಚಿಸಲು ಮುಂದಾಗುತ್ತಾರೆ.
ವಂಚಕರಿದ್ದಾರೆ ಎಂದು ತಾವುಗಳು ಬಳಸುತ್ತಿರುವ ಸಾಮಾಜಿಕ ಜಾಲತಾಣದ ವೆಬ್ಸೈಟ್ಗಳನ್ನು ಬದಲಿಸುತ್ತಾ ಹೋದರೂ ವಂಚಕರು ತಮ್ಮನ್ನು ಬಿಡುವುದಿಲ್ಲ. ವಂಚಕರುಗಳು ಜನಸಾಮಾನ್ಯರಲ್ಲಿ ಒಬ್ಬರಾಗಿರುವ ಕಾರಣ ತಾವುಗಳು ಬದಲಾದಂತೆಲ್ಲ ಅವರುಗಳು ಸಹ ಬದಲಾಗುತ್ತಿರುತ್ತಾರೆ. ಈ ರೀತಿಯ ವಂಚಕರಿಗೆ ಸೈಬರ್ ಕ್ರೈಂ ಪೊಲೀಸರು ಕಡಿವಾಣ ಹಾಕಬಹುದು ಆದರೆ ಅದಕ್ಕಿಂತ ಮೊದಲು ಅನಾಮಧೇಯ ವ್ಯಕ್ತಿಯ ಸಂದೇಶಕ್ಕೆ ಪ್ರತಿಕ್ರಿಯಿಸದೆ ಹಾಗೂ ಆಕರ್ಷಣೆ ಮಾಡುವಂತಹ ಜಾಹೀರಾತುಗಳನ್ನು ಕಂಡು ಆಕರ್ಷಣೆಗೆ ಒಳಗಾಗದಂತೆ ತಮಗೆ ತಾವೇ ಕಡಿವಾಣ ಹಾಕಿಕೊಳ್ಳುವುದು ಉತ್ತಮ.
ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…
ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…
ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…
ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…