ಹುಬ್ಬಳ್ಳಿಯ ಜನರು ಪ್ರತಿದಿನ ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುತ್ತಲೇ ಇದ್ದಾರೆ ಇಲ್ಲಿನ ಜನರಿಗೆ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ ಓಡಾಡಲು ಸರಿಯಾದ ರಸ್ತೆಗಳಂತೂ ಇಲ್ಲ ಇನ್ನು ಚರಂಡಿಯ ನೀರು ಚರಂಡಿಯಲ್ಲಿ ಹರಿದುಕೊಂಡು ಹೋಗದೆ ರಸ್ತೆಯ ಮೇಲೆ ಹರಿಯುತ್ತಿದೆ. ಹೌದು ಹುಬ್ಬಳ್ಳಿಯ ಪ್ರತಿಷ್ಠಿತ ಕೇಶ್ವಾಪೂರದ ರಮೇಶ ಭವನ ಮುಂಭಾಗದಲ್ಲಿ ರಸ್ತೆಯ ಮಧ್ಯಭಾಗದಲ್ಲಿರುವ ಚರಂಡಿಯ ನೀರು ಸರಿಯಾಗಿ ಚರಂಡಿಯಲ್ಲಿ ಹರಿದುಕೊಂಡು ಹೋಗದೆ ರಸ್ತೆಯ ಮೇಲೆ ಹರಿದುಕೊಂಡು ಹೋಗುತ್ತಿದೆ. ಇದರಿಂದ ಸ್ಥಳೀಯ ಪಾದಚಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ದುರ್ವಾಸನೆ ಬೀರುತ್ತಿದೆ, ಹೇಗಿದ್ದರೂ ಕೂಡ ಯಾವ ಒಬ್ಬ ಅಧಿಕಾರಿಯೂ ಇದರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಇನ್ನೂ ಇಲ್ಲಿನ ಜನರು ಇಂತಹ ಸಮಸ್ಯೆಗಳ ಬಗ್ಗೆ ಸಾಕಷ್ಟು ಬಾರಿ ಕಾರ್ಪೊರೇಟರ್ ಹಾಗೂ ಪಾಲಿಕೆಯ ಆಯುಕ್ತರಿಗೆ ಮಾಹಿತಿ ನೀಡಿದ್ದರೂ ಕೂಡ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಅಧಿಕಾರಿಗಳಿಗೆ ಇಡಿ ಶಾಪ ಹಾಕುತ್ತಿದ್ದಾರೆ.
ವರದಿ: ಶಿವ ಹುಬ್ಬಳ್ಳಿ