ಮುಂಡಗೋಡ: ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ (BPL ಕಾರ್ಡುದಾರರಿಗೆ)ಮತ್ತು ಅಂತ್ಯೋದಯ ಕಾರ್ಡುಗಳು ಇರುವ ಜನರಿಗೆ ಪ್ರತಿ ತಿಂಗಳು ಉಚಿತ ಪಡಿತರವನ್ನು ನೀಡುತ್ತಿದೆ ಆದರೆ ಈ ಪಡಿತರವನ್ನು ಪಡೆಯಲು ಎರಡ್ಮೂರು ದಿನಗಳ ಕಾಲ ಸರದಿಯಲ್ಲಿ ನಿಂತರೂ ಪಡಿತರ ದೊರೆಯುತ್ತಿಲ್ಲ ಹಾಗಾಗಿ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.ಇಲಾಖೆ ದಿನಕ್ಕೊಂದು ನಿಯಮಗಳನ್ನು ಜಾರಿಗೆ ತರುವುತ್ತಿರುವುದರಿಂದ ಈ ಸಮಸ್ಯೆ ಉಂಟಾಗುತ್ತಿದೆ.ಪಡಿತರವನ್ನು ಪಡೆಯಲು ಈ ಮೊದಲು ಕೇವಲ ಒಂದು OTP ಅಥವಾ ಒಂದು ಸಾರಿ ಹೆಬ್ಬೆಟ್ಟು ಗುರುತನ್ನು ಕೊಟ್ಟಿದ್ದರೆ ಸಾಕಿತ್ತು ಈಗ ಎರಡು ಬಾರಿ OTP ನೀಡಬೇಕಾಗಿದೆ..ಜೊತೆಗೆ ಈ OTP ಯನ್ನು ಹಾಕುತ್ತಿರುವಾಗ ಸರ್ವರ್ ಸಮಸ್ಯೆ ಕಾಡುತ್ತಿದೆ ಕೆಲವೊಂದು ಸಾರಿ ಸರ್ವರ್ ಹೋದರೆ ಗಂಟೆಗಟ್ಟಲೆ/ದಿನಗಟ್ಟಲೆ ಬರುವುದೇ ಇಲ್ಲಾ.

ಹಾಗಾಗಿ ದಿನಕ್ಕೆ 20 ರಿಂದ 25 ಜನರಿಗೆ ಮಾತ್ರ ಪಡಿತರ ಸಿಗುತ್ತಿದೆ.ಇಷ್ಟಾದರೂ ಸಂಬಂಧಿಸಿದ ಅಧಿಕಾರಿಗಳಾಗಲಿ, ಇಲಾಖೆಯವರಾಗಲಿ ಇದೂವರೆಗೂ ಸಮಸ್ಯೆಯನ್ನು ಬಗೆಹರಿಸುವ ಕೆಲಸವನ್ನು ಮಾಡದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಡಗೋಡ ತಾಲೂಕಿನ ಮೈನಳ್ಳಿ ಗ್ರಾಮದ ಪಡಿತರ ವಿತರಣಾ ಕೇಂದ್ರದಲ್ಲಿ ರಾತ್ರಿ 8 ಗಂಟೆಯಾದರೂ ಸುಮಾರು 300ಕ್ಕೂ ಹೆಚ್ಚು ಜನರು ಪಡಿತರ ಪಡೆಯಲು ಕಾಯುತ್ತಿದ್ದಾರೆ.ಇಂದು ತಿಂಗಳ ಕೊನೆಯ ದಿನಾಂಕ ವಾಗಿರುವುದರಿಂದ ನಾಳೆ ಪಡಿತರ ಸಿಗುತ್ತದೆಯೋ ಇಲ್ಲವೋ ಎಂಬ ಚಿಂತೆ ಜನರನ್ನು ಕಾಡುತ್ತಿದೆ.
ವರದಿ:ಮಂಜುನಾಥ ಹರಿಜನ.

error: Content is protected !!