ಭ್ರಷ್ಟ ಅಧಿಕಾರಿಯ ವರ್ತನೆಗೆ ಬೇಸತ್ತ ಜನರು ಆತನ ಮೇಲೆ ಹಣದ ಸುರಿಮಳೆಯನ್ನೇ ಸುರಿಸಿದ ಘಟನೆ ಸಂಬಂಧಿಸಿದ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಘಟನೆ ಗುಜರಾತ್‌ನಲ್ಲಿ ನಡೆದಿದ್ದು, ಸರ್ಕಾರಿ ಕಚೇರಿಗೆ ನುಗ್ಗಿದ ಜನರು “ಎಷ್ಟು ಬೇಕೋ ಅಷ್ಟು ಹಣ ತೆಗೆದುಕೋ!” ಎಂದು ಹೇಳುತ್ತಾ ಅಧಿಕಾರಿಯ ಮೇಲೆ ನೋಟುಗಳ ಮಳೆಯನ್ನೇ ಸುರಿಸಿದರು.

ವೈರಲ್ ವಿಡಿಯೋದಲ್ಲಿ, ಕೆಲವರು ಕಚೇರಿಯೊಳಗೆ ನುಗ್ಗಿ ಘೋಷಣೆಗಳನ್ನು ಕೂಗುತ್ತಿದ್ದಾರೆ ಮತ್ತು ಕುತ್ತಿಗೆಗೆ ಫಲಕಗಳನ್ನು ನೇತುಹಾಕಿದ್ದಾರೆ. ಅಲ್ಲೊಬ್ಬ ಅಧಿಕಾರಿ ಕುರ್ಚಿಯ ಮೇಲೆ ಕೈ ಮಗ್ಗುಡಿಕೊಂಡು ಕುಳಿತಿದ್ದು, ಜನರು ಗುಜರಾತಿ ಭಾಷೆಯಲ್ಲಿ ಆತನ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ.

ಜನರು ತಮ್ಮೊಂದಿಗೆ ನೋಟುಗಳ ಕಟ್ಟುಗಳನ್ನು ತಂದು, ಅವುಗಳನ್ನು ಆ ಅಧಿಕಾರಿಯ ಮೇಲೆ ಎಸೆದು ಆಕ್ರೋಶ ವ್ಯಕ್ತಪಡಿಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಕಾಣಸಿಗುತ್ತವೆ. ಈ ದೃಶ್ಯಗಳು ಜನರ ಕೋಪ ಮತ್ತು ಆಕ್ರೋಶವನ್ನು ಸ್ಪಷ್ಟಪಡಿಸುತ್ತವೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಕಲಾಂ ಕಿ ಚೋಟ್ ಎಂಬ ಬಳಕೆದಾರರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ, ಇದು ಈಗ ವೈರಲ್ ಆಗಿದ್ದು ಹಲವರ ಗಮನ ಸೆಳೆದಿದೆ.

error: Content is protected !!