ಕಲಬುರಗಿ: ನಗರದಲ್ಲಿ ಕೌಟುಂಬಿಕ ಕಲಹದಿಂದಾಗಿ ತನ್ನ 8 ತಿಂಗಳ ಮಗುವಿನೊಂದಿಗೆ 2 ವರ್ಷಗಳ ಹಿಂದೆ ಕಾಣೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ಶ್ರೀ ಡಾ.ವೈ.ಎಸ್.ರವಿಕುಮಾರ, ಪೊಲೀಸ ಆಯುಕ್ತರು ಹಾಗೂ ಶ್ರೀ ಅಡ್ಡೂರು ಶ್ರೀನಿವಾಸುಲು, ಉಪ ಪೊಲೀಸ ಆಯುಕ್ತರು, ಕಲಬುರಗಿ ನಗರ ಇವರ ಮಾರ್ಗದರ್ಶನದಲ್ಲಿ, ಕಾಣೆಯಾಗಿದ್ದ ಮಹಿಳೆ ಹಾಗೂ ಮಗುವನ್ನು ಪತ್ತೆ ಹಚ್ಚುವಲ್ಲಿ ಪಿ.ಎಸ್.ಐ ವಾಹಿದ ಕೋತ್ವಾಲ ಮತ್ತು ಅವರ ಸಿಬ್ಬಂದಿಯವರು ಯಶಸ್ವಿಯಾಗಿರುತ್ತಾರೆ. ಸದರಿ ಪತ್ತೆ ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಕ್ಕಾಗಿ ಮಾನ್ಯ ಪೊಲೀಸ ಆಯುಕ್ತರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ವರದಿ ನಾಗರಾಜ ಗೊಬ್ಬುರ