
ಪಾಕಿಸ್ತಾನ ಕ್ರಿಕೆಟಿಗ ರಜಾ ಹಸನ್ ಭಾರತ ಮೂಲದ ಹಿಂದೂ ಯುವತಿ ಪೂಜಾ ಬೊಮನ್ ಜೊತೆ ನ್ಯೂಯಾರ್ಕ್‌ನಲ್ಲಿ ಸೆಟಲ್ ಆಗಿದ್ದು, ಇವರ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ರಜಾ ಹಸನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೂಜಾ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು, ತಮ್ಮಿಬ್ಬರ ಪ್ರೀತಿಯ ಕುರಿತ ಸಂತೋಷ ಹಂಚಿಕೊಂಡಿದ್ದಾರೆ.
ಪೂಜಾ ಬೊಮನ್ ಇಸ್ಲಾಂಗೆ ಮತಾಂತರ?
ವರದಿಗಳ ಪ್ರಕಾರ, ಪೂಜಾ ಬೊಮನ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಒಪ್ಪಿಕೊಂಡಿದ್ದಾಳೆ. 2024ರಲ್ಲಿ, ರಜಾ ಹಸನ್ ಮತ್ತು ಪೂಜಾ ಅವರ ನಿಶ್ಚಿತಾರ್ಥದ ಸುದ್ದಿ ಬಹಿರಂಗವಾಗಿತ್ತು. ನ್ಯೂಯಾರ್ಕ್‌ನಲ್ಲಿ ಅವರಿಬ್ಬರ ಪ್ರೇಮಾಂಕುರ ಹುಟ್ಟಿಕೊಂಡಿದ್ದು, ಇದೀಗ ಇಬ್ಬರೂ ಅಲ್ಲಿಯೇ ನೆಲೆಸಿದ್ದಾರೆ.
“ಇಂದು ನಾನು ಪೂಜಾ ಜೊತೆ ಎಂಗೇಜ್ ಆಗಿದ್ದೇನೆ. ನಾನು ನನ್ನ ಜೀವನದ ಪ್ರೀತಿಯನ್ನು ಎಂದೆಂದಿಗೂ ನನ್ನದಾಗಿರಬೇಕೆಂದು ಕೇಳಿದೆ, ಮತ್ತು ಅವಳು ಹೌದು ಎಂದು ಹೇಳಿದಳು! ಒಟ್ಟಿಗೆ ನಮ್ಮ ಪ್ರಯಾಣಕ್ಕಾಗಿ ಉತ್ಸುಕನಾಗಿದ್ದೇನೆ” ಎಂದು ರಜಾ ಹಸನ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು.
ರಜಾ ಹಸನ್ ಕ್ರಿಕೆಟ್ ವೃತ್ತಿಜೀವನ
2012ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಪಾಕಿಸ್ತಾನದ ಪರ ಅಖಾಡಕ್ಕಿಳಿದ ರಜಾ ಹಸನ್, 2014ರಲ್ಲಿ ಏಕದಿನ ಪಂದ್ಯವೊಂದರಲ್ಲೂ ಆಡಿದ್ದಾರೆ. ಅಲ್ಪಾವಧಿಯ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಅವರು ಒಟ್ಟು 10 ಟಿ20 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಮತ್ತು ಒಬ್ಬೇ ಒಂದು ಏಕದಿನ ಪಂದ್ಯದಲ್ಲಿ ಒಂದು ವಿಕೆಟ್ ಪಡೆದಿದ್ದಾರೆ. ನಂತರ ಅವರು ಪಾಕಿಸ್ತಾನ ತಂಡದಿಂದ ದೂರ ಉಳಿದಿದ್ದಾರೆ.
ಪಾಕ್ ಯುವಕರನ್ನು ಮದುವೆಯಾದ ಭಾರತೀಯರು
ಇದಕ್ಕೂ ಮೊದಲು, ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ 2010ರಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲೀಕ್ ಅವರನ್ನು ಮದುವೆಯಾಗಿದ್ದರು. ಆದರೆ 2024ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಸಿನ್ ಖಾನ್, ಭಾರತದ ನಟಿ ರೀನಾ ರಾಯ್ ಅವರನ್ನು ಮದುವೆಯಾಗಿದ್ದು, 1990ರಲ್ಲಿ ಇಬ್ಬರೂ ಬೇರ್ಪಟ್ಟರು. ಪಾಕ್ ಕ್ರಿಕೆಟಿಗ ಹಸನ್ ಅಲಿ ಸಹ 2019ರಲ್ಲಿ ಭಾರತ ಮೂಲದ ಸಮಿಯಾ ಅರ್ಜೂ ಅವರನ್ನು ಮದುವೆಯಾಗಿದ್ದರು.
ರಜಾ ಹಸನ್ ಮತ್ತು ಪೂಜಾ ಬೊಮನ್ ಅವರ ಸಂಬಂಧದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ, ಮತ್ತು ಅವರ ವೈವಾಹಿಕ ಜೀವನ ಹೇಗಿರಲಿದೆ ಎಂಬ ಕುತೂಹಲವೂ ವ್ಯಕ್ತವಾಗುತ್ತಿದೆ.
View this post on Instagram