ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮೇಖಳಿ ಗ್ರಾಮ ಪಂಚಾಯತಿ ಯಲ್ಲಿ 30% ಪರ್ಸಂಟೇಜ್ ದಂಧೆ ನಡಿಯುತ್ತಿದು ಅಭಿವೃದ್ಧಿ ಅಧಿಕಾರಿ 10%, ಇಂಜಿನಿಯರ್ 10%, ತಾಲೂಕು ಪಂಚಾಯತ್ ಅಧಿಕಾರಿಗಳು 7%, ಟೆಕ್ನಿಕಲ್ 3% ಹೀಗೆ ಪಿಡಿಒ ಮಂಜುನಾಥ್ ದಳವಾಯಿ ನಿಂದ ಒಟ್ಟು 30% ಲಂಚದ ಬೇಡಿಕೆ ಇಡಲಾಗುತ್ತಿದೆ ಎಂದು ಗ್ರಾಮ ಪಂಚಾಯತ್ ಸದಸ್ಯರೊಬ್ಬರು ವಿಡಿಯೋ ಹಂಚಿಕೊಂಡು ತೀವ್ರವಾಗಿ ಖಂಡಿಸಿ ತಮ್ಮ ಸದಸ್ಯೆತ್ವಕ್ಕೆ ಸುಧಾ ಸಿದ್ದಪ್ಪ ರವರು ರಾಜೀನಾಮೆ ಸಲ್ಲಿಸಿದ್ದಾರೆ.
ಕಚೇರಿಯಲ್ಲಿ ಈ ರೀತಿಯಾದಂತಹ ಪರ್ಸೆಂಟೇಜ್ ದಂಧೆ ನಡೆಯುತ್ತಿದ್ದು 14ನೇ ಹಣಕಾಸು, 15ನೇ ಹಣಕಾಸು ಮತ್ತು ಉದ್ಯೋಗ ಖಾತ್ರಿ ಯೋಜನೆಯ ಅನುದಾನಗಳನ್ನು ಪಡೆಯಬೇಕಾದಲ್ಲಿ ಪರ್ಸೆಂಟ್ ಕೊಡಬೇಕೆಂದು ಕೇಳುತ್ತಿದ್ದಾರೆ ಈ ರೀತಿ ಕೊಡಲು ನನಗೆ ಸಾಧ್ಯವಿಲ್ಲ. ಒಟ್ಟಾರೆಯಾಗಿ 30% ಕಮಿಷನ್ ಕೇಳುತ್ತಿದ್ದು ಅದನ್ನು ನನ್ನಿಂದ ಕೊಡಲು ಸಾಧ್ಯವಿಲ್ಲ ಅದೇ ಕಾರಣಕ್ಕಾಗಿ ನಾನು ನನ್ನ ಸದಸ್ಯತ್ವಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ ಹಾಗೂ ಪೂರಕವಾದ ದಾಖಲೆಗಳು ಬೇಕಿದ್ದಲ್ಲಿ ನನ್ನ ಹತ್ತಿರ ವಿಡಿಯೋ ಹಾಗೂ ಆಡಿಯೋ ರೆಕಾರ್ಡ್ಗಳು ಲಭ್ಯವಿದ್ದು ಒದಗಿಸಲು ಸಿದ್ಧನಿದ್ದೇನೆ ಎಂದು ರಾಜಿನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.