Crime

ಟಿ.ಬೇಗೂರು ಗ್ರಾಮದಲ್ಲಿ 20 ಸಾವಿರ ಲಂಚ ಸ್ವೀಕರಿಸುತ್ತಿದ್ದ ಪಿಡಿಒ ಲೋಕಾಯುಕ್ತ ಬಲೆಗೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಟಿ.ಬೇಗೂರು ಗ್ರಾಮದಲ್ಲಿ 20 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಶೋಭಾರಾಣಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.

ತೊರೆಕೆಂಪೋಹಳ್ಳಿ ಗ್ರಾಮದ ರಮೇಶ್ ತಮ್ಮ ನಿವೇಶನವನ್ನು ಪತ್ನಿ ಹೆಸರಿಗೆ ಖಾತಾ ಬದಲಾಯಿಸಲು ಟಿ.ಬೇಗೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಖಾತೆ ಬದಲಾಯಿಸಲು ಪಿಡಿಒ ಶೋಭಾರಾಣಿ ಮಧ್ಯವರ್ತಿ ರುದ್ರಪ್ಪ ಮೂಲಕ 20 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ಲಂಚದ ಹಣವನ್ನು ಹಸ್ತಾಂತರಿಸುವಂತೆ ರುದ್ರಪ್ಪ, ರಮೇಶ್ ಅವರನ್ನು ಗ್ರಾಮ ಪಂಚಾಯಿತಿ ಕಚೇರಿಗೆ ಕರೆಸಿದ್ದರು. ಈ ವೇಳೆ ರಮೇಶ್ ಮೂಲಕ ಲಂಚದ ಹಣ ಪಡೆಯುತ್ತಿದ್ದ ಪಿಡಿಓ ಶೋಭಾರಾಣಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶೋಭಾರಾಣಿಯನ್ನು ವಶಕ್ಕೆ ಪಡೆದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಗ್ರಾಮಸ್ಥರಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದ್ದು, ಲೋಕಾಯುಕ್ತರ ತಕ್ಷಣದ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

nazeer ahamad

Recent Posts

ಕಳಸ ಪೊಲೀಸರು ಬಿಚ್ಚಿಟ್ಟ ಮನೆ ಕಳ್ಳತನ ರಹಸ್ಯ: ಮೂವರು ಆರೋಪಿಗಳ ಬಂಧನ

ಕಳಸ ಠಾಣೆಯ ಪೊಲೀಸರು ಎಡದಾಳು ಬೋವಿಪಾಲ್ ಪ್ರದೇಶದಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಬಿಚ್ಚಿಟ್ಟಿದ್ದು, ಇದರಲ್ಲಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ…

10 hours ago

ಪ್ಯಾಕೇಜಿಂಗ್ ಕಾರ್ಖಾನೆಯಲ್ಲಿ ದುರ್ಘಟನೆ: ಬಾಲಕಾರ್ಮಿಕನ ಕೈ ಸಿಲುಕಿ ಗಂಭೀರ ಗಾಯ, ಮಾಲೀಕ ಎಸ್ಕೇಪ್

ಬೆಂಗಳೂರು ಹೊರವಲಯದ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿರುವ ಸಾಯಿ ಪ್ಯಾಕೇಜಿಂಗ್ ಕಾರ್ಖಾನೆಯಲ್ಲಿ ಆಘಾತಕಾರಿ ಅವಘಡ ಸಂಭವಿಸಿದೆ. ಕೆಲಸ ನಿರ್ವಹಿಸುತ್ತಿದ್ದ ವೇಳೆ 17…

11 hours ago

ಡೆತ್ ನೋಟ್ ಬಿಚ್ಚಿಟ್ಟ ಸತ್ಯ: ಪಕ್ಕದ ಮನೆಯವರ ಕಿರುಕುಳದ ಬೆನ್ನಲ್ಲಿ ನಡೆದ ಆಘಾತಕಾರಿ ಆತ್ಮಹತ್ಯೆ!

ಗುಂಡ್ಲುಪೇಟೆ ತಾಲ್ಲೂಕಿನ ಚನ್ನಮಲ್ಲಿಪುರ ಗ್ರಾಮದಲ್ಲಿ ಪಕ್ಕದ ಮನೆಯವರ ಮಾನಸಿಕ ಕಿರುಕುಳದಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. 24…

11 hours ago

ಶಿಕ್ಷಕಿ ಮತ್ತು ಪತಿಯ ಮೇಲೆ ಹಲ್ಲೆ: ಪ್ರಾಂಶುಪಾಲರೊಂದಿಗೆ ಕಿಡಿಗೇಡಿಗಳ ರೋಮಾಂಚಕ ದಾಳಿ!

ಉತ್ತರ ಪ್ರದೇಶದ ಷಹಜಾನ್‌ಪುರದಲ್ಲಿ ಶಾಲಾ ಶಿಕ್ಷಕಿ ಮತ್ತು ಅವರ ಪತಿಯ ಮೇಲೆ ಕಿಡಿಗೇಡಿಗಳ ಗುಂಪೊಂದು ದಾಳಿ ನಡೆಸಿದ ಘಟನೆ ಭಾರಿ…

12 hours ago

ತಾಯಿ-ತಂದೆಯಿಂದ ಮಕ್ಕಳಿಗೆ ಕ್ರೂರ ಹಿಂಸೆ: ಪೋಲಿಸರಿಂದ ರಕ್ಷಣೆ

ಇತ್ತೀಚೆಗೆ ಬೆಳಗಾವಿಯ ಚಿಂಚೋಳಿ ಪ್ರದೇಶದಲ್ಲಿ ಒಂದು ಘಟನೆ ನಡೆದಿದೆ, ಎಲೋಸು ಮಲತಾಯಿ ತನ್ನ 4 ವರ್ಷದ ಮಗಳಿಗೆ ಭಾರೀ ಚಿತ್ರಹಿಂಸೆ…

13 hours ago

ವರದಕ್ಷಿಣೆ ಕಿರುಕುಳ ಮತ್ತು ಆರ್ಥಿಕ ಅನ್ಯಾಯ: ಖಾಸಗಿ ಬಸ್ ಮಾಲೀಕನ ವಿರುದ್ಧ ಪ್ರಕರಣ ದಾಖಲು

ಕನ್ಯಾನ ಬನಶಂಕರಿ ಪ್ರದೇಶದ ನಿವಾಸಿ ಹಾಗೂ ಖಾಸಗಿ ಬಸ್ ಮಾಲೀಕ ಶಿವಪ್ರಸಾದ್ ಅವರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಹೆಬ್ರಿ…

14 hours ago