ಮಹಾರಾಷ್ಟ್ರದ ಥಾಣೆಯ ಕ್ಯಾಡ್ಬರಿ ಬ್ರಿಡ್ಜ್ ಫ್ಲೈಓವರ್‌ನಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಡಂಪರ್ ಟ್ರಕ್, ಟ್ರೈಲರ್ ಮತ್ತು ಟೆಂಪೊ ನಡುವೆ ಸಿಲುಕಿ ಟಾಟಾ ಪಂಚ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಅಪಘಾತದಲ್ಲಿ ಒಟ್ಟು ಆರು ಜನರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್, ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ.
ಟಾಟಾ ಪಂಚ್ ಕಾರಿನ ಭದ್ರತೆ ಮತ್ತೊಮ್ಮೆ ಸಾಬೀತು!
ಟಾಟಾ ಕಂಪನಿಯ ಕಾರುಗಳು ಸುರಕ್ಷತೆಯ ದೃಷ್ಟಿಯಿಂದ ಜನಪ್ರಿಯವಾಗಿದ್ದು, ಈ ಅಪಘಾತದಲ್ಲಿ ಕಾರಿನಲ್ಲಿದ್ದ ದಂಪತಿ ಮತ್ತು ಅವರ ಇಬ್ಬರು ಮಕ್ಕಳು ಪ್ರಾಣಪಾಯದಿಂದ ಪಾರಾಗಿರುವುದು ಇದಕ್ಕೆ ಮತ್ತೊಂದು ಉದಾಹರಣೆ. ಅಪಘಾತದ ಬಳಿಕ ಕಾರಿನ ಸ್ಥಿತಿ ನೋಡಿದರೆ, ಅದರಲ್ಲಿದ್ದವರು ಬದುಕಿದ್ದಾರೆ ಎಂಬುದನ್ನು ನಂಬಲು ಕಷ್ಟಸಾಧ್ಯ. ಆದರೆ, ಟಾಟಾ ಪಂಚ್‌ನ ಭದ್ರತಾ ವೈಶಿಷ್ಟ್ಯಗಳ ಪರಿಣಾಮ, ಕಾರಿನಲ್ಲಿದ್ದವರು ಕೇವಲ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಅಪಘಾತದ ಮೂಲ ಕಾರಣ
ವರದಿಗಳ ಪ್ರಕಾರ, ಸೇತುವೆಯ ಇಳಿಜಾರಿನಲ್ಲಿ ಮುನ್ನಡೆಯುತ್ತಿದ್ದ ಟ್ರೈಲರ್ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಈ ಸರಣಿ ಅಪಘಾತ ನಡೆದಿದೆ. ಟಾಟಾ ಪಂಚ್ ಕೂಡ ತಕ್ಷಣ ಬ್ರೇಕ್ ಹಾಕಿದರೂ, ಅತಿದೊಡ್ಡ ವಾಹನವಾಗಿರುವ ಟ್ರೈಲರ್‌ನ ಅಡಿಯಲ್ಲಿ ಸಿಲುಕುವ ಪರಿಸ್ಥಿತಿ ನಿರ್ಮಾಣವಾಯಿತು. ಈ ವೇಳೆ ಟೆಂಪೊ ಹಿಂದಿನಿಂದ ಬಂದು ಟಾಟಾ ಪಂಚ್‌ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಿಂದ ಮುಕ್ತಾಗುವ ಮೊದಲೇ, ಮತ್ತೊಂದು ಡಂಪರ್ ಟ್ರಕ್ ಟೆಂಪೊಗೆ ಡಿಕ್ಕಿ ಹೊಡೆದು ಅಪಘಾತ ಇನ್ನಷ್ಟು ಗಂಭೀರವಾಗಿ ತಿರುವು ಪಡೆದಿತು.
ಬದುಕು-ಸಾವು ನಡುವಿನ ಕ್ಷಣಗಳು
ಟಾಟಾ ಪಂಚ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಮತ್ತು ಅವರ ಮಕ್ಕಳು ಅಪಘಾತದಲ್ಲಿ ಸಿಲುಕಿಕೊಂಡಿದ್ದರು. ಕಾರು ಸಂಪೂರ್ಣವಾಗಿ ಹಾನಿಯಾಗಿದ್ದರೂ, ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಹೈಡ್ರಾಲಿಕ್ ಉಪಕರಣಗಳ ಸಹಾಯದಿಂದ ಅವರನ್ನು ಸುರಕ್ಷಿತವಾಗಿ ಹೊರತೆಗೆದರು. ಟೆಂಪೊದಲ್ಲಿದ್ದ ಮತ್ತಿಬ್ಬರೂ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಾಟಾ ಪಂಚ್: ಸುರಕ್ಷಿತ ಕಾರಿನ ಮತ್ತೊಂದು ನಿದರ್ಶನ
ಟಾಟಾ ಪಂಚ್ ಕಾರು ಬೆಲೆ ರೂ.6 ಲಕ್ಷದಿಂದ ಪ್ರಾರಂಭವಾಗುತ್ತಿದ್ದು, ಟಾಪ್ ಮಾದರಿಯ ಬೆಲೆಯು ರೂ.10.32 ಲಕ್ಷ (ಎಕ್ಸ್-ಶೋರೂಂ) ಆಗಿದೆ. 38 ವಿಭಿನ್ನ ವೇರಿಯೆಂಟ್‌ಗಳು ಲಭ್ಯವಿದ್ದು, ಇದು ಹ್ಯಾಚ್‌ಬ್ಯಾಕ್ ಗಾತ್ರದಲ್ಲಿ ಎಸ್‌ಯುವಿಯ ಅನುಭವ ನೀಡುವ ಯೋಗ್ಯವಾದ ಕಾರು.
