ಕುಂದಗೋಳ; ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶೌಚಾಲಯ ಸೌಲಭ್ಯಗಳಿಲ್ಲದೆ ಇಲ್ಲಿನ ವಿದ್ಯಾರ್ಥಿಗಳು ತ್ರೀವ ತೊಂದರೆ ಅನುಭವಿಸುತ್ತಿದ್ದಾರೆ.

ಸರಕಾರ ಸ್ವಚ್ಚತೆ ಹಾಗೂ ಶೌಚಾಲಯ ಬಳಸುವಂತೆ ಕುರಿತಾಗಿ ಹೇಳುವ ಮಾತುಗಳು ಕೇವಲ ಮಾತಿಗಷ್ಟೆ ಸೀಮಿತವಾಗಿದ್ದು, ಕೃತಿಯಲ್ಲಿ ಇಲ್ಲ ಎಂಬುದು ಕಾಲೇಜಿನಿ ಸ್ಥಿತಿಗತಿಗಳನ್ನು ಗಮನಿಸಿ ದಾಗಲೇ ಅರಿವಿಗೆ ಬರುತ್ತದೆ.

ಅದರಂತೆ ಯರಗುಪ್ಪಿ ಗ್ರಾಮದ ಪದವಿ ಪೂರ್ವ ಕಾಲೇಜಿನಲ್ಲಿ, ಶೌಚಾಲಯ ಕೊರತೆ ಒಂದು ವರ್ಷದಿಂದ ಪಾಳು ಬಿದ್ದಿದ್ದು ಕಾಲೇಜಿನ ವಿದ್ಯಾರ್ಥಿಗಳಿಗೆ ಪರಿತೆಪ್ಪಸುವಂತ ಮಾಡಿದೆ. ಕಟ್ಟಡ ಒಳಾಂಗಣ ದಲ್ಲಿ ಸಿಂಕ್, ಸೀಟ್, ಪೈಪಲೈನ್ ಒಡೆದು ಚೂರು ಚೂರು ಬಿದ್ದಿದ್ದು, ದುಸ್ಥಿತಿಗೆ ಬಂದು ತಲುಪಿದೆ. ವಿದ್ಯಾರ್ಥಿಗಳು ಈ ಕಟ್ಟಡದ ದುಸ್ಥಿತಿ ಕಂಡು ಮೂತ್ರ ವಿಸರ್ಜನೆ ಪಕ್ಕದ ಜಮೀನಿಗೆ ತೆರಳುತ್ತಾದ್ದಾರೆ. ಇನ್ನೂ ಕಟ್ಟಡ ಎಲ್ಲಡೆ ಬಿರುಕು ಬಿಟ್ಟಿದು, ವಿದ್ಯಾರ್ಥಿಗಳಿಗೆ ನಡುಕು ಶುರುವಾಗಿದೆ.

ಈಗಾಗಲೇ ತಾಲೂಕಿನ ಪಂಚಾಯಿತಿ ಅನಿರ್ಬಂಧಿತ ಅನುದಾನದಡಿಯಲ್ಲಿ ಒಂದು ರೂಮ್, ಮತ್ತು ಒಂದು ಪ್ಯಾಸೇಜ್ ಟೈಲ್ಸ್ ಕಾಮಗಾರಿ ಪ್ರಗತಿಯಲ್ಲಿ ಇದೆ, ಆದರೆ ಮೂಲಭೂತ ಸೌಕರ್ಯದದಿಂದ ವಂಚಿತವಾದರು ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ಬಂದಿಲವ್ವಾ? ಅನ್ನೋದು ವಿದ್ಯಾರ್ಥಿಗಳ ವಾದ.

ಒಂದು ವರ್ಷದಿಂದಲೇ ಕುಡಿಯುಲು ನೀರು, ಶೌಚಾಲಯದ ಕೊರತೆ, ಕಟ್ಟಡದ ದುರಸ್ತಿ ಇದ್ದರು ಜನಪ್ರತಿನಿಧಿಗಳು ಆಗಲಿ ಅಧಿಕಾರಿಗಳ ತಂಡ ವಾಗಲಿ ಇದುವರೆಗೂ ತೆಲೆ ಕೂಡ ಹಾಕಿಲ್ಲ, ಈಗ ಇದ್ದ ಮೇಲೆ ಸರಕಾರದ ದುಡ್ಡು ಹೇಗೆ ನಿರ್ವಹಣೆ ವಾಗುತ್ತದೆ? ಅಥವಾ ಅಧಿಕಾರಿಗಳ ಜೇಬಿಗೆ ಸೇರುತ್ತಾ? ಅನ್ನುವುದು ವಿದ್ಯಾರ್ಥಿಗಳ ಯುಕ್ಷ ಪ್ರಶ್ನೆ. ಅಷ್ಟಕ್ಕೂ ಇವರು ಮಕ್ಕಳು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ.ಆದರೆ ಕೂಲಿ ಕಾರ್ಮಿಕರು ಮಕ್ಕಳು ಗ್ರಾಮೀಣ ಪ್ರದೇಶದಲ್ಲಿ ಓದಬೇಕಾದ ಅನಿವಾರ್ಯತೆ ಯಲ್ಲಿ ಇಂತಹ ಸಮಸ್ಯೆಗಳಿಗೆ ಸಿಲುಕಿ ಓದ್ದಾಡುವ ಪರಿಸ್ಥಿತಿ ನೋಡದೆ ಮೇಲೆ ಇವರುಗಳು ಗೊತ್ತಾಗದು.

ಸ್ಥಿತಿಗತಿ ಅರ್ಥ ಮಾಡಿಕೊಳ್ಳಲಾಗಿದೆ ಇವರುಗಳು ಕಛೇರಿಗೆ ಸೀಮಿತವಾದರ? ಕೂಡಲೇ ಪರಿಶೀಲಿಸಿ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ.

ವರದಿ; ಶಾನು ಯಲಿಗಾರ

error: Content is protected !!