ಬೆಂಗಳೂರು: ರಾಜ್ಯ ರಾಜಧಾನಿಯ ಆನೇಕಲ್ ತಾಲೂಕಿನ ಚೌಡದೇನಹಳ್ಳಿಯಲ್ಲಿ ಪತಿಯೇ ಪತ್ನಿಯ ಪ್ರಾಣ ಪಡೆದ ಘಟನೆ ಬೆಳಕಿಗೆ ಬಂದಿದೆ. ಮಂಜುಳಾ (40) ಎಂಬ ಮಹಿಳೆ ಕೊಲೆಯಾಗಿದ್ದು, ಈ ಕೃತ್ಯಕ್ಕೆ ಪತಿ ಮಂಜುನಾಥ್ (45) ಹೊಣೆಯಾಗಿದ್ದಾರೆ.
ಪತಿ-ಪತ್ನಿಯ ಜಗಳ ಕೊಲೆಯಲ್ಲಿ ಅಂತ್ಯ
ಮಂಜುಳಾ ಮಾನಸಿಕ ಅಸ್ವಸ್ಥರಾಗಿದ್ದು, ಈ ಕಾರಣದಿಂದ ಪತಿ ಮಂಜುನಾಥ್ ಕೂಡ ಖಿನ್ನತೆಗೆ ಒಳಗಾಗಿದ್ದರು. ದಾಂಪತ್ಯ ಜೀವನದಲ್ಲಿ ಒಪ್ಪಂದದ ಕೊರತೆಯಿಂದ ಅವರಿಬ್ಬರ ನಡುವೆ ನಿರಂತರ ವಾಗ್ವಾದಗಳು ನಡೆಯುತ್ತಿದ್ದವು. ನಿನ್ನೆ ಅವರಿಬ್ಬರ ಮಧ್ಯೆ ಸಣ್ಣ ಕಾರಣಕ್ಕೆ ಜಗಳ ಆರಂಭವಾಗಿ, ಮಾತಿಗೆ ಮಾತು ಬೆಳೆದಂತೆ ಪತಿ ಕೋಪಕ್ಕೆ ಒಳಗಾದರು.
ನಿರ್ಮಾಣ ಹಂತದ ಕಟ್ಟಡದಲ್ಲಿ ಭೀಕರ ಕೃತ್ಯ
ಜಗಳ ತಾರಕಕ್ಕೇರಿದ ಸಂದರ್ಭದಲ್ಲಿ, ಪತಿ ಮಂಜುನಾಥ್ ಕೋಪಕ್ಕೆ ಒಳಗಾಗಿ ಪತ್ನಿಯನ್ನು ಭುಜದ ಮೇಲೆ ಎಳೆದುಕೊಂಡು ಹೋಗಿ, ಹತ್ತಿರದಲ್ಲಿದ್ದ ನಿರ್ಮಾಣ ಹಂತದ ಕಟ್ಟಡದ ಎರಡನೇ ಮಹಡಿಯಿಂದ ಕೆಳಕ್ಕೆ ತಳ್ಳಿದರು. ಆಘಾತಕರ ರೀತಿಯಲ್ಲಿ ನೆಲಕ್ಕೆ ಬಿದ್ದ ಮಂಜುಳಾ ತಲೆಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅಸ್ವಸ್ಥರಾದರು. ಕುಟುಂಬಸ್ಥರು ಹಾಗೂ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರು, ಆದರೆ ಮಾರ್ಗಮಧ್ಯೆಯೇ ಅವರ ಪ್ರಾಣಪಕ್ಷಿಹಾರಿಹೋಯಿತು.
ಪೊಲೀಸರು ಸ್ಥಳಕ್ಕೆ ಧಾವನೆ
ಘಟನೆಯ ಮಾಹಿತಿ ದೊರಕುತ್ತಿದ್ದಂತೆ, ಸರ್ಜಾಪುರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಪತಿ ಮಂಜುನಾಥ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಆರಂಭಿಸಲಾಗಿದೆ. ಈ ದಾರುಣ ಘಟನೆಯು ಸ್ಥಳೀಯರಲ್ಲಿ ತೀವ್ರ ಆಘಾತ ಉಂಟುಮಾಡಿದೆ.
ಭಟ್ಕಳ ತಾಲ್ಲೂಕಿನ ಶಿರಾಲಿ ಗ್ರಾಮದ ಕೇಶವಮೂರ್ತಿ ಹಿತ್ಲು ಪ್ರದೇಶದಲ್ಲಿ ಮಾಚ್ 15ರ ರಾತ್ರಿ ಅಕ್ರಮ ಜೂಜಾಟ ನಡೆಯುತ್ತಿದ್ದ ಸ್ಥಳದಲ್ಲಿ ಭಟ್ಕಳ…
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಟಿ. ಕಾಗೇಪುರ ಗ್ರಾಮದಲ್ಲಿ ಗೋಕುಲ ವಿದ್ಯಾಸಂಸ್ಥೆಯ ಹಾಸ್ಟೆಲ್‌ನಲ್ಲಿ ಭೋಜನ ಸೇವಿಸಿದ 30 ವಿದ್ಯಾರ್ಥಿಗಳು ಫುಡ್…
ರಷ್ಯಾದ ಸರ್ಕಸ್ ಆನೆಯೊಂದು ತನ್ನ 25 ವರ್ಷಗಳ ಸಹಚರನ ಅಗಲಿಕೆಗೆ ಮರುಗಿದ ಭಾವನಾತ್ಮಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮ್ಯಾಗ್ಡಾ…
ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಡ್ರಗ್ಸ್ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದು, ಈ ಪ್ರಕರಣದಲ್ಲಿ ದಕ್ಷಿಣ ಆಫ್ರಿಕಾ ಮೂಲದ ಇಬ್ಬರು…
ಪಾಕಿಸ್ತಾನದ ಕ್ವೆಟ್ಟಾದಿಂದ ತಫ್ತಾನ್‌ಗೆ ತೆರಳುತ್ತಿದ್ದ ಭದ್ರತಾ ಪಡೆಗಳ ವಾಹನಗಳ ಮೇಲೆ ಭಾನುವಾರ ಭೀಕರ ದಾಳಿ ನಡೆದಿದ್ದು, 90 ಸೈನಿಕರು ಮೃತಪಟ್ಟಿದ್ದಾರೆ…
ಅಮೆರಿಕಾ ಮತ್ತು ಇರಾಕ್ ಸೇನೆಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ISIS ಉನ್ನತ ನಾಯಕ ಅಬು ಖದಿಜಾ ವಧೆಯಾಗಿರುವುದು ದೃಢಪಟ್ಟಿದೆ. ಅಮೆರಿಕಾ…