ಸುರಕ್ಷತೆಯ ದೃಷ್ಟಿಯಿಂದ, ಟಾಟಾ ಪಂಚ್ ಕಾರು ಡ್ಯುಯಲ್ ಏರ್ ಬ್ಯಾಗ್‌ಗಳು, ಎಬಿಎಸ್, ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್‌ಗಳು, ಹಿಲ್ ಹೋಲ್ಡ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ (ESP), ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು, ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ (CSC), ಟೈರ್ ಪ್ರೆಶರ್ ವಾರ್ನಿಂಗ್ ಸಿಸ್ಟಮ್ ಮುಂತಾದ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
187mm ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ, ಟಾಟಾ ಪಂಚ್ ಒಂದು ಸಣ್ಣ ಎಸ್‌ಯುವಿ ಆಗಿದ್ದರೂ, ಹಿಮ್ಮುಖ ಪಾರ್ಕಿಂಗ್ ಕ್ಯಾಮೆರಾ, ರೇನ್ ಸೆನ್ಸಿಂಗ್ ವೈಪರ್‌ಗಳು ಮತ್ತು ಡಿಫೋಗರ್‌ಗಳಂತಹ ಲಕ್ಸುರಿ ವೈಶಿಷ್ಟ್ಯಗಳನ್ನೂ ಒಳಗೊಂಡಿದೆ.
ಲಂಡನ್‌ನ 22 ವರ್ಷದ ವಿದ್ಯಾರ್ಥಿನಿ ತನ್ನ ಕನ್ಯತ್ವವನ್ನು ಆನ್‌ಲೈನ್ ಹರಾಜಿನಲ್ಲಿ ಮಾರಾಟ ಮಾಡಿ, ಹಾಲಿವುಡ್ ನಟನಿಂದ 18 ಕೋಟಿ ರೂಪಾಯಿಗೆ…
ಬೇಸಿಗೆ ಆರಂಭವಾದ್ದರಿಂದ ಹಾವುಗಳು ತಮ್ಮ ಹುತ್ತಗಳನ್ನು ತೊರೆದು ತಂಪು ಪ್ರದೇಶಗಳತ್ತ ಸಾಗುತ್ತವೆ. ಇತ್ತೀಚೆಗೆ, ಒಂದು ಇಂತಹ ಘಟನೆ ಮನರಂಜನೆಯ ಜೊತೆಗೆ…
ಸತ್ಯ ಎಂದರೆ ಬೂದಿ ಮುಚ್ಚಿದ ಕೆಂಡದಂತೆ, ಸುಳ್ಳಿನ ಪರದೆ ಸರಿದರೆ ಅದೊಂದು ದಿನ ಹೊರಬರುತ್ತದೆ ಎನ್ನುವ ಮಾತಿಗೆ ತೆಲಂಗಾಣದ ನಲ್ಗೊಂಡದಲ್ಲಿ…
ಡೊಮಿನಿಕನ್ ಗಣರಾಜ್ಯದಲ್ಲಿ ಬೇಸಿಗೆ ರಜೆ ಕಳೆದ ವೇಳೆ ನಿಗೂಢವಾಗಿ ಕಾಣೆಯಾಗಿದ್ದ 20 ವರ್ಷದ ಭಾರತೀಯ ಮೂಲದ ಅಮೆರಿಕನ್ ವಿದ್ಯಾರ್ಥಿನಿ ಸುದೀಕ್ಷಾ…
ನಾಲ್ಕು ವರ್ಷಗಳ ಹಿಂದೆ ಅಮೆರಿಕ (USA) ತೊರೆದು ಭಾರತ (India) ಗೆ ಸ್ಥಳಾಂತರಗೊಂಡ ಕ್ರಿಸ್ಟನ್ ಫಿಷರ್, ಈಗ ಭಾರತದ ಸಂಸ್ಕೃತಿ,…
ಮಾಜಿ ಸಂಸದ ಡಿ.ಕೆ. ಸುರೇಶ್ ಹೆಸರು ಬಳಸಿ ಜ್ಯುವೆಲ್ಲರಿ ಶಾಪ್ ಮಾಲಕರು ಹಾಗೂ ಉದ್ಯಮಿಗಳನ್ನು ವಂಚಿಸಿದ್ದ ಐಶ್ವರ್ಯಗೌಡ ಪ್ರಕರಣದಲ್ಲಿ ಹೊಸ…