ಉತ್ತರಕನ್ನಡ ಜಿಲ್ಲೆಯಲ್ಲಿ ನಮಗೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಹಾಗೂ ಗ್ರಾಮಗಳಲ್ಲಿ ಸಾಕಷ್ಟು ದೇವಸ್ಥಾನಗಳಿವೆ .ನಾವೆಲ್ಲರೂ ಪುಣ್ಯ ಕ್ಷೇತ್ರಗಳಿಗೆ ತೆರಳುವುದು ನಮ್ಮ ಜೀವನದಲ್ಲಿ ಬರುವ ಸಮಸ್ಯೆಗೆ ಪರಿಹಾರ ನೀಡಲು ನೆಮ್ಮದಿಯಿಂದ ಜೀವನ ಸಾಗುವಂತೆ ಮಾಡು ಹೀಗೆ ಮುಂತಾದವುಗಳನ್ನು ಬೇಡಿಕೊಳ್ಳಲು ದೇವಸ್ಥಾನಕ್ಕೆ ಹೋಗುತ್ತೇವೆ .ಆದರೆ ಇದೊಂದು ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ನಡೆದಿದೆ. ದಿ: 18/11/2022 ರಂದು ಬೆಳಿಗ್ಗೆ ಮಂಚಿಕೆರಿಯಲ್ಲಿ ಮಹಗಜಲಕ್ಷ್ಮೀ ದೇವಸ್ಥಾನದ ಬೀಗವನ್ನು ಮುರಿದು ಯಾರೋ ಕಳ್ಳರು ಒಳಗಿರುವ ಮೂರು ಸಾವಿರ ಕಾಣಿಕೆ ಹಣ ಹಾಗೂ ದೇವರಿಗೆ ಉಪಯೋಗಿಸುವ ಸುಮಾರು ಹತ್ತು ಸಾವಿರ ಬೆಲೆ ಬಾಳುವ ಹಿತ್ತಾಳೆ ಗಂಟೆ ಮತ್ತು ಇಪ್ಪತ್ತು ಸಾವಿರ ಬೆಲೆ ಬಾಳುವ ತಾಮ್ರದ ಕಡಾಯಿ ಹಾಗೂ ಡಿವಿಆರ್. ನನ್ನ ಕದ್ದು ಪರಾರಿಯಾಗಿದ್ದರು . ದೀ 19/11/2022 ರಂದು ಶ್ರೀ ಗಣೇಶ ತಂದೆ ನಾಗೇಶ ಭಂಡಾರ್ಕರ್ ಹತ್ತಿರವಿರುವ ಯಲ್ಲಾಪುರ ಪೋಲೀಸ್ ಠಾಣೆಗೆ ಬೇಟಿ ನೀಡಿ ದೂರನ್ನು ದಾಖಲಿಸಿದ್ದರು. ಇಂತಹದೇ ಇನ್ನೊಂದು ಘಟನೆ ಅದೇ ದಿನ 18/11/2022 ಯಲ್ಲಾಪುರ ತಾಲೂಕುನ ಗುಳ್ಳಪುರದಲ್ಲಿ ನಡೆದಿದೆ ಶಿವವ್ಯಾಘ್ರೆಶ್ವರ ದೇವಸ್ಥಾನದ ಬೀಗವನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಮೀಟಿ ಮುರಿದು ಒಳಗೆ ನುಗ್ಗಿ ಅಲ್ಲಿ ಇರುವ 13500 ಬೆಲೆ ಬಾಳುವ ದೇವರ ಸಾಮಗ್ರಿ ಕಳ್ಳತನ ವಾಗಿರುವ ಬಗ್ಗೆ ಶ್ರೀ ನಾರಾಯಣ ತಂದೆ ಸೀತಾರಾಮ ಭಟ್ ರವರು ಯಲ್ಲಾಪುರ ಪೋಲಿಸ್ ಠಾಣೆಗೆ ತೆರಳಿ ದೂರು ನೀಡಿದ್ದರು.
ಈ ಎರಡು ಘಟನೆಯ ದೂರನ್ನು ತೆಗದುಕೊಂಡು ಶ್ರೀ ವಿಷ್ಣುವರ್ಧನ್ ಐ ಪೀ ಎಸ್ ಮಾನ್ಯ ಪೋಲಿಸ್ ಅದಿಕ್ಷಕರು ಅವರ ಸಲಹೆ ಸೂಚನೆಗಳ ಮೇರೆಗೆ ಆರೋಪಿಗಳಾದ 1)ವಸಂತ ಕುಮಾರ್ ತಂದೆ ಶಿವಪ್ಪ ತಂಬಕದ 40 2) ಸಲಿಮ್ ತಂದೆ ಜಮಲಸಾಬ ವರ್ಷ 28 ಇವರು ಇದು ವರೆಗೆ 18 ದೇವಸ್ಥಾನಗಳ ಕಳ್ಳತನ ಮಾಡಿದ್ದು ಕೃತ್ಯಕ್ಕೆ ಬಳಸಿದ ಮಾರುತಿ ನೆಕ್ಸಾ ಕಂಪನಿಯ ಕಾರು ಹಾಗೂ ಬಜಾಜ್ ಪ್ಲಾಟಿನಂ ದ್ವಿಚಕ್ರ ವಾಹನ ದೇವರ ಒಡವೆ ಬೆಳ್ಳಿ ಹಿತ್ತಾಳೆ ಪಾತ್ರೆಗಳು ಒಟ್ಟು 19,20, 285 ಬೆಲೆಯ ಸಾಮಗ್ರಿಗಳನ್ನು ಜಪ್ತು ಪಡಿಸಿಕೊಂಡಿರುತ್ತಾರೆ.
ಶ್ರೀ ವಿಷ್ಣುವರ್ಧನ್ ಐಪಿಎಸ್ ಮಾನ್ಯ ಪೋಲಿಸ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ ಕಾರವಾರ .ಶ್ರೀ ಸಿಟಿ ಜಯಕುಮಾರ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಾರವಾರ ಶ್ರೀ ರವಿ ಡಿ ನಾಯ್ಕ ಮಾನ್ಯ ಪೋಲೀಸ್ ಉಪಆದಿಕ್ಷಕರು ಶಿರಸಿ ಉಪವಿಭಾಗ ಇವರ ಮಾರ್ಗರ್ಶನದಲ್ಲಿ ಶ್ರೀ ಸುರೇಶ ಯಳ್ಳೂರು ಸಿಪಿಐ ಯಲ್ಲಾಪುರ ಪೀ ಎಸ್ ಐ ಶ್ರೀ ಮಂಜುನಾಥ ಗೌಡರ ಅಮಿನಸಬ ಅತ್ತಾರ್ ಶ್ಯಾಮ ಪವಸ್ಕರ್ ಹಾಗೂ ಸಿಬ್ಬಂದಿ ವರ್ಗದವರು ಸೇರಿ ಆರೋಪಿಗಳ ಹೆಡೆಮುರಿಕಟ್ಟಿ ಕಾನೂನು ಕ್ರಮ ಜರುಗಿಸಿದ್ದಾರೆ.
ವರದಿ: ಶ್ರೀಪಾದ್ ಎಸ್ ಏಚ್
ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…
ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…
ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…
ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…