ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಅಣೆಗೆರೆ ಗ್ರಾಮ ಪಂಚಾಯಿತಿಯ ಪಿಡಿಒ ಮಂಜುನಾಥ್ ಸರ್ಕಾರದ ಯೋಜನೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಾ ಕಾಮಗಾರಿ ಕಳಪೆ ಮಾಡಿಸಿ ಕಮಿಷನ್ ಹೊಡೆಯುತ್ತಿರುವ ಬಗ್ಗೆ ಆಡಿಯೋ ಒಂದು ಹೊರ ಬಿದ್ದಿದೆ.
ಆಡಿಯೋದಲ್ಲಿ ಪಿಡಿಒ ಮಂಜುನಾಥ್ ಬಿಜೆಪಿ ಕಾರ್ಯಕರ್ತ ರವಿಯ ಬಳಿ ಕಾಮಗಾರಿಗಳಲ್ಲಿ ಹಾಗೂ ಕೆಲವು ಯೋಜನೆಗಳಲ್ಲಿ ಹಣ ಹೊಡೆಯುವುದರ ಬಗ್ಗೆ ಚರ್ಚಿಸಿರುವುದು ಹಾಗೂ ಸದಸ್ಯರುಗಳಿಗೆ ಹಣ ಕೊಟ್ಟು ತಮ್ಮತ ಸೆಳೆಯಬೇಕೆಂಬುದರ ಬಗ್ಗೆ ಮಾತನಾಡಿರುವುದು ಕಂಡುಬಂದಿರುತ್ತದೆ.
ಹಾಗೂ ನಡೆಯುತ್ತಿರುವಂತಹ ಎಲ್ಲಾ ಅಕ್ರಮಗಳು ಸಹ ತಾಲೂಕು ಪಂಚಾಯಿತಿ ಇ ಒ ರವರಿಗೆ ತಿಳಿದಿದ್ದು ಅವರು ಸಹ ಇವರಿಗೆ ಬೆಂಬಲಿಸುತ್ತಿದ್ದಾರೆ ಎಂಬ ರೀತಿಯಲ್ಲಿ ಆಡಿಯೋದಲ್ಲಿ ಇದೆ.
ಕೆಲವು ತಿಂಗಳ ಹಿಂದೆ ಅಣೆಗೆರೆ ಗ್ರಾಮ ಪಂಚಾಯಿತಿಗೆ ನುಗ್ಗಿ ಡಾಟಾ ಎಂಟ್ರಿ ಆಪರೇಟರ್ ಚಂದ್ರಪ್ಪನಿಗೆ ಬಿಜೆಪಿ ಕಾರ್ಯಕರ್ತ ರವಿ ಹೊಡೆದಿದ್ದರೂ ಸಹ ಪಿಡಿಒ ಯಾವುದೇ ರೀತಿಯ ದೂರನ್ನು ನೀಡದೆ ರವಿಯ ಪರವಾಗಿ ನಿಂತು ಪ್ರಕರಣವನ್ನು ಮುಚ್ಚಿ ಹಾಕಿದ್ದಾನೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಇವರಿಬ್ಬರೂ ಚರ್ಚಿಸುವಂತಹ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನರು ಪಿಡಿಓಗೆ ಚಿಮಾರಿ ಹಾಕುತ್ತಿದ್ದಾರೆ.
ಈ ಆಡಿಯೋದಲ್ಲಿ ಪಿಡಿಒ ಸದಸ್ಯರುಗಳನ್ನು ಹಣ ಕೊಟ್ಟು ತಮ್ಮತ ಸೆಳೆದುಕೊಳ್ಳೋಣ ಹಾಗೂ ಸರ್ಕಾರದ ಯಾವುದಾದರೂ ಯೋಜನೆಯಲ್ಲಿ ತಕ್ಕಮಟ್ಟಿಗೆ ಹಣ ಹೊಡೆಯುತ್ತೇನೆ ಅದರಲ್ಲಿ ಟ್ರಿಪ್ ಗೆ ಹೋಗೋಣ ಎಂದು ಸಹ ಹೇಳಿಕೊಂಡಿದ್ದಾನೆ.
ಕೆಲವು ದಿನಗಳಿಂದ ಈ ಆಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರು ಸಹ ತಾಲೂಕು ಪಂಚಾಯಿತಿ ಇಒ ಯಾವುದೇ ರೀತಿ ಪ್ರತಿಕ್ರಿಯೆ ನೀಡಿರುವುದಿಲ್ಲ.
ತಾಲೂಕು ಪಂಚಾಯಿತಿ ಇ ಒ ರವರು ಮೌನವಾಗಿ ಇರುವುದಕ್ಕೆ ಕಾರಣ ಏನು?
ಆಡಿಯೋದಲ್ಲಿ ಮಾತನಾಡಿಕೊಳ್ಳುವ ಹಾಗೆ ಇ ಒ ರವರು ಸಹ ಅವರ ಜೊತೆ ಏನಾದರೂ ಕೈ ಜೋಡಿಸಿದ್ದಾರಾ?
ಜಿಲ್ಲಾಡಳಿತ ಈ ಕೂಡಲೇ ಎಚ್ಚೆತ್ತು ಇಂಥವರ ವಿರುದ್ಧ ತನಿಖೆ ನಡೆಸಬೇಕು ಹಾಗೂ ರಾಜಾರೋಷವಾಗಿ ಭ್ರಷ್ಟಾಚಾರ ನಡೆಸುತ್ತಿರುವ ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗ ಬೇಕಿದೆ.